ಭಿಕ್ಷೆ ಬೇಡುತ್ತಿದ್ದ ಮಾಜಿ ಸೈನಿಕನ ನೆರವಿಗೆ ಬಂದ ಗೌತಮ್ ಗಂಭೀರ್

ಮಾಜಿ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಶನಿವಾರದಂದು ಮಾಜಿ ಯೋಧನೊಬ್ಬ ದೆಹಲಿಯಲ್ಲಿ ಭಿಕ್ಷೆ ಬೇಡುತ್ತಿರುವ ಫೋಟೋವೊಂದನ್ನು ಟ್ವಿಟ್ಟರ್ ನಲ್ಲಿ  ಶೇರ್ ಮಾಡಿ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಈ ಸೈನಿಕನಿಗೆ ಸಹಾಯ ದೊರೆತಿಲ್ಲ ಎಂದು ಬರೆದುಕೊಂಡಿರುವ ಫೋಟೋ ಈಗ ರಕ್ಷಣಾ ಇಲಾಖೆಯ ಗಮನಕ್ಕೂ ಬಂದಿದೆ.

Last Updated : Feb 3, 2019, 04:24 PM IST
ಭಿಕ್ಷೆ ಬೇಡುತ್ತಿದ್ದ ಮಾಜಿ ಸೈನಿಕನ ನೆರವಿಗೆ ಬಂದ ಗೌತಮ್ ಗಂಭೀರ್  title=
Photo courtesy: Twitter

ನವದೆಹಲಿ: ಮಾಜಿ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಶನಿವಾರದಂದು ಮಾಜಿ ಯೋಧನೊಬ್ಬ ದೆಹಲಿಯಲ್ಲಿ ಭಿಕ್ಷೆ ಬೇಡುತ್ತಿರುವ ಫೋಟೋವೊಂದನ್ನು ಟ್ವಿಟ್ಟರ್ ನಲ್ಲಿ  ಶೇರ್ ಮಾಡಿ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಈ ಸೈನಿಕನಿಗೆ ಸಹಾಯ ದೊರೆತಿಲ್ಲ ಎಂದು ಬರೆದುಕೊಂಡಿರುವ ಫೋಟೋ ಈಗ ರಕ್ಷಣಾ ಇಲಾಖೆಯ ಗಮನಕ್ಕೂ ಬಂದಿದೆ.

ಅದೇಗೆ ಅಂತೀರಾ? ಗೌತಮ್ ಗಂಬೀರ್ ತಮ್ಮ ಟ್ವಿಟ್ಟರ್ ನಲ್ಲಿ " ಇವನು ಮಿಸ್ಟರ್ ಪೀತಾಂಬರನ್ ,1965 ಮತ್ತು 1971ರ ಯುದ್ದದಲ್ಲಿ  ಸೇವೆ ಸಲ್ಲಿಸಿದ್ದಾರೆ ಇದನ್ನು ಅವರ ಗುರುತಿನ ಚೀಟಿ ಮೂಲಕ ಖಚಿತ ಪಡಿಸಿಕೊಳ್ಳಲಾಗಿದೆ.ಅವರು ಹೇಳುವಂತೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಆರ್ಮಿಯಿಂದ ತಮಗೆ ಯಾವುದೇ ಸಹಾಯ ದೊರೆಯುತ್ತಿಲ್ಲ " ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.

ಅಲ್ಲದೆ ಈ ವಿಚಾರವಾಗಿ ರಕ್ಷಣಾ ಇಲಾಖೆ ಮಧ್ಯಸ್ಥಿಕೆ ವಹಿಸಿ ಕ್ರಮತೆಗೆದುಕೊಳ್ಳಬೇಕು  ಎಂದು ಅವರು ಟ್ವೀಟ್ ಮಾಡಿದ್ದಾರೆ.ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ರಕ್ಷಣಾ ಇಲಾಖೆ ನೀವು ಎತ್ತಿರುವ ಈ ಕಾಳಜಿಗೆ ನಮ್ಮ ಧನ್ಯವಾದಗಳು ಈ ವಿಚಾರವಾಗಿ ನಾವು ಸಾಧ್ಯವಾದಷ್ಟು ಬೇಗ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ರಕ್ಷಣಾ ಇಲಾಖೆ ಟ್ವೀಟ್ ಮಾಡಿದೆ.

 

Trending News