ನಾಯಿಗೆ 'ಸೋನು' ಎಂದು ಹೆಸರಿಟ್ಟ ಮಹಿಳೆ.. ಕೋಪಗೊಂಡು ಬೆಂಕಿ ಹಚ್ಚಿದ ಪಕ್ಕದ ಮನೆಯವರು.!

ಗುಜರಾತ್‌ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ ಮಹಿಳೆಯೊಬ್ಬಳು ತನ್ನ ನಾಯಿಗೆ ಸೋನು ಎಂದು ಹೆಸರಿಟ್ಟ ಕಾರಣಕ್ಕೆ ನೆರೆಹೊರೆಯವರು ಬೆಂಕಿ ಹಚ್ಚಿ ಕೊಂದಿದ್ದಾರೆ. ಸಂತ್ರಸ್ತೆಯ ಪತಿ ಮನೆಯಲ್ಲಿ ಇಲ್ಲದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

Edited by - Zee Kannada News Desk | Last Updated : Dec 22, 2021, 12:02 PM IST
  • ನೆರೆಮನೆಯವರ ಹೆಂಡತಿಯ ಹೆಸರೂ ಸೋನು
  • ನಾಯಿಗೆ ಸೋನು ಎಂದು ಹೆಸರಿಟ್ಟ ಕಾರಣಕ್ಕೆ ಮಹಿಳೆಗೆ ಬೆಂಕಿ
  • ಸುಟ್ಟಗಾಯಗಳಿಂದ ಬಳಲುತ್ತಿದ್ದ ಮಹಿಳೆ ಆಸ್ಪತ್ರೆಗೆ ದಾಖಲು
ನಾಯಿಗೆ 'ಸೋನು' ಎಂದು ಹೆಸರಿಟ್ಟ ಮಹಿಳೆ.. ಕೋಪಗೊಂಡು ಬೆಂಕಿ ಹಚ್ಚಿದ ಪಕ್ಕದ ಮನೆಯವರು.! title=
ಮಹಿಳೆಗೆ ಬೆಂಕಿ

ಅಹಮದಾಬಾದ್: ತನ್ನ ನಾಯಿಗೆ ಸೋನು ಎಂದು ಹೆಸರಿಟ್ಟಿದ್ದಕ್ಕೆ ಮಹಿಳೆಯೊಬ್ಬರಿಗೆ ಬೆಂಕಿ ಹಚ್ಚಿದ ಘಟನೆ ಗುಜರಾತ್ ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಮಹಿಳೆಗೆ ತೀವ್ರ ಸುಟ್ಟ ಗಾಯಗಳಾಗಿವೆ. 

ನೀತಾಬೆನ್ ಸರ್ವಯ್ಯ (35) ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಸ್ತುತ ಭಾವನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯ ನೆರೆಹೊರೆಯವರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಮಾಹಿತಿ ಪ್ರಕಾರ, ನೀತಾಬೆನ್ ಸರ್ವಯ್ಯ ತನ್ನ ನಾಯಿಗೆ 'ಸೋನು' ಎಂದು ಹೆಸರಿಟ್ಟಿದ್ದಾರೆ. ಪ್ರಾಸಂಗಿಕವಾಗಿ, 'ಸೋನು' ಎಂಬುದು ನಿತಾಬೆನ್ ಸರ್ವಯ್ಯ ಅವರ ಪಕ್ಕದ ಮನೆಯಲ್ಲಿ ವಾಸಿಸುವ ಸುರಭಾಯ್ ಭಾರವಾಡ್ ಅವರ ಹೆಂಡತಿಯ ಹೆಸರೂ ಆಗಿದೆ. ಅದೇ ವಿಷಯ ಸುರಭಾಯಿ ಭಾರವಾಡರಿಗೆ ಇಷ್ಟವಾಗಲಿಲ್ಲ. ತಮ್ಮ ಪತ್ನಿಯ ಹೆಸರನ್ನ ನಾಯಿಗಿಟ್ಟ ಕಾರಣಕ್ಕೆ ಸುರಭಾಯ್ ತನ್ನ ಕೆಲವು ಸಹಚರರೊಂದಿಗೆ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಘಟನೆಯಿಂದ ಇಡೀ ಪ್ರದೇಶದಲ್ಲಿ ಆತಂಕ ಮನೆ ಮಾಡಿದೆ. ನಿತಾಬೆನ್ ಅವರ ಪತಿ ಮತ್ತು ಅವರ ಇಬ್ಬರು ಪುತ್ರರು ಸೋಮವಾರ ಮಧ್ಯಾಹ್ನ ಯಾವುದೋ ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದರು. ನಿತಾಬೆನ್ ತನ್ನ ಕಿರಿಯ ಮಗನೊಂದಿಗೆ ಮನೆಯಲ್ಲಿದ್ದರು. 

ಈ ವೇಳೆ ಸುರಭಾಯ್ ಭಾರವಾಡ್ ಮತ್ತು ಅವರ 5 ಸಹಚರರು ನಿತಾಬೆನ್ ಅವರ ಮನೆಗೆ ಪ್ರವೇಶಿಸಿದರು. ನಿತಾಬೆನ್ ಅವರನ್ನು ನಿಂದಿಸಿದ್ದಾರೆ ಮತ್ತು ನಾಯಿಗೆ 'ಸೋನು' ಎಂದು ಹೆಸರಿಟ್ಟಿದ್ದಕ್ಕಾಗಿ ವಾಗ್ವಾದ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

6 ಜನರ ವಿರುದ್ಧ ಪ್ರಕರಣ ದಾಖಲು:

ನಿತಾಬೆನ್ ಅವರ ಮಾತನ್ನು ನಿರ್ಲಕ್ಷಿಸಿ ತನ್ನ ಅಡುಗೆ ಮನೆಗೆ ಹೋದಳು. ಇದಾದ ಬಳಿಕ ಮೂವರು ಕೂಡ ಬಲವಂತವಾಗಿ ಅಡುಗೆ ಕೋಣೆಗೆ ನುಗ್ಗಿ ನಿತಾಬೆನ್ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಸ್ವಲ್ಪ ಸಮಯದ ನಂತರ ನಿತಾಬೆನ್ ಅವರ ಪತಿ ಮನೆಗೆ ಬಂದಿದ್ದಾರೆ. ಬೆಂಕಿಯನ್ನು ಕಂಬಳಿಗಳ ಮೂಲಕ ನಂದಿಸಿದ್ದಾರೆ. 

ಘಟನೆಯಲ್ಲಿ ನಿತಾಬೆನ್ ಅವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿಂದೆಯೂ ನೀರಿನ ವಿಚಾರವಾಗಿ ನಿತಾಬೆನ್ ಮತ್ತು ಆರೋಪಿಗಳ ನಡುವೆ ಹಲವು ಬಾರಿ ಜಗಳ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ 6 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಹದಗೆಡಲು ಅಮೆರಿಕವೇ ಕಾರಣ: ಪಾಕ್ ಪ್ರಧಾನಿ ಇಮ್ರಾನ್ ಖಾನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News