ನವದದೆಹಲಿ: 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಬಂಧ ಇನ್ನೂ ಎಷ್ಟು ದಿನಗಳ ಕಾಲ ಮುಂದುವರೆಯಲಿದೆ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಮೂರು ನ್ಯಾಯಾಧೀಶರ ಪೀಠವು ವಿಚಾರಣೆ ನಡೆಸಿ 'ನಿಮಗೆ ಎಷ್ಟು ದಿನ ನಿರ್ಬಂಧಗಳು ಬೇಕು? ಇದು ಈಗಾಗಲೇ 2 ತಿಂಗಳುಗಳು ಕಳೆದಿವೆ. ಈ ಬಗ್ಗೆ ನೀವು ಸ್ಪಷ್ಟವಾಗಿ ಇತರ ವಿಧಾನಗಳನ್ನು ನೀವು ಕಂಡು ಹಿಡಿಯಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕೇಳಿದೆ.
'ನೀವು ನಿರ್ಬಂಧಗಳನ್ನು ವಿಧಿಸಬಹುದು, ಆದರೆ ನಿಮ್ಮ ನಿರ್ಧಾರಗಳನ್ನು ನೀವು ಪರಿಶೀಲಿಸಬೇಕು' ಎಂದು ಕೋರ್ಟ್ ಹೇಳಿದೆ. ಜಮ್ಮು ಮತ್ತು ಕಾಶ್ಮೀರ ಆಡಳಿತದ ಸಾಲಿಸಿಟರ್ ಜನರಲ್ ಶೇಕಡಾ 99 ರಷ್ಟು ನಿರ್ಬಂಧವನ್ನು ಹಿಂತೆಗೆದುಕೊಂಡಿದ್ದು ಮತ್ತು ಅದನ್ನು ಪ್ರತಿದಿನ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಈಗ ಮುಂದಿನ ವಿಚಾರಣೆಯನ್ನು ಕೋರ್ಟ್ ನವಂಬರ್ 5ಕ್ಕೆ ಮುಂದೂಡಿದೆ.