ವಿಡಿಯೋ ನೋಡಿ : ಪ್ಯಾಕೇಜ್ ಸ್ಟಾರ್ ಅಂದ್ರೆ ಚಪ್ಪಲಿಯಲ್ಲಿ ಹೊಡೆಯುವೆ ಎಂದ ಪವನ್ ಕಲ್ಯಾಣ್!

ತಮ್ಮನ್ನು ಪ್ಯಾಕೇಜ್ ಸ್ಟಾರ್ ಎಂದಿರುವವರ ವಿರುದ್ಧ ಕೆಂಡಾಮಂಡಲವಾಗಿರುವ ನಟ ಪವನ್ ಕಲ್ಯಾಣ್ ಟ್ರೋಲ್‌ ಮಾಡಿದವರಿಗೆ ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ.

Written by - Puttaraj K Alur | Last Updated : Oct 19, 2022, 01:30 PM IST
  • ಪ್ಯಾಕೇಜ್‌ ಸ್ಟಾರ್‌’ ಎಂದು ಟ್ರೋಲ್‌ ಮಾಡಿದವರಿಗೆ ಬಿಸಿ ಮುಟ್ಟಿಸಿದ ನಟ ಪವಣ್ ಕಲ್ಯಾಣ್
  • ಇನ್ನೊಂದು ಸಾರಿ ‘ಪ್ಯಾಕೇಜ್ ಸ್ಟಾರ್’ ಅಂದರೆ ಚಪ್ಪಲಿಯಲ್ಲಿಯೇ ಹೊಡೆಯುವೆ ಎಂದ ನಟ
  • ಗುಂಟೂರಿನ ಕಾರ್ಯಕ್ರಮದ ವೇದಿಕೆಯಲ್ಲಿಯೇ ಚಪ್ಪಲಿ ತೋರಿಸಿ ಎಚ್ಚರಿಕೆ ನೀಡಿದ ಪವನ್ ಕಲ್ಯಾಣ್
ವಿಡಿಯೋ ನೋಡಿ : ಪ್ಯಾಕೇಜ್ ಸ್ಟಾರ್ ಅಂದ್ರೆ ಚಪ್ಪಲಿಯಲ್ಲಿ ಹೊಡೆಯುವೆ ಎಂದ ಪವನ್ ಕಲ್ಯಾಣ್!  title=
ನಟ ಪವನ್ ಕಲ್ಯಾಣ್ ಆಕ್ರೋಶ

ಅಮರಾವತಿ: ತೆಲುಗು ಚಿತ್ರರಂಗದ ಖ್ಯಾತ ನಟ ಹಾಗೂ ಜನ ಸೇನಾ ಪಕ್ಷದ ಮುಖ್ಯಸ್ಥ ಪವನ್‌ ಕಲ್ಯಾಣ್‌ ತೆಲುಗು ದೇಶಂ ಪಕ್ಷದೊಂದಿಗೆ ಕೈ ಜೋಡಿಸಿದ್ದಾರೆಂದು ಇತ್ತೀಚೆಗೆ ಟೀಕಿಸಿದ್ದ ಜಗನ್‌ ಮೋಹನ್‌ ರೆಡ್ಡಿಯವರ ವೈಎಸ್‌ಆರ್‌ಸಿಪಿ ಪಕ್ಷ, ‘ಪ್ಯಾಕೇಜ್‌ ಸ್ಟಾರ್‌’ ಎಂದು ಟ್ರೋಲ್‌ ಮಾಡಿತ್ತು.

ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿರುವ ನಟ ಪವನ್ ಕಲ್ಯಾಣ್, ‘ಇನ್ನೊಂದು ಸಾರಿ ಏನಾದ್ರೂ ಪ್ಯಾಕೇಜ್ ಸ್ಟಾರ್ ಅಂದರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ’ ಅಂತಾ ಬೆದರಿಕೆ ಹಾಕಿದ್ದಾರೆ.

ಮಂಗಳವಾರ ಗುಂಟೂರಿನಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯ ಮೇಲೇ ನಿಂತು ಚಪ್ಪಲಿಯಲ್ಲಿ ಹೊಡೆಯುವುದಾಗಿ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ತಮ್ಮನ್ನು ಪ್ಯಾಕೇಜ್ ಸ್ಟಾರ್ ಎಂದಿರುವವರ ವಿರುದ್ಧ ಕೆಂಡಾಮಂಡಳವಾಗಿರುವ ನಟ ಟ್ರೋಲ್‌ ಮಾಡಿದವರಿಗೆ ಸರಿಯಾಗಿಯೇ ಬಿಸಿ ಮುಟ್ಟಿಸಿದ್ದಾರೆ.

ಇದನ್ನೂ ಓದಿ: Viral Video: ಮದುವೆ ಮಂಟಪದಲ್ಲಿ ವಧುವನ್ನು ಕಂಡು ಕಿರುಚಾಡುತ್ತಾ ಎದ್ದು ಬಿದ್ದು ಓಡಿಹೋದ ವರ!

‘ನನ್ನನ್ನು ಏನಾದ್ರೂ ಇನ್ನೊಮ್ಮೆ ಪ್ಯಾಕೇಜ್‌ ಸ್ಟಾರ್‌ ಎಂದು ಕರೆದರೆ ಅವರಿಗೆ ಚಪ್ಪಲಿಯಲ್ಲೇ ಹೊಡೆಯುತ್ತೇನೆ’ ಅಂತಾ ಪವನ್ ಕಲ್ಯಾಣ್ ಹೇಳಿದ್ದಾರೆ. ತಮ್ಮ ಕಾಲಿನಲ್ಲಿದ್ದ ಚಪ್ಪಲಿಯನ್ನು ಕೈನಲ್ಲಿ ಹಿಡಿದು ತೋರಿಸಿರುವ ನಟ ಪವನ್ ಕಲ್ಯಾಣ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. 

ಪ್ಯಾಕೇಜ್ ಸ್ಟಾರ್ ಅಂದಿದ್ದೇಕೆ..?

2 ದಿನಗಳ ಹಿಂದೆ ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ವೈಎಸ್‌ಆರ್‌ಸಿಪಿ ಸಚಿವರು ಮತ್ತು ಮುಖಂಡರ ಬೆಂಗಾವಲು ವಾಹನದ ಮೇಲೆ ಜನಸೇನಾ ಪಕ್ಷದ ಕೆಲವು ಕಾರ್ಯಕರ್ತರು ಮತ್ತು ಮುಖಂಡರು ಕಲ್ಲು ತೂರಾಟ ನಡೆಸಿದ್ದರು. ನಂತರ ಪೊಲೀಸರು ಅವರೆಲ್ಲರನ್ನು ಬಂಧಿಸಿದ್ದರು. ಈ ಇಡೀ ವಿಷಯದ ನಡುವೆ ವೈಎಸ್‌ಆರ್‌ಸಿಪಿ ನಾಯಕರು ಪವನ್ ಕಲ್ಯಾಣ್ ಅವರನ್ನು ‘ಪ್ಯಾಕೇಜ್ ಸ್ಟಾರ್’ ಎಂದು ಕರೆದು ಟ್ರೋಲ್ ಮಾಡಿದ್ದರು. ಇದು ಟಾಲಿವುಡ್ ಸ್ಟಾರ್ ನಟನ ಪಿತ್ತವನ್ನು ನೆತ್ತಿಗೇರಿಸಿತ್ತು.

ಇದನ್ನೂ ಓದಿ: DENGUE Alert! ಚಿಂತೆ ಹೆಚ್ಚಿಸಲಿದೆಯಾ ಅಕ್ಟೋಬರ್ ತಿಂಗಳು? ನಾವೇನು ಮುಂಜಾಗ್ರತೆ ವಹಿಸಬೇಕು? 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News