ನವೆಂಬರ್ 1 ರಿಂದ ಈ ರಾಜ್ಯದ ಸರ್ಕಾರಿ ಬ್ಯಾಂಕುಗಳ ಸಮಯ ಬದಲಾವಣೆ

ಕಳೆದ ಹಲವಾರು ತಿಂಗಳುಗಳಿಂದ ನಡೆಯುತ್ತಿರುವ ಚರ್ಚೆಯ ನಂತರ, ಮಹಾರಾಷ್ಟ್ರದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ ವೇಳೆಯನ್ನು ಬದಲಾಯಿಸಲಾಗಿದೆ. ಇದರೊಂದಿಗೆ, ಬ್ಯಾಂಕಿನ ಸಮಯವನ್ನು ಬದಲಾಯಿಸಿದ ಮೊದಲ ರಾಜ್ಯ ಮಹಾರಾಷ್ಟ್ರ.   

Last Updated : Oct 17, 2019, 07:32 AM IST
ನವೆಂಬರ್ 1 ರಿಂದ ಈ ರಾಜ್ಯದ ಸರ್ಕಾರಿ ಬ್ಯಾಂಕುಗಳ ಸಮಯ ಬದಲಾವಣೆ title=

ನವದೆಹಲಿ: ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿರುವ ಚರ್ಚೆಯ ನಂತರ ಮಹಾರಾಷ್ಟ್ರದ ಸಾರ್ವಜನಿಕ ವಲಯದ ಬ್ಯಾಂಕುಗಳ ಕರ್ತವ್ಯದ ವೇಳೆಯನ್ನು ಬದಲಾಯಿಸಲಾಗಿದೆ. ಇದರೊಂದಿಗೆ, ಬ್ಯಾಂಕಿನ ಸಮಯವನ್ನು ಬದಲಾಯಿಸಿದ ಮೊದಲ ರಾಜ್ಯ ಮಹಾರಾಷ್ಟ್ರ. ಹೊಸ ಬದಲಾವಣೆಯಡಿಯಲ್ಲಿ, ಈಗ ಸಾರ್ವಜನಿಕ ವಲಯದ ಬ್ಯಾಂಕುಗಳ ಕರ್ತವ್ಯದ ವೇಳೆಯನ್ನು ಮಹಾರಾಷ್ಟ್ರ ರಾಜ್ಯ ನಿಗದಿಪಡಿಸಿದೆ. ಈ ಹೊಸ ನಿಯಮ ದೀಪಾವಳಿಯ ನಂತರ ಅಂದರೆ ನವೆಂಬರ್ 1 ರಿಂದ ಅನ್ವಯವಾಗುತ್ತದೆ. ಇದರ ಅಡಿಯಲ್ಲಿ, ಎಲ್ಲಾ ಸರ್ಕಾರಿ ಬ್ಯಾಂಕುಗಳ ಸಮಯ ಒಂದೇ ಆಗಿರುತ್ತದೆ.

ಹಣಕಾಸು ಸಚಿವಾಲಯದ ಬ್ಯಾಂಕಿಂಗ್ ಇಲಾಖೆಯು ಬ್ಯಾಂಕುಗಳ ಪ್ರಾರಂಭದ ಸಮಯದಲ್ಲಿ ಏಕರೂಪತೆಯನ್ನು ತರಲು ಸೂಚನೆಗಳನ್ನು ನೀಡಿತ್ತು. ಬ್ಯಾಂಕುಗಳ ಕಾರ್ಯಚಟುವಟಿಕೆಯನ್ನು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಮಾಡಬೇಕು ಎಂದು ಹಣಕಾಸು ಸಚಿವಾಲಯದ ಸಭೆಯಲ್ಲಿ ನಿರ್ಧರಿಸಲಾಯಿತು. ಅದಕ್ಕಾಗಿಯೇ ಬ್ಯಾಂಕುಗಳ ತೆರೆಯುವ ಸಮಯದ ಬದಲಾವಣೆಗೆ ಅನುಮೋದನೆ ನೀಡಲಾಯಿತು.

ಹಿಂದೆ, ವಿಭಿನ್ನ ಬ್ಯಾಂಕುಗಳು ಒಂದೇ ಪ್ರದೇಶದಲ್ಲಿ ವಿಭಿನ್ನ ಸಮಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಹೀಗಾಗಿ ಬ್ಯಾಂಕಿಂಗ್ ಸಮಯವನ್ನು ಬದಲಾಯಿಸಲು ಹಣಕಾಸು ಸಚಿವಾಲಯವು ಮೂರು ಆಯ್ಕೆಗಳನ್ನು ನೀಡಿತು. ಮೊದಲ ಆಯ್ಕೆಯನ್ನು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ, ಎರಡನೇ ಆಯ್ಕೆ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಮತ್ತು ಮೂರನೇ ಆಯ್ಕೆ ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ಕಾರ್ಯ ನಿರ್ವಹಿಸಲು ಸೂಚಿಸಲಾಯಿತು. 

ಸ್ಥಳಗಳಿಗೆ ಅನುಗುಣವಾಗಿ ಬ್ಯಾಂಕುಗಳ ಸಮಯವನ್ನು ಬದಲಾಯಿಸಲಾಗಿದೆ.

ಪ್ರದೇಶ ಬ್ಯಾಂಕ್ ಸಮಯ ಗ್ರಾಹಕರಿಗೆ
ವಸತಿ   ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ  ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ
ವಾಣಿಜ್ಯ ಬೆಳಿಗ್ಗೆ 11 ರಿಂದ ಸಂಜೆ 6 ರವರೆಗೆ ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ
ಇತರ ಪ್ರದೇಶಗಳು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ

 

                 
          
          
    

Trending News