ಕತ್ತೆ ಜೀಬ್ರಾ ಆಗಿದ್ದು ಹೇಗೆ ಗೊತ್ತಾ? ವೀಡಿಯೋ

   

Last Updated : Jul 27, 2018, 07:51 PM IST
ಕತ್ತೆ ಜೀಬ್ರಾ ಆಗಿದ್ದು ಹೇಗೆ ಗೊತ್ತಾ? ವೀಡಿಯೋ title=
Photo courtesy: facebook

ಮುಂಬೈ: ಈ ವೈರಲ್ ಜಮಾನದಲ್ಲಿ  ಯಾವುದು ಏನಾಗುತ್ತೋ ಎನ್ನುವುದೇ ಗೊಂದಲಮಯವಾಗಿದೆ ಈಗ ಇಂತಹದ್ದೇ ಸಂಗತಿಯೊಂದು ಈ ವೈರಲ್ ಆಗಿರುವ ವಿಡಿಯೋದಲ್ಲಿ ನೀವು  ನೋಡಬಹುದು. 

ಹಾಗಾದರೆ ಈ ಕೂತೂಹಲ ಸಂಗತಿ ಏನಂತೀರಾ ಹಾಗಾದ್ರೆ ? ಇಲ್ಲಿ ಕತ್ತೇಯೊಂದು ಜೀಬ್ರಾ ಆಗಿ ಪರಿವರ್ತನೆಯಾಗಿದೆ  ಅದೇಗೆ ಅಂತೀರಾ ಇಲ್ಲಿ  ಓದಿ. ಮಹಮ್ಮದ ಎ ಸರ್ಹಾನ್ ಎನ್ನುವ ವ್ಯಕ್ತಿ  ಕತ್ತೆ  ಜೀಬ್ರಾ ಅದಾಗ ಎನ್ನುವ ಶೀರ್ಷಿಕೆ  ನೀಡಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾನೆ.

ಮೂಲತ ಈಜಿಪ್ಟ್ ಮೂಲದ ವ್ಯಕ್ತಿಯಾಗಿರುವ ಈ ವ್ಯಕ್ತಿ ಕೈರೋದ  ಇಂಟರ್ನ್ಯಾಷನಲ್ ಗಾರ್ಡೆನ್ ಮುನ್ಸಿಪಾಲ್ ಪಾರ್ಕ್ ಗೆ ಭೇಟಿ ನೀಡಿದ ನಂತರ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಇಲ್ಲಿ ವಿಶೇಷವೆಂದರೆ ಕತ್ತೆಗೆ ಜೀಬ್ರಾ ರೀತಿಯ ಬಣ್ಣ ಬಳಿದಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Trending News