ವಾಯುಸೇನೆ ಪೈಲೆಟ್ ನ್ನು ಅಸಭ್ಯವಾಗಿ ಪ್ರದರ್ಶಿಸಿದ ಪಾಕ್, ಭಾರತದಿಂದ ತೀವ್ರ ಪ್ರತಿಭಟನೆ

ಪಾಕ್ ವಶದಲ್ಲಿರುವ ಭಾರತದ ವಾಯುಸೇನೆಯ ಪೈಲೆಟ್ ವಿಂಗ್ ಕಮಾಂಡರ್ ಅಭಿನಂದನ್ ರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಭಾರತ ಆಗ್ರಹಿಸಿದೆ.

Last Updated : Feb 27, 2019, 08:01 PM IST
ವಾಯುಸೇನೆ ಪೈಲೆಟ್ ನ್ನು ಅಸಭ್ಯವಾಗಿ ಪ್ರದರ್ಶಿಸಿದ ಪಾಕ್, ಭಾರತದಿಂದ ತೀವ್ರ ಪ್ರತಿಭಟನೆ   title=
Photo courtesy: AP/PTI

ನವದೆಹಲಿ: ಪಾಕ್ ವಶದಲ್ಲಿರುವ ಭಾರತದ ವಾಯುಸೇನೆಯ ಪೈಲೆಟ್ ವಿಂಗ್ ಕಮಾಂಡರ್ ಅಭಿನಂದನ್ ರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಭಾರತ ಆಗ್ರಹಿಸಿದೆ.

ಈ ಕುರಿತಾಗಿ ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ ಇಲಾಖೆ" ಪಾಕಿಸ್ತಾನವು ತನ್ನ ವಶದಲ್ಲಿರುವ ರಕ್ಷಣಾ ಇಲಾಖೆ ಸಿಬ್ಬಂಧಿಗೆ ಯಾವುದೇ ರೀತಿಯಿಂದಲೂ ತೊಂದರೆ ನೀಡುವುದಿಲ್ಲ ಎನ್ನುವುದರ ಕುರಿತಾಗಿ ಸ್ಪಷ್ಟನೆ ನೀಡಬೇಕು" ಎಂದು ಆಗ್ರಹಿಸಿದೆ.

ಅಲ್ಲದೆ ಗಾಯಗೊಂಡಿರುವ ವಾಯುಸೇನೆಯ ಪೈಲೆಟ್ ನ್ನು ಅಸಭ್ಯವಾಗಿ ಪಾಕ್ ಪ್ರದರ್ಶಿಸುತ್ತಿರುವುದಕ್ಕೆ ಭಾರತ ತೀವ್ರವಾಗಿ ಖಂಡಿಸಿದೆ. ಇದು ಜೀನಿವಾ ಸಮ್ಮೇಳನದ ಎಲ್ಲ ನಿಯಮಗಳನ್ನು ಉಲ್ಲಂಘಿಸಿದಂತಾಗಿದೆ. ಆದ್ದರಿಂದ ಭಾರತ ರಕ್ಷಣಾತ್ಮಕ ಮರಳುವಿಕೆಯನ್ನು ಭಯಸುತ್ತದೆ ಎಂದು ಹೇಳಿಕೆ ನೀಡಿದೆ.

ಇಬ್ಬರು ಪೈಲೆಟ್ ಗಳು ತನ್ನ ವಶದಲ್ಲಿದ್ದಾರೆ ಎಂದು ಹೇಳಿಕೆ ನೀಡಿದ್ದ ಪಾಕ್ ನಂತರ ಕೇವಲ ಓರ್ವ ಪೈಲೆಟ್ ತನ್ನ ವಶದಲ್ಲಿದ್ದಾನೆ,ಅವರನ್ನು ಮಿಲಿಟರಿ ನೀತಿಗನುಗುಣವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಪಾಕ್ ತಿಳಿಸಿದೆ.

Trending News