Lt General Anil Chauhan: ಸೇನಾ ಪಡೆಗಳ ನೂತನ ಮುಖ್ಯಸ್ಥರಾಗಿ ಅನಿಲ್ ಚೌಹಾಣ್ ನೇಮಕ

ಬಿಪಿನ್ ರಾವತ್ ಅವರ ನಿಧನವಾಗಿ ಒಂಬತ್ತು ತಿಂಗಳ ನಂತರ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಅವರನ್ನು ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ

Written by - Bhavishya Shetty | Last Updated : Sep 28, 2022, 07:31 PM IST
    • ಮುಂದಿನ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ನೇಮಕ
    • ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ
    • ಮೇ 2021 ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದ ಅನಿಲ್ ಚೌಹಾಣ್
Lt General Anil Chauhan: ಸೇನಾ ಪಡೆಗಳ ನೂತನ ಮುಖ್ಯಸ್ಥರಾಗಿ ಅನಿಲ್ ಚೌಹಾಣ್ ನೇಮಕ title=
Lt General Anil Chauhan

ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಅವರನ್ನು ಮುಂದಿನ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರಾಗಿ (CDS) ನೇಮಿಸಲು ಸರ್ಕಾರ ನಿರ್ಧರಿಸಿದೆ. ಸುಮಾರು 40 ವರ್ಷಗಳ ವೃತ್ತಿಜೀವನದಲ್ಲಿ, ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರು ಹಲವಾರು ಕಮಾಂಡ್, ಸಿಬ್ಬಂದಿ ಮತ್ತು ಇನ್ಸ್ ಸ್ಟ್ರುಮೆಂಟಲ್ ನೇಮಕಾತಿಗಳನ್ನು ಹೊಂದಿದ್ದರು. ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ಭಾರತದಲ್ಲಿ ಪ್ರತಿ-ಬಂಡಾಯ ಕಾರ್ಯಾಚರಣೆಗಳಲ್ಲಿ ವ್ಯಾಪಕ ಅನುಭವವನ್ನು ಹೊಂದಿದ್ದಾರೆ. 

ಇದನ್ನೂ ಓದಿ: IOCL ನಲ್ಲಿ 1500 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ : ವಿವರಗಳಿಗೆ ಇಲ್ಲಿ ಪರಿಶೀಲಿಸಿ

1961 ರ ಮೇ 18 ರಂದು ಜನಿಸಿದ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರು 1981 ರಲ್ಲಿ ಭಾರತೀಯ ಸೇನೆಯ 11 ಗೂರ್ಖಾ ರೈಫಲ್ಸ್‌ಗೆ ನೇಮಕಗೊಂಡರು. ಅವರು ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ಖಡಕ್ವಾಸ್ಲಾ ಮತ್ತು ಇಂಡಿಯನ್ ಮಿಲಿಟರಿ ಅಕಾಡೆಮಿ, ಡೆಹ್ರಾಡೂನ್‌ನ ಹಳೆಯ ವಿದ್ಯಾರ್ಥಿ. ಮೇಜ್ ಜನರಲ್ ಶ್ರೇಣಿಯಲ್ಲಿ, ಉತ್ತರ ಕಮಾಂಡ್‌ನಲ್ಲಿ ನಿರ್ಣಾಯಕ ಬಾರಾಮುಲಾ ವಲಯದಲ್ಲಿ ಪದಾತಿ ದಳದ ವಿಭಾಗವನ್ನು ವಹಿಸಿದ್ದರು. ನಂತರ ಲೆಫ್ಟಿನೆಂಟ್ ಜನರಲ್ ಆಗಿ, ಅವರು ಈಶಾನ್ಯದಲ್ಲಿ ಕಾರ್ಪ್ಸ್‌ಗೆ ನೇಮಕಗೊಂಡರು.

ನಂತರ ಸೆಪ್ಟೆಂಬರ್ 2019 ರಿಂದ ಪೂರ್ವ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆದರು. ಮೇ 2021 ರಲ್ಲಿ ಸೇವೆಯಿಂದ ನಿವೃತ್ತರಾಗುವವರೆಗೆ ಅಧಿಕಾರವನ್ನು ಹೊಂದಿದ್ದರು.

ಈ ಕಮಾಂಡ್ ನೇಮಕಾತಿಗಳಿಗೆ ಹೆಚ್ಚುವರಿಯಾಗಿ, ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕನ ಉಸ್ತುವಾರಿ ಸೇರಿದಂತೆ ಪ್ರಮುಖ ಸಿಬ್ಬಂದಿ ನೇಮಕಾತಿಗಳನ್ನು ಸಹ ಇವರು ನಿರ್ವಹಿಸಿದ್ದಾರೆ. ಇದಕ್ಕೂ ಮೊದಲು, ಅಧಿಕಾರಿ ಅಂಗೋಲಾಕ್ಕೆ ವಿಶ್ವಸಂಸ್ಥೆಯ ಮಿಷನ್ ಆಗಿ ಸೇವೆ ಸಲ್ಲಿಸಿದ್ದರು. 

ಇದನ್ನೂ ಓದಿ: ಸಾಧು ಹೇಳಿದ ಅಂತಾ 6 ಅಡಿ ಆಳದ ಸಮಾಧಿ ತೋಡಿ ಅದರೊಳಗೆ ಕುಳಿತ ಭೂಪ: ಮುಂದೇನಾಯ್ತು ಗೊತ್ತಾ?

31 ಮೇ 2021 ರಂದು ಇವರು ಭಾರತೀಯ ಸೇನೆಯಿಂದ ನಿವೃತ್ತರಾದರು. ಸೇನೆಯಿಂದ ನಿವೃತ್ತರಾದ ನಂತರವೂ ಅವರು ರಾಷ್ಟ್ರೀಯ ಭದ್ರತೆ ಮತ್ತು ಕಾರ್ಯತಂತ್ರದ ವಿಷಯಗಳಿಗೆ ಕೊಡುಗೆ ನೀಡುವುದನ್ನು ಮುಂದುವರೆಸಿದರು. ಸೇನೆಯಲ್ಲಿನ ಅವರ ವಿಶಿಷ್ಟ ಮತ್ತು ಶ್ರೇಷ್ಠ ಸೇವೆಗಾಗಿ, ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಅವರಿಗೆ ಪರಮ ವಿಶಿಷ್ಟ ಸೇವಾ ಪದಕ, ಉತ್ತಮ ಯುದ್ಧ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಸೇನಾ ಪದಕ ಮತ್ತು ವಿಶಿಷ್ಟ ಸೇವಾ ಪದಕಗಳನ್ನು ನೀಡಿ ಗೌರವಿಸಲಾಗಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News