ಉದ್ದ ಕಾಲುಗಳ ಅಪರೂಪದ ಹಲ್ಲಿ ನೋಡಿದ್ದಿರಾ?

ಇದನ್ನು ಮಾನಿಟರ್ ಲಿಜಾರ್ಡ್(Monitor Lizard) ಎಂದು ವನ್ಯಜೀವಿ ಸಂಸ್ಥೆ ಗುರುತಿಸಿದೆ. 

Last Updated : Aug 10, 2018, 01:49 PM IST
ಉದ್ದ ಕಾಲುಗಳ ಅಪರೂಪದ ಹಲ್ಲಿ ನೋಡಿದ್ದಿರಾ? title=
Pic: Wildlife SOS

ನವದೆಹಲಿ: ಮಳೆಗಾಲ ಆರಂಭವಾಗುತ್ತಿದ್ದಂತೆ ಹಾವುಗಳು, ಚೇಳುಗಳು ಎಲ್ಲೆಡೆ ಕಂಡುಬರುತ್ತಿದೆ. ಅದರಂತೆ ಇತ್ತೀಚೆಗೆ ದೆಹಲಿಯ ನ್ಯಾಷನಲ್ ಟೆಕ್ನಿಕಲ್ ರಿಸರ್ಚ್ ಆರ್ಗನೈಸೇಶನ್ ಸೆಂಟರ್ನಲ್ಲಿ ಉದ್ದ ಕಾಲುಗಳ ಅಪರೂಪದ ಹಲ್ಲಿಯೊಂದು ಪತ್ತೆಯಾಗಿದೆ. ಕೂಡಲೇ ಆ ವನ್ಯ ಜೀವಿ ಸಂರಕ್ಷಣಾ ಮತ್ತು ಕಲ್ಯಾಣ ಕೇಂದ್ರ(NGO)ಕ್ಕೆ ಕರೆಮಾಡಲಾಗಿ, ಅಲ್ಲಿನ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅಲ್ಲಿಂದ ಹಲ್ಲಿಯನ್ನು ಸ್ಥಳಾಂತರಿಸಿದ್ದಾರೆ ಎನ್ನಲಾಗಿದೆ.

ಇದನ್ನು ಮಾನಿಟರ್ ಲಿಜಾರ್ಡ್(Monitor Lizard) ಎಂದು ವನ್ಯಜೀವಿ ಸಂಸ್ಥೆ ಗುರುತಿಸಿದೆ. ಈ ಹಲ್ಲಿಯಿಂದ ಮಾನವನಿಗೆ ಯಾವುದೇ ಅಪಾಯ ಇಲ್ಲವಾದರೂ, ಪ್ರಚೋದನೆಗೊಂಡರೆ ಕಚ್ಚುವ ಅಥವಾ ಉಗುರುಗಳನ್ನು ಬಳಸಿ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಸಂಸ್ಥೆ ತಿಳಿಸಿದೆ. 

Trending News