ಹೌಡಿ ಮೋದಿ ! 50 ಸಾವಿರ ಜನರನ್ನು ಉದ್ದೇಶಿಸಿ ಭಾಷಣ ಮಾಡಲಿರುವ ಮೋದಿ

ಪ್ರಧಾನಿ ಮೋದಿ ಅಮೆರಿಕಾದ ಹೂಸ್ಟನ್ ನಲ್ಲಿರುವ ಪುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ  ಹೌಡಿ ಮೋದಿ ಕಾರ್ಯಕ್ರಮದಲ್ಲಿ 50 ಸಾವಿರ ಜನರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

Last Updated : Sep 22, 2019, 08:53 PM IST
ಹೌಡಿ ಮೋದಿ !  50 ಸಾವಿರ ಜನರನ್ನು ಉದ್ದೇಶಿಸಿ ಭಾಷಣ ಮಾಡಲಿರುವ ಮೋದಿ  title=

ನವದೆಹಲಿ: ಪ್ರಧಾನಿ ಮೋದಿ ಅಮೆರಿಕಾದ ಹೂಸ್ಟನ್ ನಲ್ಲಿರುವ ಪುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ  ಹೌಡಿ ಮೋದಿ ಕಾರ್ಯಕ್ರಮದಲ್ಲಿ 50 ಸಾವಿರ ಜನರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಹೌಡಿ ಮೋದಿ ಕಾರ್ಯಕ್ರಮ ಹಂಚಿದ ಕನಸುಗಳು, ಪ್ರಕಾಶಮಾನ ಭವಿಷ್ಯಗಳು ಘೋಷ ವಾಕ್ಯದೊಂದಿಗೆ ಉಭಯ ದೇಶಗಳ ನಡುವಿನ ಭಾರತೀಯ ಮತ್ತು ಅಮೆರಿಕನ್ನರ ಕೊಡುಗೆಗಳನ್ನು ಎತ್ತಿ ತೋರಿಸುತ್ತದೆ. ಅಷ್ಟೇ ಅಲ್ಲದೆ ಜಗತ್ತಿನ ಅತಿ ಹಳೆಯ ಹಾಗೂ ದೊಡ್ಡ ಪ್ರಜಾಪ್ರಭುತ್ವಗಳನ್ನು ನಡುವಿನ ಕಾರ್ಯ ತಂತ್ರವನ್ನು ಜಗತ್ತಿಗೆ ಸಾರಲು ಮತ್ತು ವ್ಯಾಪಾರ ಸಂಬಂಧವನ್ನು ವೃದ್ದಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಹತ್ವದ ಪಾತ್ರವನ್ನು ವಹಿಸಲಿದೆ.

ಇನ್ನೊಂದೆಡೆಗೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೂ ಒಂದು ಕಾರಣವಿದೆ, ಕಾರಣ 2020ರಲ್ಲಿ ಟೆಕ್ಸಾಸ್ ನಲ್ಲಿ ಡೆಮೋಕ್ರಾಟ್ಸ್ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಭಾರತೀಯ ಮೂಲದ ಅಮೇರಿಕನ್ ರನ್ನು ಸೆಳೆಯುವ ಉದ್ದೇಶವನ್ನು ಹೊಂದಿದೆ ಎನ್ನಲಾಗಿದೆ.

ಪ್ರಧಾನಿ ತಮ್ಮ ಅಮೆರಿಕಾದ ಈ ಪ್ರವಾಸದಲ್ಲಿ ಹಲವಾರು ಮ್ಯಾರಥಾನ್ ಸಭೆಗಳನ್ನು ನಡೆಸಿದ್ದಾರೆ, ಪ್ರಮುಖವಾಗಿ ಇಂಧನ ಕಂಪನಿಗಳ ಸಿಇಓ ಗಳೊಂದಿಗೆ ದುಂಡುಮೇಜಿನ ಸಭೆಯನ್ನು ನಡೆಸಿದ್ದಾರೆ. ಇಂಧನ ಸುರಕ್ಷತೆ ಮತ್ತು ಭಾರತ ಮತ್ತು ಯುಎಸ್ ನಡುವೆ ಪರಸ್ಪರ ಹೂಡಿಕೆ ಅವಕಾಶಗಳನ್ನು ವಿಸ್ತರಿಸುವ ಕುರಿತು ಚರ್ಚೆ ನಡೆಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

ಇದಾದ ನಂತರ ಮಂಗಳವಾರದಂದು ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ದ್ವಿಪಕ್ಷೀಯ ಸಭೆ ನಡೆಸಲಿದ್ದು, ಇದರಲ್ಲಿ ಉಭಯ ದೇಶಗಳ ನಡುವಿನ ಸುಂಕದ ಮೇಲಿನ ವ್ಯಾಪಾರ ನಿಲುಗಡೆ ಕುರಿತು ಚರ್ಚಿಸುವ ಸಾಧ್ಯತೆಯಿದೆ. ಅಧ್ಯಕ್ಷ ಟ್ರಂಪ್ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಸಂಬಂಧವನ್ನು ಸುಗಮವಾಗಿಸುವ ಮಾರ್ಗಗಳನ್ನು ಚರ್ಚಿಸಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಬುಧವಾರದಂದು ಪ್ರಧಾನಿ ಮೋದಿ 40 ಪ್ರಮುಖ ಕಂಪನಿಗಳೊಂದಿಗೆ ಹೂಡಿಕೆ ವಿಚಾರವಾಗಿ ರೌಂಡ್‌ಟೇಬಲ್‌ ಸಭೆಗೆ ಹಾಜರಾಗಲಿದ್ದಾರೆ. ಒಟ್ಟು ದೇಶೀಯ ಉತ್ಪನ್ನದ ಬೆಳವಣಿಗೆಯು ಐದು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದ ನಂತರ ಬೆಳವಣಿಗೆಯನ್ನು ಉತ್ತೇಜಿಸಲು ಪ್ರಯತ್ನಿಸುತ್ತಿರುವ ಭಾರತಕ್ಕೆ ಈ ಸಭೆ ನಿರ್ಣಾಯಕವಾಗಿದೆ ಎನ್ನಲಾಗಿದೆ.

ಇನ್ನೊಂದೆಡೆ 370 ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡ ನಂತರ ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲು ಭಾರತ ಕೈಗೊಂಡಿರುವ ಕ್ರಮಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಅಧಿಕಗೊಂಡಿದೆ.ಈ ಹಿನ್ನಲೆಯಲ್ಲಿ ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿ ಅವರ ಭಾಷಣ ಮಹತ್ವ ಪಡೆದಿದೆ. ಇತ್ತ ಕಡೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ. 

 

Trending News