ನವದೆಹಲಿ: ಐಎನ್ಎಕ್ಸ್ ಮೀಡಿಯಾ ಪ್ರಕರಣದ ವಿಚಾರವಾಗಿ ಬಂಧಿತರಾಗಿರುವ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಇಂದು ತಿಹಾರ್ ಜೈಲಿಗೆ ತೆರೆಳುವ ಮುನ್ನ ತಮಗೆ ಆರ್ಥಿಕತೆ ಬಗ್ಗೆ ಮಾತ್ರ ಚಿಂತೆಯಾಗಿದೆ ಎಂದರು. ಆ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆರ್ಥಿಕ ಕುಸಿತದ ವಿಚಾರವಾಗಿ ವ್ಯಂಗ್ಯವಾಡಿದ್ದಾರೆ.
P Chidambaram on being asked what he has to say after Court sent him to judicial custody: I am only worried about the economy (file pic) pic.twitter.com/u3HK9y8O9K
— ANI (@ANI) September 5, 2019
ಪಿ.ಚಿದಂಬರಂ ಈ ವಾರದ ಆರಂಭದಲ್ಲಿ ಸರ್ಕಾರದ ವಿರುದ್ಧ ಆರ್ಥಿಕ ಕುಸಿತದ ವಿರುದ್ದ ವ್ಯಂಗ್ಯವಾಡುತ್ತಾ '5 ಪರ್ಸೆಂಟ್ 'ಎಂದು ಹೇಳಿದ್ದರು. ಇಂದು ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸೆಪ್ಟೆಂಬರ್19 ರವರೆಗೆ ಮಾಜಿ ಸಚಿವರು ತಿಹಾರ್ ಜೈಲಿಗೆ ಹೋಗಬೇಕಾಗುತ್ತದೆ ಎಂದು ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಘೋಷಿಸಿದ ಕೆಲವೇ ನಿಮಿಷಗಳಲ್ಲಿ ಮಾತನಾಡುತ್ತಾ ' ನನಗೆ ಆರ್ಥಿಕತೆ ಬಗ್ಗೆ ಮಾತ್ರ ಚಿಂತೆಯಾಗಿದೆ' ಎಂದು ಹೇಳಿದರು.
Director General of Tihar Prison Sandeep Goel- P Chidambaram will be kept in Jail no 7 and in a separate cell. Roti, dal and subzi will be given to him. Other things like western toilet which the Court asked will be provided. (file pic) pic.twitter.com/1tvUFYLbLJ
— ANI (@ANI) September 5, 2019
ಮಂಗಳವಾರದಂದು ಸಿಬಿಐ ಚಿದಂಬರಂ ಅವರ ಬಂಧನವನ್ನು ವಿಸ್ತರಿಸಿದ ನಂತರ ಅವರು ಏನಾದರೂ ಹೇಳಲು ಬಯಸುತ್ತೀರಾ? ಎಂದು ಮಾಧ್ಯಮದವರು ಕೇಳಿದಾಗ ಚಿದಂಬರಂ ಕೈ ಎತ್ತಿ 5 ಪರ್ಸೆಂಟ್ ಎಂದು ಹೇಳಿದ್ದರು. ಇನ್ನು ಮುಂದುವರೆದು 5 ಪರ್ಸೆಂಟ್ ಅಂದ್ರೆ ನಿಮಗೆ ಏನು ಅಂತಾ ತಿಳಿದಿದೆಯೇ? ಎಂದು ಮರು ಪ್ರಶ್ನಿಸಿದ್ದರು. ಇತ್ತಿಚೀಗೆ ಕೇಂದ್ರ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಕಳೆದ ಆರು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಶೇಕಡಾ 5ಕ್ಕೆ ಇಳಿದಿದೆ.ಈ ಹಿನ್ನಲೆಯಲ್ಲಿ ಚಿದಂಬರಂ ವ್ಯಂಗ್ಯವಾಡಿದ್ದರು.