ಹೈಕೋರ್ಟ್ ನ್ಯಾಯಾಧೀಶರಿಂದ ಕೊರೆಗಾಂವ್ ಯುದ್ಧದ ವಾರ್ಷಿಕೋತ್ಸವದಲ್ಲಿನ ಹಿಂಸಾಚಾರದ ತನಿಖೆ - ಮುಖ್ಯಮಂತ್ರಿ ಫಡ್ನವಿಸ್

    

Last Updated : Jan 2, 2018, 08:56 PM IST
ಹೈಕೋರ್ಟ್ ನ್ಯಾಯಾಧೀಶರಿಂದ ಕೊರೆಗಾಂವ್ ಯುದ್ಧದ ವಾರ್ಷಿಕೋತ್ಸವದಲ್ಲಿನ ಹಿಂಸಾಚಾರದ ತನಿಖೆ  - ಮುಖ್ಯಮಂತ್ರಿ ಫಡ್ನವಿಸ್ title=

ಮುಂಬೈ: ಪುಣೆ ಜಿಲ್ಲೆಯ ಭೀಮಾ-ಕೊರೆಗಾಂವ್ ಯುದ್ಧದ 200ನೇ ವಾರ್ಷಿಕೋತ್ಸವದ ಆಚರಣೆಯಲ್ಲಿ ಉಂಟಾದ ಹಿಂಸಾಚಾರದ ನ್ಯಾಯಾಂಗ ವಿಚಾರಣೆಯ ನೇತೃತ್ವವನ್ನು ಹೈಕೋರ್ಟ್ ನ್ಯಾಯಾಧೀಶರು ವಹಿಸಿಕೊಳ್ಳಲಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಿಳಿಸಿದ್ದಾರೆ.

ಭೀಮಾ-ಕೊರೆಗಾಂವ್ ಯುದ್ಧದಲ್ಲಿ ಬ್ರಿಟಿಷ್ ವಿಜಯದ ಕಾರಣದಿಂದಾಗಿ ಆಚರಣೆಯನ್ನು ಮರಾಠರು ವಿರೋಧಿಸಿದ್ದರು ಈ ಸಂದರ್ಭದಲ್ಲಿ ದಲಿತರಿಗೂ ಮರಾಠರ ನಡುವೆ ಮಾರಾಮಾರಿ ನಡೆದಿತ್ತು ಈ ಸಂದರ್ಭದಲ್ಲಿ ಯುವಕನೊಬ್ಬ ಮೃತಪಟ್ಟಿದ್ದನು. 

ಈ ಘಟನೆಗೆ ಸಂಬಂಧಿಸಿದಂತೆ ಮುಂಬೈನಲ್ಲಿ ಸೇರಿದಂತೆ ಪ್ರತಿಭಟನಾಕಾರರು ಚಂಬುರ್ನಲ್ಲಿ ಒಂದು ರೈಲು ರೊಕೊವನ್ನು ಏರ್ಪಡಿಸಿದ್ದಲ್ಲದೆ, ರಾಜ್ಯದ ವಿವಿಧ ಭಾಗಗಳಲ್ಲಿ ಕೂಡಾ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದರು. 

ಚೆಂಬೂರು, ವಿಖೋಳಿ, ಮನ್ಕುರ್ದ್ ಮತ್ತು ಗೋವಂಡಿಯ ಯುವಕರ ಗುಂಪು ಪ್ರತಿಭಟನೆಯಲ್ಲಿ ಸೇರಿದವು ಇದೆ ಸಂದರ್ಭದಲ್ಲಿ ರಾಷ್ಟ್ರೀಯ ಸುದ್ದಿ ಚಾನಲ್ನ ಹಿರಿಯ ಪತ್ರಕರ್ತರು ಹಲ್ಲೆಗೊಳಗಾದರು. ಪ್ರತಿಭಟನೆ ಸಂದರ್ಭದಲ್ಲಿ ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳು ಸಂಪೂರ್ಣವಾಗಿ ಮುಚ್ಚಿದ್ದವು.

ಪುಣೆ ಜಿಲ್ಲೆಯ ಹಿಂಸಾಚಾರ ಘಟನೆಯನ್ನು ಹೈಕೋರ್ಟ್ ನ್ಯಾಯಾಧೀಶರು ತನಿಖೆ ನಡೆಸಲಿದ್ದಾರೆ ಎಂದು ಫಡ್ನಾವಿಸ್ ಹೇಳಿದ್ದಾರೆ. ಹತ್ಯೆ ಮಾಡಿದ ಯುವಕರಿಗೆ 10 ಲಕ್ಷ ರೂಗಳ ಪರಿಹಾರ ನಿಧಿಯನ್ನು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.

Trending News