ಇಟಲಿ, ಚೀನಾ ಮಾತ್ರ ನೋಡಿದ್ದ ರಾಹುಲ್ ಗಾಂಧಿಗೆ ಭಾರತ ಹೇಗಿದೆ ಎಂದು ನೋಡುವ ಅಗತ್ಯವಿದೆ: ಕಟೀಲ್

ಇಷ್ಟು ವರ್ಷ ಇಟಲಿ, ಚೀನಾ ಮಾತ್ರ ನೋಡಿದ್ದ ರಾಹುಲ್ ಗಾಂಧಿಗೆ ಈಗ ಭಾರತ ಹೇಗಿದೆ ಎಂದು ನೋಡುವ ಅಗತ್ಯ ಇದೆ ಅಂತಾ ಕಟೀಲ್ ಟೀಕಿಸಿದ್ದಾರೆ.

Written by - Zee Kannada News Desk | Last Updated : Oct 13, 2022, 02:48 PM IST
  • ರಾಹುಲ್ ಗಾಂಧಿ ‘ಭಾರತ್ ಜೋಡೋ ಯಾತ್ರೆ’ ವಿರುದ್ಧ ನಳೀನ್ ಕುಮಾರ್ ಕಟೀಲ್ ಆಕ್ರೋಶ
  • ಇಷ್ಟು ವರ್ಷ ಇಟಲಿ, ಚೀನಾ ನೋಡಿದ್ದ ರಾಹುಲ್ ಗಾಂಧಿಗೆ ಈಗ ಭಾರತ ಹೇಗಿದೆ ಎಂದು ನೋಡುವ ಅಗತ್ಯವಿದೆ
  • ತಮ್ಮ ಪಕ್ಷದಲ್ಲೇ ಯುವಕರಿಗೆ ಸ್ಥಾನಮಾನ ನೀಡದ ರಾಹುಲ್ ದೇಶದ ಯುವಜನಾಂಗಕ್ಕೆ ಏನು ಭವಿಷ್ಯ ನೀಡಬಲ್ಲರು?
ಇಟಲಿ, ಚೀನಾ ಮಾತ್ರ ನೋಡಿದ್ದ ರಾಹುಲ್ ಗಾಂಧಿಗೆ ಭಾರತ ಹೇಗಿದೆ ಎಂದು ನೋಡುವ ಅಗತ್ಯವಿದೆ: ಕಟೀಲ್  title=
‘ಭಾರತ್ ಜೋಡೋ ಯಾತ್ರೆ’ ವಿರುದ್ಧ ಕಟೀಲ್ ಆಕ್ರೋಶ

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ‘ಭಾರತ್ ಜೋಡೋ ಯಾತ್ರೆ’ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತೆ ಕಿಡಿಕಾರಿದ್ದಾರೆ. ಈ ಬಗ್ಗೆ ಗುರುವಾರ ಟ್ವೀಟ್ ಮಾಡಿರುವ ಅವರು, ‘ಇಷ್ಟು ವರ್ಷ ಇಟಲಿ, ಚೀನಾ ಮಾತ್ರ ನೋಡಿದ್ದ ರಾಹುಲ್ ಗಾಂಧಿಗೆ ಈಗ ಭಾರತ ಹೇಗಿದೆ ಎಂದು ನೋಡುವ ಅಗತ್ಯ ಇದೆ’ ಎಂದು ಕುಟುಕಿದ್ದಾರೆ.

‘ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು 70 - 80ರ ದಶಕದಿಂದಲೇ ರಾಜ್ಯದ ಮೂಲೆ ಮೂಲೆಗಳಲ್ಲಿ ಪಾದಯಾತ್ರೆಗಳನ್ನು ಮಾಡಿ ಜನರ ಕಷ್ಟಗಳನ್ನು ಕೇಳಿ ಪರಿಹಾರಕ್ಕಾಗಿ ಹೋರಾಡಿದವರು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಜನಸಾಮಾನ್ಯರ ಸಿಎಂ ಆಗಿದ್ದಾರೆ. ಇಷ್ಟು ವರ್ಷ ಇಟಲಿ, ಚೀನಾ ಮಾತ್ರ ನೋಡಿದ್ದ ರಾಹುಲ್ ಗಾಂಧಿ ಅವರಿಗೆ ಈಗ ಭಾರತ ಹೇಗಿದೆ ಎಂದು ನೋಡುವ ಅಗತ್ಯ ಇದೆ’ ಅಂತಾ ಕಟೀಲ್ ಟೀಕಿಸಿದ್ದಾರೆ.

ಇದನ್ನೂ ಓದಿ: Bangalore : ರಕ್ತಚಂದನ ದಿಮ್ಮಿಗಳನ್ನ ಸಾಗಿಸ್ತಿದ್ದ ಗ್ಯಾಂಗ್ ಅರೆಸ್ಟ್

ತಮ್ಮ ಪಕ್ಷದಲ್ಲೇ ಯುವಕರಿಗೆ ಸ್ಥಾನಮಾನ ನೀಡುತ್ತಿಲ್ಲ

‘ರಾಜಸ್ಥಾನದಲ್ಲಿ ಕಾಂಗ್ರೆಸ್ಸಿನ ಯುವನಾಯಕ ಸಚಿನ್ ಪೈಲೆಟ್ ಅವರನ್ನು ಸಿಎಂ ಮಾಡುತ್ತೇನೆಂದು ಕೊಟ್ಟ ಭರವಸೆಯನ್ನು ಯಾರದ್ದೋ ಬ್ಲ್ಯಾಕ್ ಮೇಲ್‍ಗೆ ಹೆದರಿ ಹಿಂದೆ ಪಡೆದುಕೊಂಡ ರಾಹುಲ್ ಗಾಂಧಿಗೆ ತಮ್ಮ ಪಕ್ಷದಲ್ಲಿಯೇ ಯುವಕರಿಗೆ ಸ್ಥಾನಮಾನ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ‌ ದೇಶದ ಯುವಜನಾಂಗಕ್ಕೆ ಅವರು ಏನು ಭವಿಷ್ಯ ನೀಡಬಲ್ಲರು?’ ಅಂತಾ ಕಟೀಲ್ ಪ್ರಶ್ನಿಸಿದ್ದಾರೆ.

‘ನಕಲಿ ಗಾಂಧಿ ಕುಟುಂಬಕ್ಕೆ ಅಧಿಕಾರ ನೀಡಲು ಪಾದಯಾತ್ರೆ ಮಾಡುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷದ ಹಿರಿಯರಾದ ಮಾಧವರಾವ್ ಸಿಂಧಿಯಾ, ರಾಜೇಶ್ ಪೈಲೆಟ್ ಸಹಿತ ಅನೇಕ ನೈಜ ಮುಖಂಡರ ಅಂತ್ಯದ ಹಿಂದೆ ಯಾರ ಕೈವಾಡ ಇದೆ ಎಂದು ರಾಹುಲ್ ಅವರಿಗೆ ಪ್ರಶ್ನಿಸಿ ಸಮರ್ಪಕ ಉತ್ತರ ಸಿಕ್ಕಿದರೆ ಮಾತ್ರ ಹೆಜ್ಜೆ ಹಾಕಿ. ಆತ್ಮವಂಚನೆಯ ಪಾದಯಾತ್ರೆ ಯಾಕೆ?’ ಎಂದು ಕಟೀಲ್ ಕುಟುಕಿದ್ದಾರೆ.

ಇದನ್ನೂ ಓದಿ: Airbus A380: ನಾಳೆಯೇ ಬೆಂಗಳೂರಿಗೆ ಬರಲಿದೆ ವಿಶ್ವದ ಅತಿ ದೊಡ್ಡ ವಿಮಾನ A380..!

‘ಪಕ್ಷ ಕಟ್ಟಿ ಬೆಳೆಸಿದ ಹಿರಿಯರು ಪಕ್ಷಕ್ಕೆ ಭವಿಷ್ಯ ಇಲ್ಲವೆಂದು ಒಬ್ಬೊಬ್ಬರಾಗಿ ರಾಜೀನಾಮೆ ಕೊಟ್ಟು ಹೊರಗೆ ಹೋಗುತ್ತಿರುವಾಗ ಅದನ್ನು ಸರಿ ಮಾಡುವುದು ಬಿಟ್ಟು ದೇಶಕ್ಕೆ ಭವಿಷ್ಯ ಕೊಡುತ್ತೇನೆಂದು ಪಾದಯಾತ್ರೆ ಮಾಡಿದರೆ ನೀವು ನಡೆದ ಬೀದಿಗಳ ಜನ ಕೂಡ ನಿಮ್ಮನ್ನು ನಂಬುವುದಿಲ್ಲವೆಂದು ಕಾಂಗ್ರೆಸ್ಸಿನ ರಾಹುಲ್ ಗಾಂಧಿಗೆ ಗೊತ್ತಿಲ್ಲವೇ?’ ಎಂದು ಕಟೀಲ್ ಪ್ರಶ್ನಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News