Mannu Bhandari - ಹಿಂದಿ ಸಾಹಿತ್ಯ ಲೋಕದಲ್ಲಿ (Hindi Literature World) ವಿಶಿಷ್ಟವಾದ ಗುರುತನ್ನು ಹೊಂದಿದ್ದ ಲೇಖಕಿ ಮನ್ನು ಭಂಡಾರಿ (Writer Mannu Bhandari) ಅವರು ಇಹಲೋಕಕ್ಕೆ ವಿದಾಯ ಹೇಳಿದ್ದಾರೆ. ಭಂಡಾರಿ ಅವರು 90ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಮನ್ನು ಭಂಡಾರಿಯವರು 3 ಏಪ್ರಿಲ್ 1931 ರಂದು ಮಧ್ಯಪ್ರದೇಶದ ಮಂದ್ಸೌರ್ ನಲ್ಲಿ ಜನಿಸಿದ್ದರು. ಮನ್ನು ಭಂಡಾರಿ ತನ್ನ ಜೀವಿತಾವಧಿಯಲ್ಲಿ ಎರಡು ಹಿಂದಿ ಕಾದಂಬರಿಗಳಾದ 'ಆಪ್ ಕಾ ಬಂಟಿ' (Aap Ka Banti) ಮತ್ತು 'ಮಹಾಭೋಜ್'ಗೆ (Mahabhoj) ಹೆಸರುವಾಸಿಯಾಗಿದ್ದಾರೆ. ಹೊಸ ಕಥೆಯ ಚಳುವಳಿಯ ಪ್ರವರ್ತಕರಲ್ಲಿ ಮನ್ನು ಭಂಡಾರಿ ಕೂಡ ಒಬ್ಬರು ಎಂದು ಬಿಂಬಿಸಲಾಗುತ್ತಿತ್ತು.
ಮಹಿಳೆಯರ ಸ್ವತಂತ್ರ ಹಾಗೂ ಬೌದ್ಧಿಕ ಚಾರಿತ್ರ್ಯಕ್ಕೆ ಜೀವ ತುಂಬಿದ ಲೇಖಕಿ
ಮಹಿಳೆಯರ ಸ್ವತಂತ್ರ ಹಾಗೂ ಬೌದ್ಧಿಕ ಪಾತ್ರಗಳಿಗೆ ಜೀವ ತುಂಬಿದ ಲೇಖಕಿಯರಲ್ಲಿ ಮಣ್ಣು ಭಂಡಾರಿ ಕೂಡ ಒಬ್ಬರು. ಲೈಂಗಿಕ ನಡವಳಿಕೆ, ಭಾವನಾತ್ಮಕ, ಮಾನಸಿಕ ಮತ್ತು ಆರ್ಥಿಕ ದುರುಪಯೋಗದಂತಹ ಅಂಶಗಳನ್ನು ಪರಿಗಣಿಸುವ ಮೂಲಕ ಅವರು ಭಾರತೀಯ ಸಮಾಜದಲ್ಲಿ ಮಹಿಳೆಯರ ಅತ್ಯಂತ ದುರ್ಬಲ ಸ್ಥಾನವನ್ನು ಎತ್ತಿ ತೋರಿಸಿದ್ದರು. ಮನ್ನು ಭಂಡಾರಿಯವರ ಕಥೆಗಳು ಸ್ತ್ರೀ ಪಾತ್ರಗಳನ್ನು ಗಟ್ಟಿಮುಟ್ಟಾದ ಸ್ವತಂತ್ರ ವ್ಯಕ್ತಿಗಳನ್ನು ಚಿತ್ರಿಸುತ್ತವೆ ಮತ್ತು ಹಳೆಯ ರೂಢಿಗಳನ್ನು ಮುರಿದು 'ಹೊಸ ಮಹಿಳೆ'ಯ ಚಿತ್ರಣವನ್ನು ಮೂಡಿಸುತ್ತವೆ.
ಲಿಂಗ ಅಸಮಾನತೆಗೆ ಸಂಬಂಧಿಸಿದ ಕಥೆಗಳು
ಮನ್ನು ಭಂಡಾರಿಯವರ ಹೆಚ್ಚಿನ ಕಥೆಗಳು ಲಿಂಗ ಅಸಮಾನತೆಗೆ ಸಂಬಂಧಿಸಿವೆ. ಅವರು ಕೆಲಸ ಮಾಡುವ ಮತ್ತು ವಿದ್ಯಾವಂತ ಮಹಿಳೆಯರ ಮೇಲೆ ಸಾಕಷ್ಟು ಬರಹಗಳನ್ನು ಬರೆದಿದ್ದಾರೆ. ಮನ್ನು ಭಂಡಾರಿ ತಮ್ಮ ಎರಡನೇ ಕಾದಂಬರಿ 'ಆಪ್ ಕಾ ಬಂಟಿ'ಯ ಹಕ್ಕುಗಳನ್ನು ಮಾರಾಟ ಮಾಡಿದ್ದಾರೆ. ನಂತರ ಅದನ್ನು ಧರ್ಮೇಂದ್ರ ಗೋಯೆಲ್ ನಿರ್ಮಾಣದ ಹಾಗೂ ಶಿಶಿರ್ ಮಿಶ್ರಾ ನಿರ್ದೇಶಿಸಿದ ಚಲನಚಿತ್ರವಾಗಿ ಬಳಸಲಾಯಿತು.
ಮನ್ನು ಭಂಡಾರಿ ಒಂದಕ್ಕಿಂತ ಹೆಚ್ಚು ಕಥೆಗಳು ಮತ್ತು ಕಾದಂಬರಿಗಳನ್ನು ಬರೆದಿದ್ದಾರೆ. ಅವರು ಬರೆದ ಪುಸ್ತಕಗಳ ಮೇಲೆ ಚಲನಚಿತ್ರಗಳು ಕೂಡ ನಿರ್ಮಾಣಗೊಂಡಿವೆ ಅವರ 'ಯಹಿ ಸಚ್ ಹೈ' ಕಥೆಯನ್ನು ಆಧರಿಸಿ 1974 ರಲ್ಲಿ 'ರಜನಿಗಂಧಾ' (Rajanigandha) ಚಿತ್ರ ನಿರ್ಮಾಣಗೊಂಡಿದೆ. ಬಾಸು ಚಟರ್ಜಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅವರ ಪ್ರಸಿದ್ಧ ಕೃತಿಗಳಲ್ಲಿ ಒಂದು 'ಆಪ್ಕಾ ಬಂಟಿ'. ಭಂಡಾರಿಯವರ ಪತಿ ಪ್ರಸಿದ್ಧ ಸಾಹಿತಿ ರಾಜೇಂದ್ರ ಯಾದವ್. ಅವರ ತಂದೆ-ತಾಯಿ ಅವರಿಗೆ ಮಹೇಂದ್ರ ಕುಮಾರಿ ಎಂದು ಹೆಸರಿಟ್ಟಿದ್ದರು. ಆದರೆ ಬರವಣಿಗೆ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಅವರು ತಮ್ಮ ಹೆಸರನ್ನು ಮನ್ನು ಎಂದು ಬದಲಾಯಿಸಿಕೊಂಡರು. ಇವರನ್ನು ಬಾಲ್ಯದಲ್ಲಿ ಮನ್ನು ಎಂದೇ ಜನ ಕರೆಯುತ್ತಿದ್ದದ್ದು ಇದರ ಹಿಂದಿನ ಕಾರಣ. ಅವರ ಜೀವನದುದ್ದಕ್ಕೂ ಜನರು ಅವರನ್ನು ಮನ್ನು ಭಂಡಾರಿ ಎಂದು ಕರೆಯುತ್ತಿದ್ದರು.
ಮನ್ನು ಭಂಡಾರಿ ಅವರು ದೆಹಲಿ ವಿಶ್ವವಿದ್ಯಾನಿಲಯದ ಮಿರಾಂಡಾ ಹೌಸ್ ಕಾಲೇಜಿನಲ್ಲಿ ಸುದೀರ್ಘ ಬೋಧನಾ ಕೆಲಸವನ್ನೂ ಮಾಡಿದ್ದಾರೆ. ಹಿಂದಿ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆಗಾಗಿ ಜನರು ಅವರನ್ನು ನೆನಪಿಸಿಕೊಳ್ಳುತ್ತಾರೆ. 'ಮೈ ಹಾರ್ ಗಯಿ', 'ತೀನ್ ನಿಗಾಹೊಂಕಿ ಏಕ್ ತಸ್ವೀರ್', 'ಏಕ್ ಪ್ಲೇಟ್ಸೈಲಾಬ್', 'ಯೇ ಸಚ್ ಹೈ', 'ಆಂಖೋ ದೇಖಾ ಝೂಟ್' ಮತ್ತು 'ತ್ರಿಶಂಕು' ಸಂಗ್ರಹಗಳನ್ನು ಓದಿದ ನಂತರ ಜನರಿಗೆ ಮನ್ನು ಅವರ ನಿಜವಾದ ವ್ಯಕ್ತಿತ್ವದ ಝಲಕ್ ಸಿಗುತ್ತದೆ. ಮನ್ನು ಭಂಡಾರಿ ಅವರು ಪ್ರಸಿದ್ಧ ಹಿಂದಿ ಬರಹಗಾರ ರಾಜೇಂದ್ರ ಯಾದವ್ ಅವರನ್ನು ವಿವಾಹವಾಗಿದ್ದರು. ಅವರು ಹಂಸ್ ನ ಸಂಪಾದಕರೂ ಆಗಿದ್ದರು. ಆದರೆ, ಸ್ವಲ್ಪ ಸಮಯದ ನಂತರ ಇಬ್ಬರ ಸಂಬಂಧವು ಕೊನೆಗೊಳ್ಳುವ ಹಂತಕ್ಕೆ ಬಂದಿತು. ಮದುವೆಯಾಗಿ ದಶಕಗಳ ನಂತರ ಇಬ್ಬರೂ ಬೇರ್ಪಟ್ಟರು. ರಾಜೇಂದ್ರ ಯಾದವ್ ಅವರ ಕೊನೆಯ ಸಮಯದವರೆಗೆ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
‘ಆಪ್ಕಾ ಬಂಟಿ’ ಕಾದಂಬರಿಯನ್ನು ಓದಿದರೆ ಅವರ ಬದುಕಿನ ನಲಿವುಗಳನ್ನು ಅರ್ಥ ಮಾಡಿಕೊಳ್ಳಬಹುದು. ಇದರಲ್ಲಿ ತಮ್ಮ ದಾಂಪತ್ಯ ಮುರಿದುಬಿದ್ದ ನಂತರ ನಡೆದ ದುರಂತವನ್ನು ತಿಳಿಸಿದ್ದಾರೆ. ಈ ಕಾದಂಬರಿಯು ಅವರಿಗೆ ಅಪಾರ ಖ್ಯಾತಿಯನ್ನು ತಂದುಕೊಟ್ಟಿತು. ಮನ್ನು ಭಂಡಾರಿಯವರ ಇನ್ನೊಂದು ಕಾದಂಬರಿ 'ಮಹಾಭೋಜ' ರಾಜಕೀಯ, ಸಾಮಾಜಿಕ ಜೀವನದ ಮೌಲ್ಯಹೀನತೆ, ಗಿಮಿಕ್ಗಳನ್ನು ಹೇಳುತ್ತದೆ. ಈ ಕಾದಂಬರಿಯಲ್ಲಿ ಬಿಸೇಸರ್ ಎಂಬ ಪಾತ್ರದ ಸಾವಿನ ನಂತರ ಎಲ್ಲ ರಾಜಕಾರಣಿಗಳು ಅವರನ್ನು ರಾಜಕೀಯ ಕೇಂದ್ರದಲ್ಲಿಟ್ಟುಕೊಂಡು ತಮ್ಮ ಸ್ವಾರ್ಥವನ್ನು ಸಾಬೀತುಪಡಿಸುವ ಹಳ್ಳಿಯ ಸೊಗಡಿನ ಕಥೆಯಿದೆ.
ಇದನ್ನೂ ಓದಿ-ಚಾಮುಂಡಿ ಬೆಟ್ಟ ಉಳಿಸಿ ಸಹಿ ‘ಆಂದೋಲನ’ಕ್ಕೆ ಕೈಜೋಡಿಸಿ: ಯದುವೀರ್ ಮನವಿ
ಈ ಗೌರವಗಳು ಲಭಿಸಿವೆ
ಮನ್ನು ಭಂಡಾರಿ ಅವರ ಸಾಹಿತ್ಯಿಕ ಸಾಧನೆಗಳಿಗಾಗಿ ಶಿಖರ್ ಸಮ್ಮಾನ್ ಸೇರಿದಂತೆ ಅನೇಕ ದೊಡ್ಡ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ಭಾರತೀಯ ಭಾಷಾ ಪರಿಷತ್ತು ಕೋಲ್ಕತ್ತಾ, ರಾಜಸ್ಥಾನ ಸಂಗೀತ ನಾಟಕ ಅಕಾಡೆಮಿ, ಉತ್ತರ ಪ್ರದೇಶ ಹಿಂದಿ ಸಂಸ್ಥಾನದಿಂದ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ-ಕಾಶ್ಮೀರಿ ಪಂಡಿತರ ನೋವನ್ನು ಮತಕ್ಕಾಗಿ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ- ಮೆಹಬೂಬಾ ಆರೋಪ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ