ನವದೆಹಲಿ: ಕೊರೋನಾವೈರಸ್ ಬಗ್ಗೆ ಜಾಗೃತಿ ಮೂಡಿಸಲು, ತಪ್ಪು ಮಾಹಿತಿಯನ್ನು ನಿಗ್ರಹಿಸಲು ಕೇಂದ್ರ ಸರ್ಕಾರ ವಾಟ್ಸಾಪ್‌ನಲ್ಲಿ ಚಾಟ್‌ಬಾಟ್ ಗೆ ಚಾಲನೆ ನೀಡಿದೆ.
ಸಾಮಾಜಿಕ ಮೆಸೇಜಿಂಗ್ ಬಳಕೆ ಮಾಧ್ಯಮವಾಗಿರುವ ವಾಟ್ಸಪ್ ನಲ್ಲಿ ಸುಳ್ಳು ಮಾಹಿತಿ ವೈರಲ್ ಆಗುತ್ತಿರುವ ಹಿನ್ನಲೆಯಲ್ಲಿ ಈಗ ಕೇಂದ್ರ ಸರ್ಕಾರ ಇವುಗಳ ನಿಗ್ರಹಕ್ಕಾಗಿ ಈಗ ಚಾಟ್‌ಬಾಟ್ ಗೆ ಚಾಲನೆ ನೀಡಲಿದೆ.
ಪ್ರಪಂಚದಲ್ಲಿ ಕರೋನವೈರಸ್ ಸಕಾರಾತ್ಮಕ ಪ್ರಕರಣಗಳ ಸಂಖ್ಯೆ 2,72,351ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 11,310 ಕ್ಕೆ ತಲುಪಿದೆ.ಈಗ ಇಟಲಿ ದೇಶವೊಂದರಲ್ಲಿಯೇ ಸಾವಿನ ಸಂಖ್ಯೆ 4,000 ದಾಟಿದೆ. ಕಳೆದ 24 ಗಂಟೆಗಳಲ್ಲಿ ಈ ದೇಶದಲ್ಲಿ 627 ಸಾವುಗಳು ದಾಖಲಾಗಿದ್ದು, ಒಟ್ಟು 4,032 ಕ್ಕೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಟಲಿಯ COVID-19 ಸಾವಿನ ಸಂಖ್ಯೆ ಚೀನಾದಲ್ಲಿ 3,139 ಸಾವುಗಳನ್ನು ಹಿಂದಿಕ್ಕಿದೆ.
ಏತನ್ಮಧ್ಯೆ, ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಶುಕ್ರವಾರ ಲಾಕ್ ಡೌನ್ ವಿಧಿಸಿದ್ದಾರೆ, ಕರೋನವೈರಸ್ ನಿಂದಾಗಿ ಎಲ್ಲಾ ಸಾರ್ವಜನಿಕ ಸಂಸ್ಥೆಗಳಿಗೆ ಬಾಗಿಲು ಮುಚ್ಚುವಂತೆ ಅವರು ಸೂಚನೆ ನೀಡಿದ್ದಾರೆ, ಇದು ಈಗಾಗಲೇ 3,200 ಕ್ಕೂ ಹೆಚ್ಚು ಜನರನ್ನು ಬಾಧಿಸಿದೆ ಮತ್ತು 160 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದೆ