Juvenile Justice Act: ಏನಿದು ದತ್ತು ಪುತ್ರರಿಗಾಗಿ ಇರುವ ʼಜೂವನೈಲ್ ಜಸ್ಟಿಸ್‌ʼ ಕಾಯ್ದೆ..!

Juvenile Justice Act For Adopted Sons: ಇಂದಿಗೂ ಭಾರತದಾಂತ್ಯ ದತ್ತು ಪುತ್ರ  ಸ್ವೀಕಾರಕ್ಕೆ ಅವಕಾಶ ವಿದ್ದರೂ ಆಸ್ತಿಗಳಲ್ಲಿ ಹಕ್ಕು ಇರುವುದಿಲ್ಲ. ಆದರೆ ಕೆಲವು ಧರ್ಮಗಳಲ್ಲಿ ಇಂದಿಗೂ ದತ್ತು ಪಡೆಯಲು ಅವಕಾಶವಿಲ್ಲ.ಏಕರೂಪ ನಾಗರಿಕ ಸಂಹಿತೆ ಜಾರಿಯಾಗುವ ಹಿನ್ನಲೆಯಲ್ಲಿ ಜೂವನೈಲ್ ಜಸ್ಟಿಸ್ (ಆರೈಕೆ ಮತ್ತು ಮಕ್ಕಳ ರಕ್ಷಣೆ) ಕಾಯ್ದೆ ಜಾರಿಗೊಳಿಸಲಾಗಿದೆ. 

Written by - Zee Kannada News Desk | Last Updated : Jul 29, 2023, 05:52 PM IST
Juvenile Justice Act: ಏನಿದು ದತ್ತು ಪುತ್ರರಿಗಾಗಿ ಇರುವ ʼಜೂವನೈಲ್ ಜಸ್ಟಿಸ್‌ʼ ಕಾಯ್ದೆ..!  title=

ದೆಹಲಿ: ಇಂದಿಗೂ ಭಾರತದಾಂತ್ಯ ದತ್ತು ಪುತ್ರ  ಸ್ವೀಕಾರಕ್ಕೆ ಅವಕಾಶ ವಿದ್ದರೂ ಆಸ್ತಿಗಳಲ್ಲಿ ಹಕ್ಕು ಇರುವುದಿಲ್ಲ. ಆದರೆ ಕೆಲವು ಧರ್ಮಗಳಲ್ಲಿ ಇಂದಿಗೂ ದತ್ತು ಪಡೆಯಲು ಅವಕಾಶವಿಲ್ಲ. ಇನ್ನೂ ಕೆಲವು ಧರ್ಮಗಳಲ್ಲಿ ಮೃತ ವ್ಯಕ್ತಿಯ ಅಂತ್ಯಸಂಸ್ಕಾರ ನೆರವೇರಿಸುವವರಿಗೆ ಮಾತ್ರ ದತ್ತುಪುತ್ರನಾಗಲು ಅವಕಾಶವಿದೆ. ದತ್ತು ಪದ್ದತಿ ಅನಾದಿ ಕಾಲದಿಂದಿರುವ ಸಂಗತಿಯಾಗಿದೆ.

ಮುಸ್ಲಿಂ, ಹಿಂದೂ,ಪಾರ್ಸಿ ಧರ್ಮಗಳಲ್ಲಿ ದತ್ತು ಅವಕಾಶವಿದ್ದರೂ, ಹಲವು ನಿಯಮಗಳಿವೆ.ಆದರೆ ಈಗ ಯಾಕೆ ದತ್ತು ಸ್ವೀಕಾರ ಬಗ್ಗೆ ಎಂದು ಯೋಚಿಸಬಹುದು. ಆದರೆ ಅದಕ್ಕೂ ಕಾರಣವಿದೆ. ದೇಶದಲ್ಲಿ  ಏಕರೂಪ ನಾಗರಿಕ ಸಂಹಿತೆ ಜಾರಿಯಾಗುವ ಹಿನ್ನಲೆಯಲ್ಲಿ ಜೂವನೈಲ್ ಜಸ್ಟಿಸ್ (ಆರೈಕೆ ಮತ್ತು ಮಕ್ಕಳ ರಕ್ಷಣೆ) ಕಾಯ್ದೆ ಜಾರಿಗೊಳಿಸಲಾಗಿದೆ. 

ಇದನ್ನೂ ಓದಿ: Shakti Yojana: 650 ಕೋಟಿ ದಾಟಿದ ಶಕ್ತಿ ಯೋಜನೆ; ಸ್ತ್ರೀಶಕ್ತಿಗಳಿಂದ ಸಖತ್ ರೆಸ್ಪಾನ್ಸ್..!

ಏನಿದು ಜೂವನೈಲ್ ಜಸ್ಟಿಸ್ ಕಾಯ್ದೆ..
ಜೂವನೈಲ್ ಜಸ್ಟಿಸ್
(ಆರೈಕೆ ಮತ್ತು ಮಕ್ಕಳ ರಕ್ಷಣೆ) ಕಾಯ್ದೆ-2015ರಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರೂ ದತ್ತು ಪಡೆಯಲು ಅವಕಾಶ ನೀಡಲಾಗಿದೆ. ಈ ಕಾಯ್ದೆ ಪ್ರಕಾರ ಎಲ್ಲಾ ಅರ್ಹ ನಾಗರಿಕರೂ ದತ್ತು ಸ್ವೀಕರಿಸಬಹುದಾಗಿದೆ. ಈ ಕಾಯ್ದೆಯನ್ನೇ ಇನ್ನಷ್ಟು ಸುಧಾರಿಸಿ, ಅದರ ವ್ಯಾಪ್ತಿಯನ್ನು ಹೆಚ್ಚಿಸಿದರೆ ಇದು ಎಲ್ಲಾ ಧರ್ಮದವರಿಗೂ ಸಮಾನವಾಗಿ ಅನ್ವಯವಾಗುವ ಕಾಯ್ದೆಯಾಗಲಿದೆ. ಹೀಗಾಗಿ ಏಕರೂಪ ನಾಗರಿಕ ಸಂಹಿತೆ ರಚನೆಯ ಬದಲಿಗೆ, ಈ ಕಾಯ್ದೆಯನ್ನೇ ಸುಧಾರಿಸುವತ್ತ ಗಮನ ಹರಿಸಬಹುದು ಎಂದು ಕಾನೂನು ಆಯೋಗವು ತಾನು ಸಲ್ಲಿಸಿದ್ದ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಸೀಬೆ ಹಣ್ಣಿನ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜಗಳಿವೆ ಗೊತ್ತಾ..?

ಇದು ಮೂಲತಃ ದತ್ತಕ ಕಾಯ್ದೆ ಅಲ್ಲ. ಇದು ಕಾನೂನಿನೊಟ್ಟಿಗೆ ಸಂಘರ್ಷಕ್ಕೆ ಒಳಗಾದ ಮಕ್ಕಳ ಆರೈಕೆ ಮತ್ತು ರಕ್ಷಣೆಯ ಉದ್ದೇಶದ ಕಾಯ್ದೆ. ಅನಾಥರಾದ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲು ಈ ಕಾಯ್ದೆ ಅವಕಾಶ ಮಾಡಿಕೊಡುತ್ತದೆ. ಪುನರ್ವಸತಿ ಷರತ್ತಿನ ಅಡಿಯಲ್ಲಿ ಅಂತಹ ಮಕ್ಕಳನ್ನು ದತ್ತು ನೀಡಲು, ದತ್ತು ಸ್ವೀಕರಿಸಲು ಅವಕಾಶವಿದೆ. ದತ್ತು ಸ್ವೀಕಾರ ಸಂಬಂಧ ಎಲ್ಲರಿಗೂ ಅನ್ವಯವಾಗುವ ಕಾಯ್ದೆ ಇಲ್ಲದೇ ಇರುವ ಸಂದರ್ಭದಲ್ಲಿ, ದತ್ತು ಸ್ವೀಕಾರಕ್ಕೆ ಈ ಕಾಯ್ದೆಯನ್ನೇ ಬಳಸಿಕೊಳ್ಳಲಾಗುತ್ತಿದೆ. ಸರ್ಕಾರದ ಸಂಸ್ಥೆಗಳ ಮೂಲಕವಷ್ಟೇ ಈ ದತ್ತಕ ಪ್ರಕ್ರಿಯೆ ನಡೆಯುತ್ತದೆ.

* ಯಾವುದೇ ಧರ್ಮದ ದಂಪತಿ ಅಥವಾ ವ್ಯಕ್ತಿ, ಯಾವುದೇ ಧರ್ಮದ ಮಗುವನ್ನು ಈ ಕಾಯ್ದೆಯ ಅಡಿಯಲ್ಲಿ ದತ್ತು ಪಡೆಯಬಹುದು. ಇದು ಸಂಪೂರ್ಣ ಕಾನೂನುಬದ್ಧವಾಗಿದ್ದು, ದತ್ತು ಸ್ವೀಕರಿಸಲಾದ ಮಗುವಿಗೆ ವಾರಸುದಾರಿಕೆ ಮತ್ತು ಉತ್ತರಾಧಿಕಾರದ ಹಕ್ಕುಗಳು ದೊರೆಯುತ್ತವೆ

* ಕೇರಳದ ತಿರುವಾಂಕೂರಿನ ಸಿರಿಯನ್ ಕ್ರೈಸ್ತರಿಗೆ ಮಾತ್ರ ದತ್ತು ಸ್ವೀಕರಿಸಲು ಪ್ರತ್ಯೇಕ ಕಾನೂನು ಇದೆ. ಆದರೆ, ದೇಶದ ಎಲ್ಲಾ ಕ್ರೈಸ್ತರೂ ಈ ಕಾಯ್ದೆಯ ಅಡಿಯಲ್ಲಿ ದತ್ತು ಸ್ವೀಕರಿಸಲು ಅವಕಾಶವಿದೆ.
* ದತ್ತು ಸ್ವೀಕಾರಕ್ಕೆ ಪಾರ್ಸಿ ವೈಯಕ್ತಿಕ ಕಾನೂನಿನಲ್ಲಿ ನಿಷೇಧವಿದ್ದರೂ, ಈ ಕಾಯ್ದೆ ಅಡಿ ಪಾರ್ಸಿ ದಂಪತಿ ಅಥವಾ ಪಾರ್ಸಿ ಪುರುಷ ಅಥವಾ ಪಾರ್ಸಿ ಮಹಿಳೆಯು ದತ್ತು ಪಡೆಯಬಹುದು
* ಈ ಕಾಯ್ದೆ ಅಡಿಯಲ್ಲಿ ದತ್ತು ಸ್ವೀಕರಿಸುವವರಿಗೆ ಗರಿಷ್ಠ ವಯಸ್ಸಿನ ಮಿತಿ ಇಲ್ಲ. ವ್ಯಕ್ತಿ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಸುಸ್ಥಿತಿಯಲ್ಲಿ ಇರಬೇಕು
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News