ಮಾತಾ ವೈಷ್ಣೋ ದೇವಿ ಭಕ್ತರಿಗೆ ಶುಭ ಸುದ್ದಿ: ದೆಹಲಿ-ಕತ್ರಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶೀಘ್ರದಲ್ಲೇ ಪ್ರಾರಂಭ

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಅತಿ ವೇಗದ ರೈಲು ಮತ್ತು ಇದು ದೆಹಲಿ ಮತ್ತು ಕತ್ರ ನಡುವಿನ ಅಂತರವನ್ನು 12 ಗಂಟೆಯಿಂದ 8 ಗಂಟೆಗೆ ಇಳಿಸಿದೆ.

Last Updated : Oct 9, 2020, 02:40 PM IST
  • ಹಬ್ಬದ ಋತುವಿನ ದೃಷ್ಟಿಯಿಂದ 39 ಹೊಸ ಎಸಿ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.
  • ಹಬ್ಬದ ಋತುವಿನಲ್ಲಿ ಅಕ್ಟೋಬರ್ 15 ಮತ್ತು ನವೆಂಬರ್ 30 ರ ನಡುವೆ 200 ವಿಶೇಷ ರೈಲುಗಳನ್ನು ಸಹ ಓಡಿಸಲಾಗುವುದು ಎಂದು ಇತ್ತೀಚೆಗೆ ರೈಲ್ವೆ ಘೋಷಿಸಿತು.
ಮಾತಾ ವೈಷ್ಣೋ ದೇವಿ ಭಕ್ತರಿಗೆ ಶುಭ ಸುದ್ದಿ: ದೆಹಲಿ-ಕತ್ರಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶೀಘ್ರದಲ್ಲೇ ಪ್ರಾರಂಭ title=

ನವದೆಹಲಿ : ಅನ್ಲಾಕ್ 5.0 ರಲ್ಲಿ ಎಲ್ಲಾ ಆರ್ಥಿಕ ಚಟುವಟಿಕೆಗಳು ಸಾಮಾನ್ಯವಾಗುತ್ತಿರುವಾಗ ಭಾರತೀಯ ರೈಲ್ವೆ ಸೇವೆಯೂ ನಿಧಾನವಾಗಿ ಟ್ರ್ಯಾಕ್‌ಗೆ ಮರಳುತ್ತಿದೆ. ವಿಶೇಷ ರೈಲುಗಳ ಜೊತೆಗೆ ಭಾರತೀಯ ರೈಲ್ವೆ (Indian Railways) ತಮ್ಮ ರೈಲ್ವೆ ಸೇವೆಗಳನ್ನು ಧಾರ್ಮಿಕ ಸ್ಥಳಗಳಿಗೆ ಮರುಸ್ಥಾಪಿಸಲು ನಿರ್ಧರಿಸಿದೆ. ಈ ಸಂಚಿಕೆಯಲ್ಲಿ ಭಾರತೀಯ ರೈಲ್ವೆ ಮಾತಾ ವೈಷ್ಣೋ ದೇವಿ (Mata Vaishno Devi)ಗಾಗಿ ದೆಹಲಿ-ಕತ್ರ ವಂದೇ ಭಾರತ್ ರೈಲು (Delhi-Katra Vande Bharat Express) ಸೇವೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ.

ದೆಹಲಿಯಿಂದ ಕತ್ರಾಗೆ ಹೋಗುವ ವಂದೇ ಭಾರತ್ ರೈಲು ಸೇವೆಯನ್ನು ಶೀಘ್ರದಲ್ಲೇ ಪುನಃಸ್ಥಾಪಿಸಲಾಗುವುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದರು. ನವರಾತ್ರಿಯ ಮೊದಲು ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕತ್ರಾಗೆ ರೈಲು ಸೇವೆಯನ್ನು ಮರುಸ್ಥಾಪಿಸುವ ಕುರಿತು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದರು.

ಈ ಕುರಿತಂತೆ ಕೇಂದ್ರ ಸಚಿವರು ಟ್ವೀಟ್ ಮಾಡಿದ್ದು, 'ದೆಹಲಿ-ಕತ್ರ (ವೈಷ್ಣೋ ದೇವಿ) ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಯನ್ನು ಮರುಸ್ಥಾಪಿಸುವ ಬಗ್ಗೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ನವರಾತ್ರಿಯಲ್ಲಿ ಪವಿತ್ರ ಸ್ಥಳಕ್ಕೆ ಭೇಟಿ ನೀಡಲು ಯೋಜಿಸುತ್ತಿರುವ ದೇಶಾದ್ಯಂತದ ಭಕ್ತರಿಗೆ ಈ ಮಾಹಿತಿಯು ಧೈರ್ಯ ತುಂಬುತ್ತದೆ.

ರಾಜ್ಯ ಸಿಬ್ಬಂದಿ ಸಚಿವರಾಗಿರುವ ಜಿತೇಂದ್ರ  ಸಿಂಗ್, ಜಮ್ಮು ಮತ್ತು ಕಾಶ್ಮೀರದ ಉಧಂಪುರ್ ಸ್ಥಾನದಿಂದ ಲೋಕಸಭಾ ಸಂಸದರಾಗಿದ್ದಾರೆ.

ದೇಶದಲ್ಲಿ ಕರೋನಾವೈರಸ್‌ನಿಂದಾಗಿ ಮಾರ್ಚ್‌ನಲ್ಲಿ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಯಿತು. ಇದನ್ನು ಈಗ ಕ್ರಮೇಣ ಪುನಃಸ್ಥಾಪಿಸಲಾಗುತ್ತಿದೆ.

Indian Railways: ಈಗ ಈ ಮಾರ್ಗಗಳಲ್ಲಿ ಪ್ರಯಾಣಿಕರಿಗೆ ಕನ್ಫರ್ಮ್ ಟಿಕೆಟ್‌ಗಳು ಮಾತ್ರ ಲಭ್ಯ

ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ದೆಹಲಿ-ಕತ್ರಾ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲು ಸೇವೆಯನ್ನು ಮಾತಾ ವೈಷ್ಣೋ ದೇವಿಗಾಗಿ ಪ್ರಾರಂಭಿಸಲಾಗಿದೆ. ಅಕ್ಟೋಬರ್ 3, 2019 ರಂದು ಗೃಹ ಸಚಿವ ಅಮಿತ್ ಶಾ ಈ ರೈಲಿಗೆ ಚಾಲನೆ ನೀಡಿದರು.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಅತಿ ವೇಗದ ರೈಲು ಮತ್ತು ಇದು ದೆಹಲಿ ಮತ್ತು ಕತ್ರ ನಡುವಿನ ಅಂತರವನ್ನು 12 ಗಂಟೆಯಿಂದ 8 ಗಂಟೆಗೆ ಇಳಿಸಿದೆ. ನವದೆಹಲಿ ಮತ್ತು ಶ್ರೀಮಾತಾ ವೈಷ್ಣೋ ದೇವಿ ಕತ್ರಾ ನಡುವಿನ ಎಸಿ ಕೋಚ್ ಗೆ ಕನಿಷ್ಠ ಶುಲ್ಕ 1630 ರೂ., ಕಾರ್ಯನಿರ್ವಾಹಕ ಕುರ್ಚಿ ಕಾರಿನ ಶುಲ್ಕ 3015 ರೂ. ಆಗಿದೆ.

ಈ ರೈಲು ನವದೆಹಲಿ ರೈಲ್ವೆ ನಿಲ್ದಾಣದಿಂದ ಬೆಳಿಗ್ಗೆ 6 ಗಂಟೆಗೆ ಹೊರಟು ಮಧ್ಯಾಹ್ನ 2 ಗಂಟೆಗೆ ಕತ್ರ ತಲುಪುತ್ತದೆ.
ನಂತರ ಕತ್ರಾದಿಂದ ಈ ರೈಲು ಮಧ್ಯಾಹ್ನ 3 ಗಂಟೆಗೆ ಹೊರಟು ರಾತ್ರಿ 11 ಗಂಟೆಗೆ ನವದೆಹಲಿ ರೈಲ್ವೆ ನಿಲ್ದಾಣವನ್ನು ತಲುಪುತ್ತದೆ.

'ಸೌರಶಕ್ತಿ' ಬಳಸಿ 3 ಕೋಟಿ ಉಳಿಸಿದ ಭಾರತೀಯ ರೈಲ್ವೆ

ಹಬ್ಬದ ಋತುವಿನಲ್ಲಿ ವಿಶೇಷ ರೈಲು :
ಹಬ್ಬದ ಋತುವಿನ ದೃಷ್ಟಿಯಿಂದ 39 ಹೊಸ ಎಸಿ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಈ ರೈಲುಗಳನ್ನು ವಿವಿಧ ವಲಯಗಳಲ್ಲಿ ಓಡಿಸಲಾಗುವುದು.

ಹಬ್ಬದ ಋತುವಿನಲ್ಲಿ ಅಕ್ಟೋಬರ್ 15 ಮತ್ತು ನವೆಂಬರ್ 30 ರ ನಡುವೆ 200 ವಿಶೇಷ ರೈಲುಗಳನ್ನು ಸಹ ಓಡಿಸಲಾಗುವುದು ಎಂದು ಇತ್ತೀಚೆಗೆ ರೈಲ್ವೆ ಘೋಷಿಸಿತು. ಈ 39 ರೈಲುಗಳನ್ನು ಸಹ ಅದೇ ವಿಭಾಗದಲ್ಲಿ ಸೇರಿಸಬಹುದು.

Trending News