ಕೇವಲ 500 ರೂ.ಗೆ ಭಾರತೀಯ ಸೇನೆ ಸಮವಸ್ತ್ರ!

ಭಾರತೀಯ ಸೇನಾ ಪಡೆಯ ಸಮವಸ್ತ್ರಗಳು ಇದೀಗ ರಾಜಸ್ತಾನದ ಗಡಿಭಾಗದಲ್ಲಿ 500 ರೂ. ಮತ್ತು 1000 ರೂ.ಗಳಿಗೆ ಮಾರಾಟವಾಗುತ್ತಿವೆ! 

Last Updated : Jan 7, 2018, 11:24 AM IST
ಕೇವಲ 500 ರೂ.ಗೆ ಭಾರತೀಯ ಸೇನೆ ಸಮವಸ್ತ್ರ! title=

ನವದೆಹಲಿ : ಭಾರತೀಯ ಸೇನಾ ಪಡೆಯ ಸಮವಸ್ತ್ರಗಳು ಇದೀಗ ರಾಜಸ್ತಾನದ ಗಡಿಭಾಗದಲ್ಲಿ 500 ರೂ. ಮತ್ತು 1000 ರೂ.ಗಳಿಗೆ ಮಾರಾಟವಾಗುತ್ತಿವೆ! 

ಇಲ್ಲಿನ ಅಂಗಡಿಗಳ ಮಾಲೀಕರು ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಸೇನಾ ಸಮವಸ್ತ್ರಗಳನ್ನು ಮಾರಾಟ ಮಾಡುತ್ತಿದ್ದು, ಭದ್ರತೆ ದೃಷ್ಟಿಯಿಂದ ಇದು ಬಹಳ ಸೂಕ್ಷ್ಮವಾದ ವಿಚಾರವಾಗಿದ್ದು, ಸಮವಸ್ತ್ರ ಖರೀದಿಸಲು ಬರುವ ಗ್ರಾಹಕರ ಗುರುತಿನ ಚೀಟಿಯನ್ನೂ ಪರಿಶೀಲಿಸದೆ ಅಕ್ರಮವಾಗಿ ಸಮವಸ್ತ್ರ ಮಾರಾಟಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. 

2016ರಲ್ಲಿ, ಪತ್ಹಾನ್ಕೋಟ್ ನಲ್ಲಿನ ವಾಯು ಪಡೆ ಕೇಂದ್ರದ ಮೇಲೆ ಸೇನಾ ಸಮವಸ್ತ್ರ ಧರಿಸಿ ಉಗ್ರರು ಧಾಳಿ ನಡೆಸಿದ್ದರು. ಕೇವಲ ಸಮವಸ್ತ್ರ ಮಾತ್ರವಲ್ಲದೆ, ಬೂಟ್ ಗಳು, ಜಾಕೆಟ್, ಬೆಲ್ಟ್, ಬೆಡ್ ರೋಲ್ಸ್ ಮತ್ತು ಸೇನಾ ಪಡೆಯವರು ಬಳಸುವ ಎಲ್ಲಾ ರೀತಿಯ ಚಿಹ್ನೆಗಳೂ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. 

ರಾಜ್ಯಾದ್ಯಂತ ಸೇನಾ ಸಮವಸ್ತ್ರಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದನ್ನು 2016ರಲ್ಲಿಯೇ ಪಂಜಾಬ್ ಸರ್ಕಾರ ನಿಷೇಧಿಸಿದ್ದರೂ ಇಲ್ಲಿನ ಜೈ ನಾರಾಯಣ್ ವ್ಯಾಸ್ ವೃತ್ತ ಮತ್ತು ಫೋರ್ಟ್ ರಸ್ತೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಪತ್ಹಾನ್ಕೋಟ್ ಉಗ್ರರ ದಾಳಿ ನಂತರ ಸಾರ್ವಜನಿಕರಿಗೆ ಸೇನಾ ಉಡುಪು ಧರಿಸದಂತೆ ಸೂಚನೆ ನೀಡಲಾಗಿದೆ. ಹಾಗೆಯೇ ಅಂಗಡಿ ಮಾಲೀಕರಿಗೂ ಮಾರಾಟ ಮಾಡದಂತೆ ಆದೇಶಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

Trending News