ಇದೇ ಮೊದಲ ಬಾರಿಗೆ 100 ನಾನ್-ಗೆಜೆಟೆಡ್ ರೈಲ್ವೆ ಸಿಬ್ಬಂದಿಗೆ ವಿದೇಶ ಪ್ರವಾಸ ಭಾಗ್ಯ!

ರಾಷ್ಟ್ರೀಯ ಸಾರಿಗೆಯಲ್ಲಿ ಮೊದಲ ಬಾರಿಗೆ ಸೌತ್ ಸೆಂಟ್ರಲ್ ರೈಲ್ವೆಯ 100 ನಾನ್-ಗೆಜೆಟೆಡ್ ಕೆಲಸಗಾರರು ಜನವರಿ 28 ರಂದು ಸಿಂಗಪುರ್, ಮಲೇಶಿಯಾಕ್ಕೆ 6 ದಿನಗಳ ಪ್ರವಾಸಕ್ಕೆ ತೆರಳಿದ್ದಾರೆ. 

Last Updated : Jan 30, 2018, 04:58 PM IST
ಇದೇ ಮೊದಲ ಬಾರಿಗೆ 100 ನಾನ್-ಗೆಜೆಟೆಡ್ ರೈಲ್ವೆ ಸಿಬ್ಬಂದಿಗೆ ವಿದೇಶ ಪ್ರವಾಸ ಭಾಗ್ಯ! title=

ನವದೆಹಲಿ : ಇದೇ ಮೊದಲ ಬಾರಿಗೆ ಭಾರತೀಯ ರೈಲ್ವೆ ತನ್ನ ನೌಕರರಿಗೆ ವಿದೇಶ ಪ್ರವಾಸದ ಅವಕಾಶವನ್ನು ನೀಡಿದೆ. ಇದುವರೆಗೂ ಕೇವಲ ಗೆಜೆಟೆಡ್ ಅಧಿಕಾರಿಗಳಿಗೆ ಮಾತ್ರ ದೊರೆಯುತ್ತಿದ್ದ ಈ ಅವಕಾಶ ಈ ಬಾರಿ ಗ್ಯಾಂಗ್ಮೆನ್, ಟ್ರಾಕ್ಮೆನ್ ಮತ್ತು ಇತರ ನಾನ್-ಗ್ಯಾಜೆಟೆಡ್ ಉದ್ಯೋಗಿಗಳಿಗೆ ಲಭಿಸಿದೆ. 

ರಾಷ್ಟ್ರೀಯ ಸಾರಿಗೆಯಲ್ಲಿ ಮೊದಲ ಬಾರಿಗೆ ಸೌತ್ ಸೆಂಟ್ರಲ್ ರೈಲ್ವೆಯ 100 ನಾನ್-ಗೆಜೆಟೆಡ್ ಕೆಲಸಗಾರರು ಜನವರಿ 28 ರಂದು ಸಿಂಗಪುರ್, ಮಲೇಶಿಯಾಕ್ಕೆ 6 ದಿನಗಳ ಪ್ರವಾಸಕ್ಕೆ ತೆರಳಿದ್ದಾರೆ. 

ಈ ಪ್ರವಾಸದ ಶೇ. 25 ವೆಚ್ಚವನ್ನು ಉದ್ಯೋಗಿಗಳು ಪಾವತಿಸಿದರೆ, ಶೇ.75 ಭಾಗವನ್ನು ಸಿಬ್ಬಂದಿ ಲಾಭ ನಿಧಿಯಿಂದ (ಎಸ್ಬಿಎಫ್) ಭರಿಸಲಾಗಿದೆ ಎಂದು SCR ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂ.ಉಮಾಶಂಕರ್ ಕುಮಾರ್ ತಿಳಿಸಿದ್ದಾರೆ. 

ಸಿಕಂದರಾಬಾದ್ ಮೂಲದ ಎಸ್ಸಿಆರ್ "ಭಾರತೀಯ ರೈಲ್ವೇಯಲ್ಲಿ ಪ್ರಥಮ ದರ್ಜೆಯ ಉದ್ಯೋಗಿಗಳ ಸಾಗರೋತ್ತರ ಕ್ಯಾಂಪ್ ಅನ್ನು ಸಂಘಟಿಸುವ ಮೂಲಕ ಅದರ ನಾನ್-ಗೆಝೆಟೆಡ್ ಕಾರ್ಮಿಕ ಶಕ್ತಿಗಾಗಿ ಕಲ್ಯಾಣ ಚಟುವಟಿಕೆಗಳನ್ನು ಸರಳೀಕರಿಸುವಲ್ಲಿ" ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.

ಈ ಪ್ರವಾಸವು ಸಿಂಗಪೂರ್ ನ ಯುನಿವರ್ಸಲ್ ಸ್ಟುಡಿಯೋಸ್, ಸೆಂಟೊಸಾ ಮತ್ತು ನೈಟ್ ಸಫಾರಿಗಳಂತಹ ಪ್ರವಾಸಿ ತಾಣಗಳನ್ನು ಒಳಗೊಳ್ಳುತ್ತದೆ ಮತ್ತು ಕೌಲಾಲಂಪುರ್ ಸಿಟಿ ಟೂರ್, ಪೆಟ್ರೋನಸ್ ಟವರ್ಸ್, ಬಾಟು ಗುಹೆಗಳು ಮತ್ತು ಮಲೆಷ್ಯಾದಲ್ಲಿನ ಜೆಂಟಿಂಗ್ ಹೈಲ್ಯಾಂಡ್ಸ್ ಅನ್ನು ಒಳಗೊಂಡಿದೆ.

Trending News