10 ವರ್ಷಕ್ಕೂ ಅಧಿಕ ವಯಸ್ಸಿನ ಬಾಲಕಿಯರು ಜೀನ್ಸ್ ತೊಡುವಂತಿಲ್ಲ !

ಮಧ್ಯಪ್ರದೇಶದ ಅಲಿರಾಜಪುರ್ ನಲ್ಲಿ 10 ವರ್ಷ ವಯಸ್ಸಿನ ಬಾಲಕಿಯರು ಜೀನಸ್ ನ್ನು ತೊಡುವ ಹಾಗಿಲ್ಲ ಎಂದು ಮಾಲಿ ಸಮುದಾಯ ಆದೇಶ ಮಾಡಿದೆ.

Updated: Oct 11, 2018 , 03:32 PM IST
10 ವರ್ಷಕ್ಕೂ ಅಧಿಕ ವಯಸ್ಸಿನ ಬಾಲಕಿಯರು ಜೀನ್ಸ್ ತೊಡುವಂತಿಲ್ಲ !

ಅಲಿರಾಜ್ಪುರ್: ಮಧ್ಯಪ್ರದೇಶದ ಅಲಿರಾಜಪುರ್ ನಲ್ಲಿ 10 ವರ್ಷ ವಯಸ್ಸಿನ ಬಾಲಕಿಯರು ಜೀನಸ್ ನ್ನು ತೊಡುವ ಹಾಗಿಲ್ಲ ಎಂದು ಮಾಲಿ ಸಮುದಾಯ ಆದೇಶ ಮಾಡಿದೆ.

ಈ ಕುರಿತಾಗಿ ಪ್ರತಿಕ್ರಿಯಿಸಿರುವ ಮಾಲಿ ಸಮುದಾಯದ ಅಧ್ಯಕ್ಷೆ  ಮಂಜುಳಾ ಮಾಲಿ " ನಾವು ಗರ್ಬಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಆದ್ದರಿಂದ 10 ವರ್ಷ ವಯಸ್ಸಿನ ಬಾಲಕಿಯರು ಜೀನ್ಸ್ ಮತ್ತು ಟಾಪ್ ಗಳನ್ನೂ ಧರಿಸುವಂತಿಲ್ಲ, ಅವೆರು ಮನೆಯಲ್ಲಿ ಮತ್ತು ಇತರ ಕಾರ್ಯಕ್ರಮಗಳಲ್ಲಿಯೂ ತೊಡುವ ಹಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದಕ್ಕೆ ಕಾರಣವೆಂದರೆ ಪುರುಷ ವ್ಯಕ್ತಿಗಳನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ ಅದ್ದರಿಂದ ಇದನ್ನು ಅರ್ಥೈಸಿಕೊಳ್ಳಲು ನಾವು ನಮ್ಮ ಬಾಲಕಿಯರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.ಈ ನಿರ್ಧಾರಕ್ಕೆ ಸಮುದಾಯದ ಪುರುಷರು ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.