ನವದೆಹಲಿ: ಜೆಡಿಯು ನಾಯಕ ಪ್ರಶಾಂತ್ ಕಿಶೋರ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶಿವಸೇನಾಗೆ ಚುನಾವಣಾ ರಣತಂತ್ರ ಹೆಣೆಯುತ್ತಿರುವ ವಿಚಾರವನ್ನು ಅಲ್ಲಗಳೆದಿದ್ದಾರೆ.
ಅವರ ಈ ಹೇಳಿಕೆ ಪ್ರಮುಖವಾಗಿ ಕಳೆದ ವಾರ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆಯರರನ್ನು ಭೇಟಿ ಮಾಡಿದ ನಂತರ ಬಂದಿದೆ.ಈ ಕುರಿತಾಗಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಪ್ರಶಾಂತ್ ಕಿಶೋರ್ " ಶಿವಸೇನಾ ಎನ್ಡಿಎ ಮೈತ್ರಿಕೂಟದಲ್ಲಿದೆ. ನಾನು ಮುಂಬೈನಲ್ಲಿದ್ದಾಗ ಅವರು ನನ್ನನ್ನು ಮಧ್ಯಾಹ್ನದ ಊಟಕ್ಕೆ ಕರೆದಿದ್ದರು. ಅದಕ್ಕೆ ನಾನು ಅವರನ್ನು ಭೇಟಿಯಾಗಲು ಹೋಗಿದ್ದೆ. ನಾನು ಜೆಡಿಯುನ ಉಪಾಧ್ಯಕ್ಷ, ಹಾಗಾಗಿ ನಾನು ಶಿವಸೇನಾಗೆ ಚುನಾವಣಾ ರಣತಂತ್ರದ ಪ್ಲಾನ್ ರೂಪಿಸುತ್ತಿಲ್ಲ "ಎಂದು ತಿಳಿಸಿದರು.
ಇದೇ ವೇಳೆ ಪ್ರಿಯಾಂಕಾ ರಾಜಕೀಯಕ್ಕೆ ಪ್ರವೇಶಿಸಿರುವ ಕುರಿತಾಗಿ ಪ್ರತಿಕ್ರಿಯಿಸಿದ ಪ್ರಶಾಂತ್ ಕಿಶೋರ್ " ಇನ್ನು ಕೇವಲ ಎರಡು ತಿಂಗಳು ಇದೆ ಯಾವ ವ್ಯತ್ಯಾಸವಾಗಲಿದೆ ಎನ್ನುವುದು ತಿಳಿಯಲಿದೆ" ಎಂದು ಅವರು ತಿಳಿಸಿದರು.ಅಲ್ಲದೆ ಎನ್ಡಿಎ ನಲ್ಲಿ ಮುಂದಿನ ಪ್ರಧಾನಿ ನರೇಂದ್ರ ಮೋದಿ ಎನ್ನುವ ವಿಚಾರವಾಗಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.