ಕೊರೋನಾ ಹರಡುವಿಕೆ ವಿಷಯದಲ್ಲಿ ಚೀನಾವನ್ನು ಮೀರಿಸಲಿರುವ ಭಾರತ

ಭಾರತ ಇವತ್ತೇ ಇಂಥದೊಂದು ಕಹಿ ಸುದ್ದಿಯನ್ನು ಉಣಬಡಿಸಲಿದೆ. ಕೊರೋನಾ ಹರಡುವಿಕೆ ವಿಷಯದಲ್ಲಿ ಚೀನಾವನ್ನು ಮೀರಿಸಲಿದೆ. ಅಂಕಿಅಂಶಗಳು ಈ‌ ಕಹಿ ಸತ್ಯವನ್ನು ಸಾದರ ಪಡಿಸುತ್ತಿವೆ.   

Last Updated : May 15, 2020, 10:24 AM IST
ಕೊರೋನಾ ಹರಡುವಿಕೆ ವಿಷಯದಲ್ಲಿ ಚೀನಾವನ್ನು ಮೀರಿಸಲಿರುವ ಭಾರತ title=

ನವದೆಹಲಿ: ಜಾಗತಿಕ ಪಿಡುಗಾಗಿ ಪರಿಪರಿಯಾಗಿ ಕಾಡುತ್ತಿರುವ ಕೊರೊನಾವೈರಸ್ (Coronavirus) ಅನ್ನು ಕೊನೆಗಾಣಿಸಲು ಭಾರತ ಹಲವಾರು ರೀತಿಯ ಕಸರತ್ತು ನಡೆಸುತ್ತಿದೆ. ಆದರೆ ದಿನದಿಂದ ದಿನಕ್ಕೆ ‌ಕಡಿಮೆ ಆಗಬೇಕಿದ್ದ ಕೊರೋನಾ ಸೋಂಕು ಪೀಡಿತರ ಸಂಖ್ಯೆ ದುಪ್ಪಟ್ಟಾಗುತ್ತಿದೆ‌. ಎಷ್ಟರಮಟ್ಟಿಗೆ ಎಂದರೇ 'ಕೊರೋನಾ ಜನಕ' ಚೀನಾವನ್ನೇ ಮೀರಿಸುವ ಹಂತಕ್ಕೆ...

ಹೌದು, ಭಾರತ ಇವತ್ತೇ ಇಂಥದೊಂದು ಕಹಿ ಸುದ್ದಿಯನ್ನು ಉಣಬಡಿಸಲಿದೆ. ಕೊರೋನಾ  ಕೋವಿಡ್ -19 (Covid-19) ಹರಡುವಿಕೆ ವಿಷಯದಲ್ಲಿ ಚೀನಾವನ್ನು ಮೀರಿಸಲಿದೆ. ಅಂಕಿಅಂಶಗಳು ಈ‌ ಕಹಿ ಸತ್ಯವನ್ನು ಸಾದರ ಪಡಿಸುತ್ತಿವೆ. ಭಾರತದಲ್ಲಿ ಇವತ್ತು ಕೊರೊನಾ ಸೋಂಕು ಪೀಡಿತರ ಸಂಖ್ಯೆ 81 ಸಾವಿರವನ್ನು ದಾಟಿದೆ. 

ಅಷ್ಟೇಯಲ್ಲ, ಪ್ರತಿದಿನ ಭಾರತದ ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸುವ ಮಾಹಿತಿಗಳನ್ನು ನೋಡುತ್ತಿದ್ದರೆ ಭಾರತ ಸಾಗುತ್ತಿರುವ ಹಾದಿಯ ಸ್ಪಷ್ಟ ಚಿತ್ರಣ ಸಿಗಲಿದೆ. ಮೇ 6ರಿಂದ ದೇಶದಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ದಿನವೊಂದರಲ್ಲಿ ಮೂರು ಸಾವಿರ ಮೀರಲು ಆರಂಭಿಸಿತು. ಅಲ್ಲಿಂದ ಇಲ್ಲಿಯವರೆಗೆ ಕೆಳಮುಖವಾಗಿಲ್ಲ. ಬೇಕಿದ್ದರೆ ಈ ಅಂಕಿಅಂಶಗಳನ್ನು ನೋಡಿ...

ದಿನಾಕವಾರು ಪತ್ತೆಯಾದ ಕೊರೋನಾ ಪ್ರಕರಣಗಳ ಸಂಖ್ಯೆ
ಮೇ 6ರಂದು 3,561,
ಮೇ 7ರಂದು 3,390,
ಮೇ 8ರಂದು 3,320,
ಮೇ 9ರಂದು 3,277,
ಮೇ 10ರಂದು 4,213,
ಮೇ 11ರಂದು 3,064,
ಮೇ 12ರಂದು 3,525,
ಮೇ 13ರಂದು 3,722,
ಮೇ 14ರಂದು 3,967.

ಜಗತ್ತಿಗೇ ಸೋಂಕು ಹರಡಿಸಿರುವ ಚೀನಾ (China) ಪರಿಸ್ಥಿತಿ ಭಿನ್ನವಾಗಿದೆ. ಕೊರೋನಾ ವೈರಸ್ ಹರಡುವಿಕೆ ಸಂಪೂರ್ಣವಾಗಿ ತೆಹಬದಿಗೆ ಬಂದಿದೆ. ಕಳೆದ ವಾರ ಕೇವಲ 6 ಪ್ರಕರಣಗಳು ವರದಿಯಾಗಿವೆ. ಇದಕ್ಕೂ ಹಿಂದಿನ ವಾರ 7 ಪ್ರಕರಣಗಳು ವರದಿಯಾಗಿದ್ದವು. ಒಂದು ತಿಂಗಳಿನಿಂದ ಮಾರಕ ಕಾಯಿಲೆ ಕೊರೊನಾಗೆ ಚೀನಾದಲ್ಲಿ ಒಬ್ಬರೂ ಮೃತಪಟ್ಟಿಲ್ಲ.

ಭಾರತದ ಇಂದಿನ ಕೊರೋನಾ ಸೋಂಕು ಪೀಡಿತರ ಸಂಖ್ಯೆ 81,970. ಚೀನಾದ ಇಂದಿನ ಕೊರೋನಾ ಸೋಂಕು ಪೀಡಿತರ ಸಂಖ್ಯೆ 82,933‌. ಪ್ರತಿದಿನ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಭಾರತದಲ್ಲಿ ಪತ್ತೆ ಆಗುತ್ತಿರುವುದರಿಂದ ಭಾರತ ಮತ್ತು ಚೀನಾ ನಡುವೆ ಕೊರೊನಾ ವೈರಸ್ ಪೀಡಿತರ ನಡುವೆ ಇರುವ 963 ಸಂಖ್ಯೆಗಳ ವ್ಯತ್ಯಾಸವನ್ನು ಭಾರತ ಇಂದೇ ಮೀರಿಸುವುದರಲ್ಲಿ ಯಾವ ಅನುಮಾನಗಳೂ ಉಳಿದಿಲ್ಲ‌.

ಜಾಗತಿಕವಾಗಿ ಕೊರೋನಾ ವೈರಸ್ ಪೀಡಿತರ ಸಂಖ್ಯೆಯಲ್ಲಿ ಅಮೇರಿಕಾ ಮೊದಲ ದೇಶವಾಗಿದೆ. ಚೀನಾ 11ನೇ ಸ್ಥಾನದಲ್ಲಿದೆ. ಇಂದು ಭಾರತವೇ ಚೀನಾವನ್ನು ಹಿಂದೂಡಿ 11ನೇ ಸ್ಥಾನ ತಲುಪುವ ಸಾಧ್ಯತೆಗಳು ನಿಚ್ಛಳವಾಗಿವೆ.

Trending News