ಭಾರತದ ಎಷ್ಟು ಜನರು ಯಾವ SOCIAL MEDIA PLATFORM ಬಳಸುತ್ತಾರೆ?

ಚೀನಾ ಬಳಿಕ ವಿಶ್ವಾದ್ಯಂತ ಅತಿ ಹೆಚ್ಚು ಇಂಟರ್ನೆಟ್ ಬಳಸುವವರು ಭಾರತದಲ್ಲಿದ್ದಾರೆ. ವಿಶ್ವಾದ್ಯಂತ ಅತಿ ಹೆಚ್ಚು FACEBOOK ಬಳಸುವವರು ಭಾರತದಲ್ಲಿದ್ದಾರೆ.

Last Updated : Mar 3, 2020, 06:46 PM IST
ಭಾರತದ ಎಷ್ಟು ಜನರು ಯಾವ SOCIAL MEDIA PLATFORM ಬಳಸುತ್ತಾರೆ? title=

ನವದೆಹಲಿ: ವಿಶ್ವಾದ್ಯಂತ ಸಾಮಾಜಿಕ ಮಾಧ್ಯಮಗಳನ್ನು ಬಳಸುವವರ ಸಂಖ್ಯೆಯಲ್ಲಿ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಕೋಟ್ಯಂತರ ಜನರು ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾ ಗ್ರಾಮ್, ಯೂಟ್ಯೂಬ್ ಹಾಗೂ ಟಿಕ್ ಟಾಕ್ ಎಣಿಸಲಾರದಷ್ಟು ಪೋಸ್ಟ್ ಗಳು ಹಂಚಿಕೆಯಾಗುತ್ತವೆ. ಅಷ್ಟೇ ಯಾಕೆ ವಿಶ್ವಾದ್ಯಂತ ಅತಿ ಹೆಚ್ಚು ಫೇಸ್ ಬುಕ್ ಬಳಸುವವರು ಭಾರತದಲ್ಲಿದ್ದಾರೆ ಎಂದರೆ ನೀವು ನಂಬಲೇ ಬೇಕು. ಫೇಸ್ ಬುಕ್ ಅನ್ನು ಹೊರತುಪಡಿಸಿ ಟ್ವಿಟ್ಟರ್, ಯೂಟ್ಯೂಬ್ ಹಾಗೂ ಟಿಕ್ ಟಾಕ್ ಪ್ಲಾಟ್ಫಾರ್ಮ್ ಗಳಲ್ಲಿಯೂ ಕೂಡ ಭಾರತೀಯ ಬಳಕೆದಾರರು ವ್ಯಾಪಕ ಸಕ್ರೀಯರಾಗಿರುತ್ತಾರೆ.

ಬೇರೆ ಬೇರೆ ಸಾಮಾಜಿಕ ಮಾಧ್ಯಮಗಳ ಪ್ಲಾಟ್ ಫಾರಂ ಗಳ ಮೇಲೆ ಎಷ್ಟು ಜನ ಭಾರತೀಯರಿದ್ದಾರೆ?

  • Facebook- ಸುಮಾರು 346.2 ಮಿಲಿಯನ್
  • Twitter- ಸುಮಾರು 11.45 ಮಿಲಿಯನ್
  • Instagram- ಸುಮಾರು 80 ಮಿಲಿಯನ್
  • YouTube- ಸುಮಾರು 265 ಮಿಲಿಯನ್
  • Tik Tok- ಸುಮಾರು 300 ಮಿಲಿಯನ್

ಫೇಸ್ ಬುಕ್

  • ವಿಶ್ವಾದ್ಯಂತ ಸುಮಾರು 250 ಕೋಟಿ ಬಳಕೆದಾರರು ಫೇಸ್ ಬುಕ್ ಬಳಸುತ್ತಾರೆ
  • ವಿಶ್ವದ ಪ್ರತಿ ಮೂವರು ಬಳಕೆದಾರರಲ್ಲಿ ಓರ್ವ ಭಾರತೀಯ ಬಳಕೆದಾರ ಫೇಸ್ ಬುಕ್ ಬಳಸುತ್ತಾನೆ.
  • ವಿಶ್ವಾದ್ಯಂತ ಸುಮಾರು 70 ನಗರಗಳಲ್ಲಿ ಫೇಸ್ ಬುಕ್ ನ ಕಚೇರಿಗಳಿವೆ.
  • ಫೇಸ್ ಬುಕ್ ನಲ್ಲಿ ಸುಮಾರು 45 ಸಾವಿರ ನೌಕರರು ಪೂರ್ಣಾವಧಿಗೆ ಕಾರ್ಯನಿರತರಾಗಿದ್ದಾರೆ.
  • ಸುಮಾರು 14 ಕೋಟಿ ಜನರು ಫೇಸ್ ಬುಕ್ ಮೂಲಕ ತಮ್ಮ ಗ್ರಾಹಕರ ಜೊತೆಗೆ ಸಂಪರ್ಕ ಹೊಂದಿದ್ದಾರೆ.
  • ಫೇಸ್ ಬುಕ್ ಪ್ಲಾಟ್ ಫಾರ್ಮ್ ಮೇಲೆ ನಿತ್ಯ ಸುಮಾರು 10 ಸಾವಿರ ಕೋಟಿ ಮೆಸೇಜ್ ಗಳನ್ನು ಬರೆಯಲಾಗುತ್ತದೆ
  • ದಿನನಿತ್ಯ 100 ಕೋಟಿ ಕಥೆಗಳನ್ನು ಫೇಸ್ ಬುಕ್ ಮೇಲೆ ಹಂಚಿಕೊಳ್ಳಲಾಗುತ್ತದೆ.
  • ಈ ಪ್ಲಾಟ್ಫಾರ್ಮ್ ಮೇಲೆ ಪ್ರತಿ ನಿಮಿಷಕ್ಕೆ 10 ಲಕ್ಷ ಜನರು ಲಾಗಿನ್ ಆಗಿರುತ್ತಾರೆ.

ಭಾರತ

  • ವಿಶ್ವಾದ್ಯಂತ ಅತಿ ಹೆಚ್ಚು ಫೇಸ್ ಬುಕ್ ಬಳಕೆದಾರರು ಭಾರತದಲ್ಲಿದ್ದಾರೆ.
  • 2019ರಲ್ಲಿ ಈ ವಿಶ್ವಯದಲ್ಲಿ ಭಾರತ, ಅಮೇರಿಕಾವನ್ನು ಹಿಂದಿಕ್ಕಿದೆ.
  • ವಿಶ್ವದ ಒಟ್ಟು ನಾಲ್ಕು ದೇಶಗಳ ಜನಸಂಖ್ಯೆ ಭಾರತದಲ್ಲಿ ಫೇಸ್ ಬುಕ್ ಬಳಸುವವರಿಗಿಂತ ಕಮ್ಮಿಯಾಗಿದೆ.
  • ಭಾರತದ ಫೇಸ್ ಬುಕ್ ಬಳಸುವ ಶೇ.50 ಕ್ಕಿಂತ ಹೆಚ್ಚು ಬಳಕೆದಾರರ ವಯಸ್ಸು 25ಕ್ಕಿಂತ ಕಮ್ಮಿಯಾಗಿದೆ.
  • ದೇಶದಲ್ಲಿ ಸುಮಾರು 45 ಕೋಟಿಗಿಂತ ಹೆಚ್ಚು ಜನರು ಪ್ರತಿ ತಿಂಗಳು ಇಂಟರ್ನೆಟ್ ಬಳಕೆ ಮಾಡುತ್ತಾರೆ.
  • ಚೀನಾ ಹೊರತುಪಡಿಸಿದರೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇಂಟರ್ನೆಟ್ ನ ಬಳಕೆ ಭಾರತದಲ್ಲಾಗುತ್ತದೆ.

Trending News