ಕೊರೊನಾ ಇರುವ ಮನೆಗಳ ಹೊರಗೆ ಪೋಸ್ಟರ್ ಅಂಟಿಸುವುದನ್ನು ನಿಲ್ಲಿಸಲು ಸುಪ್ರಿಂ ಸೂಚನೆ

ಕೊರೊನಾ ಇರುವ ಮನೆಗಳ ಹೊರಗೆ ಪೋಸ್ಟರ್‌ಗಳನ್ನು ಅಂಟಿಸುವುದರಿಂದ ಅಂತಹ ರೋಗಿಗಳನ್ನು ಅಸ್ಪೃಶ್ಯರೆಂದು ಪರಿಗಣಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಟೀಕಿಸಿದ್ದು, ಈ ಅಭ್ಯಾಸವನ್ನು ನಿಷೇಧಿಸುವಂತೆ ಹೇಳಿದೆ. ಈ ಕುರಿತಾಗಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

Last Updated : Dec 1, 2020, 10:40 PM IST
ಕೊರೊನಾ ಇರುವ ಮನೆಗಳ ಹೊರಗೆ ಪೋಸ್ಟರ್ ಅಂಟಿಸುವುದನ್ನು ನಿಲ್ಲಿಸಲು ಸುಪ್ರಿಂ ಸೂಚನೆ  title=

ನವದೆಹಲಿ: ಕೊರೊನಾ ಇರುವ ಮನೆಗಳ ಹೊರಗೆ ಪೋಸ್ಟರ್‌ಗಳನ್ನು ಅಂಟಿಸುವುದರಿಂದ ಅಂತಹ ರೋಗಿಗಳನ್ನು ಅಸ್ಪೃಶ್ಯರೆಂದು ಪರಿಗಣಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಟೀಕಿಸಿದ್ದು, ಈ ಅಭ್ಯಾಸವನ್ನು ನಿಷೇಧಿಸುವಂತೆ ಹೇಳಿದೆ. ಈ ಕುರಿತಾಗಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಇಡೀ ದೇಶಕ್ಕೆ ಲಸಿಕೆ ಹಾಕುವ ಬಗ್ಗೆ ಸರ್ಕಾರ ಎಂದಿಗೂ ಹೇಳಿಲ್ಲ- ಕೇಂದ್ರ ಸ್ಪಷ್ಟನೆ

ಕೋವಿಡ್ ಸಕಾರಾತ್ಮಕ ವ್ಯಕ್ತಿಗಳ ಮನೆಗಳ ಹೊರಗೆ ನೀವು ಅಂತಹ ಪೋಸ್ಟರ್‌ಗಳನ್ನು ಅಂಟಿಸುತ್ತಿದ್ದರೆ, ಅವರನ್ನು ಅಸ್ಪೃಶ್ಯರೆಂದು ಪರಿಗಣಿಸಲಾಗುತ್ತಿದೆ ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ಎಸ್ ರೆಡ್ಡಿ ಮತ್ತು ಎಮ್ಆರ್ ಷಾ ಅವರ ಮೂರು ನ್ಯಾಯಾಧೀಶರ ಪೀಠ ಹೇಳಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಮೊಹೆಚ್‌ಎಫ್‌ಡಬ್ಲ್ಯು) ಹೊರಡಿಸಿದ ಯಾವುದೇ ಮಾರ್ಗಸೂಚಿಯಡಿ ಇಂತಹ ಅಭ್ಯಾಸವನ್ನು ಅನುಮೋದಿಸಲಾಗಿಲ್ಲ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿತು.

ಕರೋನಾವೈರಸ್ ನಡುವೆಯೂ ಈ ರಾಜ್ಯದಲ್ಲಿ ಜನವರಿ 1ರಿಂದ ತೆರೆಯಲಿವೆ ಶಾಲೆಗಳು

ನವೆಂಬರ್ 19 ರಂದು, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಟ್ಟುನಿಟ್ಟಾಗಿ ತಿಳಿಸಲಾಗಿದೆ ಎಂದು ಸಚಿವಾಲಯವು ಅಫಿಡವಿಟ್ ಮೂಲಕ ತಿಳಿಸಿದೆ, “ಕೋವಿಡ್ ಪತ್ತೆಯಾದವರ ನಿವಾಸಗಳ ಹೊರಗೆ ಪೋಸ್ಟರ್ ಅಥವಾ ಇತರ ಸಂಕೇತಗಳನ್ನು ಅಂಟಿಸುವ ಬಗ್ಗೆ ಯಾವುದೇ ಸೂಚನೆಗಳು ಅಥವಾ ಮಾರ್ಗಸೂಚಿಗಳನ್ನು ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳಲ್ಲಿ ಹೊಂದಿಲ್ಲ ಎಂದು ತಿಳಿಸಿದೆ.

ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಪೀಠಕ್ಕೆ, ಪೋಸ್ಟರ್‌ಗಳನ್ನು ಅಂಟಿಸಬೇಕು ಎಂದು ನಾವು ಸೂಚಿಸಿಲ್ಲ. ಬಹುಶಃ ರಾಜ್ಯಗಳು ಅದನ್ನು ಸ್ವಂತವಾಗಿ ಬಿಡುಗಡೆ ಮಾಡಿರಬಹುದು ಎಂದರು.

 

Trending News