ಜಿಎಸ್ಟಿ ಹಲವು ಗುಣಾತ್ಮಕ ಬದಲಾವಣೆಗಳನ್ನು ತಂದಿದೆ- ಪ್ರಧಾನಿ ಮೋದಿ

    

Last Updated : Jun 22, 2018, 04:06 PM IST
ಜಿಎಸ್ಟಿ ಹಲವು ಗುಣಾತ್ಮಕ ಬದಲಾವಣೆಗಳನ್ನು ತಂದಿದೆ- ಪ್ರಧಾನಿ ಮೋದಿ  title=

ನವದೆಹಲಿ: ಇಂದು ವಿಜ್ಞಾನದ ಭವನದಲ್ಲಿ ವಾಣಿಜ್ಯ ಇಲಾಖೆ ಕಟ್ಟಡದ ಶಂಕು ಸ್ಥಾಪನೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ ಜಿಎಸ್ಟಿ ಭಾರತದ ಅರ್ಥ ವ್ಯವಸ್ಥೆಗೆ ಹಲವಾರು ಗುಣಾತ್ಮಕ ಬದಲಾವಣೆಗಳನ್ನು ತಂದಿದೆ ಎಂದು ಅಭಿಪ್ರಾಯಪಟ್ಟರು.

ಇಂದು ತಂತ್ರಜ್ಞಾನವು ವಾಣಿಜ್ಯವನ್ನು ಸುಲಭವಾಗಿಸಿದೆ ಅದರ ಉತ್ತಮ ದಿನಗಳು ಮತ್ತೆ ಬರಲಿವೆ ಎಂದು ಅವರು ತಿಳಿಸಿದರು. ಅಲ್ಲದೆ ಜಿಎಸ್ಟಿ ಭಾರತದ ಅರ್ಥ ವ್ಯವಸ್ಥೆಯಲ್ಲಿ ಹಲವಾರು ಗುಣಾತ್ಮಕ ಬದಲಾವಣೆಗಳನ್ನು ತಂದಿದೆ ಎಂದರು. 

ಸುಮಾರು 226 ಕೋಟಿ ರೂಪಾಯಿಗಳಲ್ಲಿ ಕಟ್ಟುತ್ತಿರುವ ಈ ವಾಣಿಜ್ಯ ಇಲಾಖೆ ಕಟ್ಟಡ 2019 ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ವಿಶ್ವಾಸವನ್ನು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದರು. 

Trending News