ಎಲ್ಲರಿಗೂ ಪ್ರತಿಭಟಿಸುವ ಹಕ್ಕಿದೆ, ರೈತರ ಹೋರಾಟ ಮುಂದುವರೆಯಲಿ: ಸುಪ್ರೀಂ ಕೋರ್ಟ್​

ಸುಪ್ರೀಂ ಕೋರ್ಟ್​ ಇಂದು ಮಹತ್ವದ ತೀರ್ಪು

Last Updated : Dec 17, 2020, 04:29 PM IST
  • ಸಮಾಜದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ. ರೈತರಿಗೂ ಪ್ರತಿಭಟಿಸುವ ಹಕ್ಕಿದ್ದು, ಅವರ ಹೋರಾಟ ಮುಂದುವರೆಯಬೇಕು
  • ಯಾವುದೇ ಕಾರಣಕ್ಕೂ ರೈತರನ್ನು ಹೋರಾಟದ ಕಣದಿಂದ ತೆರವುಗೊಳಿಸುವಂತೆ ಆದೇಶ ನೀಡಲು ಸಾಧ್ಯವಿಲ್ಲ
  • ಸುಪ್ರೀಂ ಕೋರ್ಟ್​ ಇಂದು ಮಹತ್ವದ ತೀರ್ಪು
ಎಲ್ಲರಿಗೂ ಪ್ರತಿಭಟಿಸುವ ಹಕ್ಕಿದೆ, ರೈತರ ಹೋರಾಟ ಮುಂದುವರೆಯಲಿ: ಸುಪ್ರೀಂ ಕೋರ್ಟ್​ title=

ನವದೆಹಲಿ: "ಸಮಾಜದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ. ರೈತರಿಗೂ ಪ್ರತಿಭಟಿಸುವ ಹಕ್ಕಿದ್ದು, ಅವರ ಹೋರಾಟ ಮುಂದುವರೆಯಬೇಕು. ಅಲ್ಲದೆ, ಯಾವುದೇ ಕಾರಣಕ್ಕೂ ರೈತರನ್ನು ಹೋರಾಟದ ಕಣದಿಂದ ತೆರವುಗೊಳಿಸುವಂತೆ ಆದೇಶ ನೀಡಲು ಸಾಧ್ಯವಿಲ್ಲ" ಎಂದು ಸುಪ್ರೀಂ ಕೋರ್ಟ್​ ಇಂದು ಮಹತ್ವದ ತೀರ್ಪು ನೀಡಿದೆ.

ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರ ಕಳೆದ 22 ದಿನಗಳಿಂದ ದೆಹಲಿ ಹೊರ ವಲಯದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿ ಬಂದ್​ ಆಗಿದ್ದು, ಅವರನ್ನು ಅಲ್ಲಿಂದ ತೆರವುಗೊಳಿಸಲು ಆದೇಶ ನೀಡುವಂತೆ ಒತ್ತಾಯಿಸಿ ಸುಪ್ರೀಂ ಕೋರ್ಟ್​(supreme court)ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಲಾಗಿತ್ತು. ಆದರೆ, ಇಂದು ಆ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ

ನಿನ್ನ ಸಹ ಇದೇ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಾಧೀಶ ಎಸ್​.ಎ. ಬೊಬ್ಡೆ ಅವರಿದ್ದ ನ್ಯಾಯಪೀಠ, "ಈ ವಿಷಯವನ್ನು ಸಮಿತಿಯೊಂದಕ್ಕೆ ಹಸ್ತಾಂತರಿಸಬೇಕು. ಸಮಿತಿಯು ಕೃಷಿ ಜ್ಞಾನವನ್ನು ಹೊಂದಿರುವ ಸ್ವತಂತ್ರ ಸದಸ್ಯರನ್ನು ಹೊಂದಿರಬೇಕು ಮತ್ತು ಎರಡೂ ಕಡೆಯವರ ವಾದವನ್ನು ಆಲಿಸಿ ಸಮಸ್ಯೆಯನ್ನು ಬಗೆಹರಿಸುವಂತಿರಬೇಕು" ಎಂದು ತಿಳಿಸಿದ್ದರು.

ರೈತರ ಪ್ರತಿಭಟನೆಯನ್ನು ಸಾಂವಿಧಾನಿಕ ಎಂದ ಸುಪ್ರೀಂಕೋರ್ಟ್

ಆದರೆ, ಇಂದು ರೈತ ಹೋರಾಟದ ಕುರಿತು ಮಹತ್ವದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್​, "ರೈತರಿಗೆ ಪ್ರತಿಭಟಿಸುವ ಹಕ್ಕಿದೆ. ಹಿಂಸಾಚಾರವಿಲ್ಲದೆ ಪ್ರತಿಭಟನೆಗಳು ಮುಂದುವರಿಯಬಹುದು ಹೀಗಾಗಿ ಪೊಲೀಸರು ಈ ಹೋರಾಟವನ್ನು ನಿಗ್ರಹಿಸಲು ಮುಂದಾಗುವುದು ಸರಿಯಲ್ಲ" ಎಂದು ಮುಖ್ಯ ನ್ಯಾಯಮೂರ್ತಿ ಎಸ್​.ಎ. ಬೊಬ್ಡೆ ತಿಳಿಸಿದ್ದಾರೆ.

ಎಸ್‌ಬಿಐ ಸೇರಿದಂತೆ ಈ 4 ದೊಡ್ಡ ಬ್ಯಾಂಕ್‌ಗಳ ಗ್ರಾಹಕರಿಗೆ Whatsapp ನೀಡುತ್ತಿದೆ ಈ ಸೌಲಭ್ಯ

ಅರ್ಜಿ ವಿಚಾರಣೆ ವೇಳೆ ತಮ್ಮ ವಾದವನ್ನು ಮಂಡಿಸಿದ್ದ ಹಿರಿಯ ವಕೀಲ ಹರೀಶ್​ ಸಾಳ್ವೆ, "ಪ್ರತಿಭಟನೆಗಳು ಕೇವಲ ಪ್ರತಿಭಟನೆಗಳಾಗಿರಬಾರದು. ಈ ಹೋರಾಟದಿಂದ ಸಂಪೂರ್ಣ ದೃಷ್ಟಿಕೋನವನ್ನು ನಿರೂಪಿಸಲು ಸಾಧ್ಯವಿಲ್ಲ" ಎಂದಿದ್ದರು.

ಚಿಲ್ಹಟಿ-ಹಲ್ಡಿಬಾರಿ ಮಾರ್ಗದಲ್ಲಿ 55 ವರ್ಷಗಳ ನಂತರ ಚಲಿಸಿದ ರೈಲು

ಆದರೆ, ಇದಕ್ಕೆ ಉತ್ತರ ನೀಡಿರುವ ಮುಖ್ಯ ನ್ಯಾಯಮೂರ್ತಿ ಎಸ್​.ಎ. ಬೊಬ್ಡೆ, "ಪ್ರತಿಭಟನೆಯ ಉದ್ದೇಶವು ಅಹಿಂಸಾತ್ಮಕ ವಿಧಾನಗಳಿಂದ ಈಡೇರಬೇಕು. ಪ್ರತಿಭಟನೆಗಳು ಸಮಸ್ಯೆಗಳ ಬಗ್ಗೆ ಇರಬೇಕು. ಅನ್ಯಾಯಕ್ಕೊಳಗಾದವರಿಗೆ ಪ್ರತಿಭಟಿಸಲು ತಮ್ಮ ಪರವಾದ ನ್ಯಾಯವನ್ನು ಮಂಡಿಸಲು ಅವಕಾಶ ನೀಡಬೇಕು ಮತ್ತು ಸಮಸ್ಯೆಗೆ ಕಾರಣವಾದ ವ್ಯಕ್ತಿಗಳು ಅದಕ್ಕೆ ತಕ್ಕ ಉತ್ತರ ನೀಡಬೇಕು" ಎಂದು ಅಭಿಪ್ರಾಯಪಟ್ಟಿದ್ದಾರೆ.

China ವಿರುದ್ಧ ಮತ್ತೊಂದು ಸ್ಟ್ರೈಕ್ಗೆ ಮುಂದಾದ ಭಾರತ

Trending News