ನವದೆಹಲಿ: LPG Supply Through Pipeline - ದೇಶಾದ್ಯಂತದ ನಾಗರಿಕರಿಗೆ ಕೇಂದ್ರದ ಮೋದಿ ಸರ್ಕಾರ (Modi Government) ಸಂತಸದ ಸುದ್ದಿಯೊಂದನ್ನು ಪ್ರಕಟಿಸಿದೆ.ಹೊಸ ಸುತ್ತಿನ ವಿಸ್ತರಣಾ ಕಾರ್ಯದ ನಂತರ, ಭಾರತದ ಶೇಕಡಾ 82 ಕ್ಕಿಂತ ಹೆಚ್ಚು ಭೂಪ್ರದೇಶ ಮತ್ತು ಶೇಕಡಾ 98 ರಷ್ಟು ಜನಸಂಖ್ಯೆಯನ್ನು ಪೈಪ್ ಮೂಲಕ ಅಡುಗೆ ಅನಿಲ ಪೂರೈಕೆ ವ್ಯಾಪ್ತಿಗೆ ತರಲಾಗುವುದು ಎಂದು ಸರ್ಕಾರ ಸೋಮವಾರ ಸಂಸತ್ತಿನಲ್ಲಿ ತಿಳಿಸಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ (Petroleum And Natural Gas Minister Hardeep Singh Puri) ಅವರು ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಪೂರಕ ಪ್ರಶ್ನೆಗಳಿಗೆ ಉತ್ತರವಾಗಿ ಈ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ-Oscar Awards 2022 ಘೋಷಣೆ, Will Smith ಹಾಗೂ Jessica Chastain ಅತ್ಯುತ್ತಮ ನಟ, ನಟಿ ಪ್ರಶಸ್ತಿ
ಈ ವರ್ಷ ಮೇ 12 ರಂದು ವಿಸ್ತರಣೆ ಕಾಮಗಾರಿಗೆ ಬಿಡ್ ಆಹ್ವಾನಿಸಲಾಗುವುದು ಎಂದು ಅವರು ಹೇಳಿದ್ದಾರೆ. ಹರಾಜು ಪ್ರಕ್ರಿಯೆ ಪೂರ್ಣಗೊಂಡ ನಂತರ ಮೂಲಸೌಕರ್ಯಗಳನ್ನು ಸಿದ್ಧಪಡಿಸಲು ನಿರ್ದಿಷ್ಟ ಸಮಯ ತೆಗೆದುಕೊಳ್ಳಲಿದೆ ಎಂದು ಪುರಿ ಹೇಳಿದ್ದಾರೆ. "11 ನೇ ಸುತ್ತಿನ ಬಿಡ್ಡಿಂಗ್ ನಂತರ, ಶೇಕಡಾ 82 ಕ್ಕಿಂತ ಹೆಚ್ಚು ಭೂ ಪ್ರದೇಶ ಮತ್ತು ಶೇಕಡಾ 98 ರಷ್ಟು ಜನಸಂಖ್ಯೆಯನ್ನು ಯೋಜನೆಯ ವ್ಯಾಪ್ತಿಗೆ ತರಲಾಗುವುದು. ಇದರಿಂದ ಮನೆಗಳಿಗೆ ಪೈಪ್‌ಲೈನ್ ಮೂಲಕ ಎಲ್‌ಪಿಜಿ ಸರಬರಾಜು ಮಾಡಬಹುದು" ಎಂದು ಪುರಿ ಹೇಳಿದ್ದಾರೆ.
ಇದನ್ನೂ ಓದಿ-WFH ಅವಧಿಯಲ್ಲಿ ಮ್ಯಾಟರ್ನಿಟಿ ಲೀವ್ ಗೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು
ಪ್ರವೇಶಿಸಲು ಸಾಕಷ್ಟು ತೊಂದರೆ ಇರುವ ಕಾರಣ ಈಶಾನ್ಯ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದ ಕೆಲ ಪ್ರದೇಶಗಳು ಇದರ ವ್ಯಾಪ್ತಿಯಿಂದ ಹೊರಗುಳಿಯಲಿವೆ ಎಂದು ಹರ್ದೀಪ್ ಪುರಿ ಹೇಳಿದ್ದಾರೆ. ಸಿಲಿಂಡರ್‌ಗಳ ಮೂಲಕ ಪೂರೈಸುವ ಗ್ಯಾಸ್‌ಗಿಂತ ಪೈಪ್ ಮೂಲಕ ಬರುವ ಎಲ್‌ಪಿಜಿ ಅಗ್ಗ ಮತ್ತು ಗ್ರಾಹಕ ಸ್ನೇಹಿಯಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.