ಹೈದರಾಬಾದ್: ಹಸುವಿನ ಸಗಣಿಯಿಂದ ಪರಿಸರ ಸ್ನೇಹಿ ಗಣಪತಿ ಮೂರ್ತಿ

ಯಾವುದೇ ಸರ್ಕಾರವು ಈ ಬಗ್ಗೆ ಯೋಚಿಸುತ್ತಿಲ್ಲವಾದರೂ ಇದು ಪರಿಸರಕ್ಕೆ ಒಂದು ದೊಡ್ಡ ಆವಿಷ್ಕಾರ ಮತ್ತು ವರದಾನವಾಗಿದೆ ಎಂದು ರಾಜಾ ಸಿಂಗ್ ಹೇಳಿದರು.  

Last Updated : Jul 24, 2019, 07:51 AM IST
ಹೈದರಾಬಾದ್: ಹಸುವಿನ ಸಗಣಿಯಿಂದ  ಪರಿಸರ ಸ್ನೇಹಿ ಗಣಪತಿ ಮೂರ್ತಿ  title=

ಹೈದರಾಬಾದ್: ದೇವಾದಿ ದೇವತೆಗಳಲ್ಲಿ ಗಣಪತಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಸಿದ್ದಿ ವಿನಾಯಕ, ವಿಘ್ನ ವಿನಾಶಕ, ಲಂಬೋದರ, ವಕ್ರತುಂಡ, ಏಕದಂತ, ಗಣಪತಿ, ಗಣೇಶ, ಗಣಪ ಹೀಗೆ ನಾನಾ ನಾಮಗಳಿಂದ ಪೂಜಿಸಲ್ಪಡುವ ಗಣಪತಿಯನ್ನು ದೇಶಾದ್ಯಂತ ಪೂಜಿಸಲಾಗುತ್ತದೆ. ಇನ್ನೇನು ಗಣೇಶ ಹಬ್ಬ ಸಮೀಪಿಸುತ್ತಿದೆ. ಗಣೇಶನ ಹಬ್ಬ ಬಂತೆಂದರೆ ಹಿರಿಯರು, ಕಿರಿಯರು ಎಲ್ಲರಿಗೂ ಎಲ್ಲಿಲ್ಲದ ಸಂತೋಷ. ಏನೋ ಒಂದು ರೀತಿಯ ಸಂಭ್ರಮ.

ಗಣೇಶ ಚತುರ್ಥಿ ಬಂತೆಂದರೆ ಸಾಕು ಎಲ್ಲೆಡೆ ಗಣಪತಿ ಮೂರ್ತಿ ಇರಿಸಿ ಪೂಜಿಸಲಾಗುತ್ತದೆ. ಮಾರುಕಟ್ಟೆಯಲ್ಲಿ ತರಾವರಿ ಗಣೇಶನ ಮೂರ್ತಿಗಳು ಸಿಗುತ್ತವೆ. ಆದರೆ ಬಣ್ಣ ಹಚ್ಚಿ ಮಾಡಲಾಗುವ ಗಣಪತಿ ವಿಗ್ರಹಗಳಲ್ಲಿ ರಾಸಾಯನಿಕಗಳು ಹೆಚ್ಚಾಗಿರುತ್ತವೆ. ಅದನ್ನು ನಾವು ಕೆರೆ, ನದಿಗಳಲ್ಲಿ ವಿಸರ್ಜಿಸುವುದರಿಂದ ಪರಿಸರಕ್ಕೆ ತೊಂದರೆಯಾಗುತ್ತದೆ. ಹಾಗಾಗಿಯೇ ಇತ್ತೀಚಿನ ದಿನಗಳಲ್ಲಿ ಮಣ್ಣಿನ ಗಣಪನನ್ನು ಪೂಜಿಸಿ ಎಂದು ಹಲವು ಅಭಿಯಾನಗಳನ್ನು ನಡೆಸಲಾಗುತ್ತದೆ.

ನಾವು ಎಂತಹ ವೈಭೋಗದ ಮೂರ್ತಿ ತಂದರೂ ಅದರೊಂದಿಗೆ ಸಂಕಷ್ಟಹರ ಚೌತಿಯ ದಿನದಂದು ಸಗಣಿ ಉಂಡೆ ಮಾಡಿ ಅದರ ಮೇಲೆ ಗರಿಕೆ ಇರಿಸಿ ಅದನ್ನೇ ಗಣಪತಿ ಪ್ರತಿರೂಪ ಎಂದು ನಾವು ಪೂಜಿಸುತ್ತೇವೆ. ಅದೇ ಸಗಣಿಯಿಂದ ತಯಾರಾದ ಗಣಪತಿ ಮೂರ್ತಿಯೇ ಸಿಕ್ಕರೆ ಹೇಗಿರುತ್ತೇ...! ಹೌದು, ಜೆಪಿಯ ಶಾಸಕ ಟಿ.ರಾಜ ಸಿಂಗ್ ಅವರು ತಮ್ಮ ಕಚೇರಿಯಲ್ಲಿ ಹಸುವಿನ ಸಗಣಿಯಿಂದ ತಯಾರಿಸಿದ ಗಣಪತಿ ಪ್ರತಿಮೆಗಳನ್ನು ತೆಲಂಗಾಣದ ಗೋಶ್ಮಹಲ್ ನಿಂದ ಮಂಗಳವಾರ ಅನಾವರಣಗೊಳಿಸಿದರು. ಈ ಮೂರ್ತಿಗಳು ಪರಿಸರ ಸ್ನೇಹಿಯಾಗಿವೆ ಎಂದು ರಾಜಾ ಸಿಂಗ್ ಬಣ್ಣಿಸಿದರು. 

ಗೋವಿನ ಸಗಣಿ ತುಂಬಾ ಪ್ರಯೋಜನಕಾರಿ ಎಂದು ತಿಳಿಸಿದ ರಾಜಾ ಸಿಂಗ್, ಅದರ ಪ್ರಯೋಜನಗಳನ್ನು ನಾವು ಹಲವಾರು ಬಾರಿ ಸರ್ಕಾರಕ್ಕೆ ತಿಳಿಸಿದ್ದೇವೆ. ಗಣಪತಿಯ ಪ್ರತಿಮೆಗಳನ್ನು ಹಸುವಿನ ಸಗಣಿಗಳಿಂದ ತಯಾರಿಸಿದರೆ ಪರಿಸರಕ್ಕೆ ಅನುಕೂಲವಾಗಲಿದ್ದು, ರಾಸಾಯನಿಕದಿಂದ ಪರಿಸರ ಕಲುಷಿತಗೊಳ್ಳುವುದು ಕೂಡ ತಪ್ಪುತ್ತದೆ ಎಂದು ತಿಳಿಸಿದರು. ಅಲ್ಲದೆ, ಇದರ ದೊಡ್ಡ ಪ್ರಯೋಜನವೆಂದರೆ ನೀವು ಖಂಡಿತವಾಗಿಯೂ ಈ ಗಣಪತಿ ಹಸುವಿನ ಸಗಣಿಯದ್ದಾಗಿರುತ್ತದೆ.

ಪಂಚಗವ್ಯ ಸಂಶೋಧನಾ ಕೇಂದ್ರ ಬಿರ್ಮಗುಡ ಶ್ರೀ ಬ್ರಹ್ಮ ರಾಮ ಮಲ್ಲಿಕಾರ್ಜುನ ಸ್ವಾಮಿ ಗೌಶಾಲ ಅವರು ಈ ಪ್ರಯೋಗವನ್ನು ಮಾಡಿದ್ದಾರೆ. ಯಾವುದೇ ಸರ್ಕಾರ ಈ ಬಗ್ಗೆ ಯೋಚಿಸುತ್ತಿಲ್ಲವಾದರೂ ಇದು ಒಂದು ದೊಡ್ಡ ಆವಿಷ್ಕಾರ ಮತ್ತು ಪರಿಸರಕ್ಕೆ ವರದಾನವಾಗಿದೆ ಎಂದು ರಾಜಾ ಸಿಂಗ್ ಹೇಳಿದರು. ಅದೇ ಸಮಯದಲ್ಲಿ, ಡಾ. ಸುದರ್ಶನ್ ಸಿಂಗ್ ಲೋಧ್ ಅವರು ಮಾತನಾಡಿ, ಪರಿಸರ ಸಂರಕ್ಷಣೆಗಾಗಿ ನಾವು ಏನನ್ನಾದರೂ ಮಾಡಬೇಕಾಗಿದೆ. ಇದರಿಂದ ಪರಿಸರ ಸಂರಕ್ಷಣೆ ಜೊತೆಗೆ ಉದ್ಯೋಗವೂ ಸಿಗುತ್ತದೆ, ಹಾಗಾಗಿ ಇದು ಸುವರ್ಣಾವಕಾಶ. ಹಸುವಿನ ಸಗಣಿಯಿಂದ ಗಣಪತಿಯನ್ನು ತಯಾರಿಸಲು ಸರ್ಕಾರ ನಮಗೆ ಸಹಾಯ ಮಾಡಿದರೆ, ಪಂಚಗವ್ಯಾ ಪರೀಕ್ಷಾ ಕೇಂದ್ರದಲ್ಲಿ ಹಸುವಿನ ಸಗಣಿಗಳಿಂದ ನಾವು ಇಂತಹ ವಸ್ತುಗಳನ್ನು ತಯಾರಿಸುತ್ತೇವೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ನಮ್ಮ ಪುರಾಣಗಳಲ್ಲಿ 'ಗೋಮತಿ ವೆಸ್ತೇ ಲಕ್ಷ್ಮಿ' ಎಂದು ಹೇಳಲಾಗಿದೆ. ನಾವು ಈ ವರ್ಷ ಅದನ್ನು  ಸಾಬೀತುಪಡಿಸಿದ್ದೇವೆ ಎಂದು ಡಾ. ಲೋದ್ ಹೇಳಿದರು. ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಾವು ಗಣಪತಿಯ ಹತ್ತು ಸಾವಿರ ಪ್ರತಿಮೆಗಳನ್ನು ಮಾಡಿದ್ದೇವೆ. ಪರಿಸರ ಸ್ನೇಹಿ ಗಣಪತಿಯನ್ನು ರಚಿಸುವುದು ನಮ್ಮ ಗುರಿಯಾಗಿದೆ, ಇದರಲ್ಲಿ ಶಾಸಕ ರಾಜಾ ಸಿಂಗ್ ಅವರು ಎಲ್ಲ ರೀತಿಯ ಸಹಾಯವನ್ನು ನೀಡುವ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
 

Trending News