ಜ್ಞಾನವಾಪಿಯಲ್ಲಿ ಸದ್ದು ಮಾಡಿದ್ದ ‘ಪೂಜಾ ಸ್ಥಳಗಳ ಕಾಯ್ದೆ’ ರಾಮಮಂದಿರಕ್ಕೆ ಏಕೆ ಅಡ್ಡಿಯಾಗಿಲ್ಲ? ಈ ಕಾನೂನು ಹೇಳುವುದೇನು? ಮಹತ್ವದ ಮಾಹಿತಿ ಇಲ್ಲಿದೆ

What is the Places of Worship Act, 1991: ನಾವಿಂದು ಈ ವರದಿಯಲ್ಲಿ ಆರಾಧನಾ ಸ್ಥಳಗಳ ಕಾಯ್ದೆ 1991 ಅಥವಾ ಪೂಜಾ ಸ್ಥಳಗಳ ಕಾಯ್ದೆ 1991 ಎಂದರೇನು? ಈ ಕಾನೂನು ಹೇಳುವುದೇನು? ಎಂಬ ವಿಚಾರದ ಕುರಿತು ನಿಮಗೆ ಮಾಹಿತಿ ನೀಡಲಿದ್ದೇವೆ.

Written by - Bhavishya Shetty | Last Updated : Feb 5, 2024, 05:36 PM IST
    • ಆರಾಧನಾ ಸ್ಥಳಗಳ ಕಾಯ್ದೆ 1991 ಅಥವಾ ಪೂಜಾ ಸ್ಥಳಗಳ ಕಾಯ್ದೆ 1991 ಏನು?
    • ಆಗಸ್ಟ್ 15, 1947ರ ಮೊದಲು ನಿರ್ಮಿಸಲಾದ ಧಾರ್ಮಿಕ ಸ್ಥಳಗಳಿಗೆ ರಕ್ಷಣೆ ನೀಡಲಾಗಿದೆ.
    • ಪಿ.ವಿ.ನರಸಿಂಹರಾವ್ ಅವರ ಸರ್ಕಾರ ಜಾರಿಗೆ ತಂದ 1991 ರಲ್ಲಿ ಪೂಜಾ ಸ್ಥಳಗಳ ಕಾಯ್ದೆ
ಜ್ಞಾನವಾಪಿಯಲ್ಲಿ ಸದ್ದು ಮಾಡಿದ್ದ ‘ಪೂಜಾ ಸ್ಥಳಗಳ ಕಾಯ್ದೆ’ ರಾಮಮಂದಿರಕ್ಕೆ ಏಕೆ ಅಡ್ಡಿಯಾಗಿಲ್ಲ? ಈ ಕಾನೂನು ಹೇಳುವುದೇನು? ಮಹತ್ವದ ಮಾಹಿತಿ ಇಲ್ಲಿದೆ title=
Places of Worship Act 1991

Places Of Worship Act 1991: ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ವ್ಯಾಸ ಕುಟುಂಬಕ್ಕೆ ಪೂಜೆ ಮಾಡಲು ವಾರಣಾಸಿ ಜಿಲ್ಲಾ ನ್ಯಾಯಾಲಯವು ಅನುಮತಿ ನೀಡಿದೆ. ಆದರೆ ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು ಜಿಲ್ಲಾ ನ್ಯಾಯಾಲಯದ ತೀರ್ಪಿನ ವಿರುದ್ಧ ಅಲಹಾಬಾದ್ ಹೈಕೋರ್ಟ್‌ ಮೇಲೇರಿದ್ದು, ಪೂಜಾ ಸ್ಥಳಗಳ ಕಾಯ್ದೆ 1991 ಅನ್ನು ಉಲ್ಲೇಖಿಸಿ ಜಿಲ್ಲಾ ನ್ಯಾಯಾಧೀಶರ ತೀರ್ಪನ್ನು ಪ್ರಶ್ನಿಸಿದೆ.

ಇದನ್ನೂ ಓದಿ: ಈ ಜನ್ಮರಾಶಿಗಳಿಗೆ ಮುಂಬರುವ ದಿನಗಳೆಲ್ಲಾ ಹಬ್ಬವೋ ಹಬ್ಬ: ಅದೃಷ್ಟಮಯ ಬಾಳಲ್ಲಿ ಸಾಲು ಸಾಲು ವಿಜಯಗಳೇ ಬೆನ್ನೇರುವುದು!

ನಾವಿಂದು ಈ ವರದಿಯಲ್ಲಿ ಆರಾಧನಾ ಸ್ಥಳಗಳ ಕಾಯ್ದೆ 1991 ಅಥವಾ ಪೂಜಾ ಸ್ಥಳಗಳ ಕಾಯ್ದೆ 1991 ಎಂದರೇನು? ಈ ಕಾನೂನು ಹೇಳುವುದೇನು? ಎಂಬ ವಿಚಾರದ ಕುರಿತು ನಿಮಗೆ ಮಾಹಿತಿ ನೀಡಲಿದ್ದೇವೆ.

ಪೂಜಾ ಸ್ಥಳಗಳ ಕಾಯಿದೆ ಎಂದರೇನು?

ಪಿ.ವಿ.ನರಸಿಂಹರಾವ್ ಅವರ ಸರ್ಕಾರವು 1991 ರಲ್ಲಿ ಪೂಜಾ ಸ್ಥಳಗಳ ಕಾಯ್ದೆಯನ್ನು ಜಾರಿಗೆ ತಂದಿತು, ಇದನ್ನು ವಿಶೇಷ ನಿಬಂಧನೆಗಳ ಅಡಿಯಲ್ಲಿ ಮಾಡಲಾಯಿತು. ಈ ಕಾನೂನಿನ ಅಡಿಯಲ್ಲಿ, ಆಗಸ್ಟ್ 15, 1947ರ ಮೊದಲು ನಿರ್ಮಿಸಲಾದ ಧಾರ್ಮಿಕ ಸ್ಥಳಗಳಿಗೆ ರಕ್ಷಣೆ ನೀಡಲಾಗಿದೆ. ಅಂದರೆ, ಸ್ವಾತಂತ್ರ್ಯ ಪೂರ್ವದಲ್ಲಿ ಅಸ್ತಿತ್ವದಲ್ಲಿದ್ದ ಯಾವುದೇ ಧರ್ಮದ ಆರಾಧನಾ ಸ್ಥಳವನ್ನು ಬೇರೆ ಯಾವುದೇ ಧರ್ಮದ ಆರಾಧನಾ ಸ್ಥಳವಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಈ ಕಾಯಿದೆಯ ಅಡಿಯಲ್ಲಿ, ಯಾವುದೇ ಧಾರ್ಮಿಕ ಸ್ಥಳದ ಸ್ಥಿತಿಯನ್ನು ಬದಲಾಯಿಸುವುದು ಕೂಡ ಕಾನೂನುಬಾಹಿರವಾಗಿದೆ. ಅಷ್ಟೇ ಅಲ್ಲ, ಈ ಕಾನೂನಿನ ಪ್ರಕಾರ ಅನ್ಯ ಧರ್ಮದವರು ಒತ್ತುವರಿ ಮಾಡಿಕೊಂಡಿರುವ ಸಾಕ್ಷ್ಯದ ಮೇಲೂ ಕ್ರಮ ಕೈಗೊಳ್ಳುವಂತಿಲ್ಲ. ಇದರೊಂದಿಗೆ, ಕಾಯ್ದೆಯ ಪ್ರಕಾರ, ಯಾರಾದರೂ ಈ ನಿಯಮಗಳನ್ನು ಉಲ್ಲಂಘಿಸಲು ಪ್ರಯತ್ನಿಸಿದರೆ, ಅವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಇದರೊಂದಿಗೆ ದಂಡವನ್ನೂ ಹಾಕಬಹುದು.

ಇದನ್ನೂ ಓದಿ: KSRTCಗೆ ವರ್ಷದೊಳಗೆ 1000 ಬಸ್ ಸೇರ್ಪಡೆ; ಮಹಿಳಾ ಸಬಲೀಕರಣಕ್ಕೆ ಪೂರಕವಾದ ಶಕ್ತಿ ಯೋಜನೆ: ಸಿಎಂ

ರಾಮಮಂದಿಯ ಕಾಯಿದೆಯಿಂದ ಪ್ರತ್ಯೇಕ:

ಆರಾಧನಾ ಸ್ಥಳಗಳ ಕಾಯಿದೆ 1991 ಅಂದರೆ ಪೂಜಾ ಸ್ಥಳಗಳ ಕಾಯ್ದೆ ಅಯೋಧ್ಯೆಯಲ್ಲಿ ರಾಮಮಂದಿರ ಆಂದೋಲನವು ಉತ್ತುಂಗದಲ್ಲಿದ್ದಾಗ ಜಾರಿಗೆ ತರಲಾಯಿತು. ಆಂದೋಲನದ ದೃಷ್ಟಿಯಿಂದ, ದೇಶದಲ್ಲಿ ಅನೇಕ ದೇವಾಲಯಗಳು ಮತ್ತು ಮಸೀದಿಗಳ ಬಗ್ಗೆ ವಿವಾದಗಳು ಬರಲು ಪ್ರಾರಂಭಿಸಿದವು, ಅದನ್ನು ಗಮನದಲ್ಲಿಟ್ಟುಕೊಂಡು ಈ ಕಾನೂನನ್ನು ತರಲಾಯಿತು. ಆದರೆ, ರಾಮ ಮಂದಿರ ವಿವಾದವನ್ನು ಈ ಕಾನೂನಿನಿಂದ ಪ್ರತ್ಯೇಕವಾಗಿ ಇಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಬ್ರಿಟಿಷರ ಕಾಲದಿಂದಲೂ ಅಯೋಧ್ಯೆ ಪ್ರಕರಣ ನ್ಯಾಯಾಲಯದಲ್ಲಿದೆ ಎಂಬ ವಾದವನ್ನು ನೀಡಲಾಯಿತು. ಹಾಗಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಈ ಕಾನೂನು ಅಡ್ಡಿಯಾಗಲಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News