ಗೆಳತಿ ಮದುವೆಗೆ ನಿರಾಕರಿಸಿದಕ್ಕೆ 5 ಲಕ್ಷ ರೂ.ಗೆ ಬೆಂಕಿ ಹಚ್ಚಿದ ಪ್ರೇಮಿ

ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕ್ಯಾಷಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಜಿತೇಂದ್ರ ಎಂಬ ಯುವಕ, ಕಂಪನಿಯ ಹಣವನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದಾನೆ.

Last Updated : Apr 20, 2018, 03:35 PM IST
ಗೆಳತಿ ಮದುವೆಗೆ ನಿರಾಕರಿಸಿದಕ್ಕೆ 5 ಲಕ್ಷ ರೂ.ಗೆ ಬೆಂಕಿ ಹಚ್ಚಿದ ಪ್ರೇಮಿ title=

ಸಿಹೋರ್: ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಿಂದ ಒಂದು ವಿಶಿಷ್ಟವಾದ ಪ್ರಕರಣ ಹೊರಹೊಮ್ಮಿದೆ. ಮಾಹಿತಿಯ ಪ್ರಕಾರ, ಜಿಲ್ಲೆಯ ಖಾಸಗಿ ಹಣಕಾಸು ಕಂಪನಿಯಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುವ ಯುವಕ ತನ್ನ ಗೆಳತಿಗೆ ಮನವೊಲಿಸಲು 6 ಲಕ್ಷ 74 ಸಾವಿರ ವಂಚನೆ ಮಾಡಿದ್ದನು. ಆದರೆ, ಗೆಳತಿ ಅವನನ್ನು ಮದುವೆಯಾಗಲು ನಿರಾಕರಿಸಿದಾಗ, 5 ಲಕ್ಷ ರೂಪಾಯಿಗೆ ಬೆಂಕಿ ಹಚ್ಚಿದ್ದಾನೆ. ಈ ಪ್ರಕರಣದಲ್ಲಿ ಬೆಂಕಿಗೆ ಆಹುತಿಯಾದ 5 ಲಕ್ಷ ರೂ. ಅನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ನಂತರ ಕ್ಯಾಷಿಯರ್ ನನ್ನು ಬಂಧಿಸಲಾಗಿದೆ. ಇದಲ್ಲದೆ, 46 ಸಾವಿರ ರೂಪಾಯಿ ನಗದು ಮತ್ತು 1 ಲಕ್ಷ 28 ಸಾವಿರ ರೂಪಾಯಿಗಳನ್ನು ಯುವಕನ ಲಾಕರ್ ನಿಂದ ಮರುಪಡೆಯಲಾಗಿದೆ.

ನಸುರುಲ್ಲಾಗಂಜ್ ಪೋಲಿಸ್ ನೀಡಿದ ಮಾಹಿತಿಯ ಪ್ರಕಾರ, ತಹಶೀಲ್ ಪ್ರಧಾನ ಕಚೇರಿಯಲ್ಲಿರುವ ಸ್ಪಾಂದಾನಾ ಪ್ರವಾಹ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕ್ಯಾಷಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಜಿತೇಂದ್ರ ಎಂಬ ಯುವಕ, ಕಂಪನಿಯ ಹಣವನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದಾನೆ. ಪೊಲೀಸರ ಪ್ರಕಾರ, ಏಪ್ರಿಲ್ 17-18ರಂದು, ಕ್ಯಾಷಿಯರ್ ಕಂಪೆನಿಯ ಖಜಾನೆಯಿಂದ 6 ಲಕ್ಷ 74 ಸಾವಿರ ರೂಪಾಯಿಗಳನ್ನು ತೆಗೆದುಕೊಂಡಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ.

ಕ್ಯಾಷಿಯರ್ ಕಣ್ಮರೆಯಾದ ನಂತರ ಪ್ರಕರಣ ಬೆಳಕಿಗೆ ಬಂದಿದ್ದು, ಕಂಪನಿ ಮ್ಯಾನೇಜರ್ ತಕ್ಷಣವೇ  ನಸುರುಲ್ಲಾಗಂಜ್ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಮ್ಯಾನೇಜರ್ ದೂರಿನ ಮೇರೆಗೆ ವಿಚಾರಣೆ ನಡೆಸಿದ ಪೋಲಿಸರು ಕ್ಯಾಷಿಯರ್ ಅನ್ನು ವಶಕ್ಕೆ ಪಡೆದಿದ್ದು, 46 ಸಾವಿರ ರೂಪಾಯಿ ನಗದು ಮತ್ತು 1 ಲಕ್ಷ 28 ಸಾವಿರ ರೂಪಾಯಿಗಳನ್ನು ಯುವಕನ ಲಾಕರ್ ನಿಂದ ಮರುಪಡೆಯಲಾಗಿದೆ.

Trending News