ಚಾಮರಾಜನಗರ: ವ್ಯಕ್ತಿ ಮೃತಪಟ್ಟ ಬಳಿಕ ಸಮಾಧಿ ನಿರ್ಮಾಣ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬರು ತಾನು ಯಾರಿಗೂ ತೊಂದರೆ ಕೊಡಬಾರದು, ತಾನು ದುಡಿದ ಹಣದಲ್ಲೇ ತನ್ನ ಅಂತಿಮ ವಿಧಿ-ವಿಧಾನ ನೆರವೇರಬೇಕೆಂದು ಇಚ್ಚಿಸಿ 20 ವರ್ಷಗಳ ಹಿಂದೆಯೇ ಸಮಾಧಿ ನಿರ್ಮಿಸಿಕೊಂಡಿದ್ದು ಅಲ್ಲೇ ಇಂದು ಅಂತಿಮ ವಿಧಿ ವಿಧಾನ ನೆರವೇರುತ್ತಿದೆ.
ಇದನ್ನೂ ಓದಿ-Soft Waxing Tips: ಮನೆಯಲ್ಲಿಯೇ ಮಾಡಿಕೊಳ್ಳಿ ಸಾಫ್ಟ್ ವ್ಯಾಕ್ಸಿಂಗ್
ಹೌದು..., ಚಾಮರಾಜನಗರ ತಾಲೂಕಿನ ನಂಜದೇವನಪುರ ಗ್ರಾಮದ ಪುಟ್ಟನಂಜಪ್ಪ(85) ಎಂಬವರು ಇಂದು ದೈವಾಧೀನರಾಗಿದ್ದು ಇವರು 20 ವರ್ಷಗಳ ಹಿಂದೆಯೇ ತಮ್ಮ ಜಮೀನಿನಲ್ಲಿ ತಾವೇ ಕುಳಿತು ಅಳತೆ ಮಾಡಿ ಗೋಪುರ ಶೈಲಿಯ ಸಮಾಧಿಯೊಂದನ್ನು ನಿರ್ಮಿಸಿಕೊಂಡಿದ್ದಾರೆ. ಜೊತೆಗೆ, ಅಂತ್ಯ ಸಂಸ್ಕಾರಕ್ಕೆ ಬೇಕಾದ ವಿಭೂತಿ, ಕಳಶಗಳು, ಒಂದು ಲಕ್ಷ ರೂ.ನ್ನೂ ಎತ್ತಿಟ್ಟಿದ್ದು, ಆ ಹಣದಲ್ಲೇ ಅಂತ್ಯಕ್ರಿಯೆ ನೆರವೇರುತ್ತಿದೆ.ಪುಟ್ಟಮಲ್ಲಪ್ಪ ಅವರು ಸಾಕಷ್ಟು ಸ್ಥಿತಿವಂತರೇ ಆಗಿದ್ದು ಮೂರು ಪುತ್ರರಿದ್ದಾರೆ.ತನ್ನ ತಿಥಿಯನ್ನು ತನ್ನ ಹಣದಲ್ಲೇ ಮಾಡಬೇಕೆಂಬ ಸ್ವಾಭಿಮಾನದಿಂದಾಗಿ ಸಮಾಧಿ ನಿರ್ಮಾಣ ಹಾಗೂ ಹಣ ಎತ್ತಿಟ್ಟಿದ್ದರು ಎಂದು ಕುಟುಂಬಸ್ಥರು ತಿಳಿಸಿದರು.
ಇದನ್ನೂ ಓದಿ-Astro Tips: ಖರ್ಚು ಮತ್ತು ಸಾಲ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲವೇ? ಇಲ್ಲಿದೆ ನೋಡಿ ಪರಿಹಾರ
ಪತ್ನಿ ಪಕ್ಕವೇ ಸಮಾಧಿ: ಪುಟ್ಟಮಲ್ಲಪ್ಪ ಅವರ ಪತ್ನಿ ಕಳೆದ ವರ್ಷ ಕೊರೊನಾದಲ್ಲಿ ಮೃತಪಟ್ಟಿದ್ದು ಅವರ ಅಂತ್ಯ ಸಂಸ್ಕಾರವನ್ನು ಮಕ್ಕಳಿಂದ ಹಣ ಪಡೆಯದೇ ತಾವೇ ನೆರವೇರಿಸಿದ್ದರು.ಅಂತ್ಯಸಂಸ್ಕಾರಕ್ಕೆ ಬೇಕಾದ ಪ್ರತಿಯೊಂದನ್ನು ತಂದಿಟ್ಟಿದ್ದರು.ಕಳೆದ 12 ದಿನಗಳಿಂದ ಅವರ ಆರೋಗ್ಯ ಹದಗೆಟ್ಟು 5 ದಿನಗಳಿಂದ ಮಾತು ನಿಂತಿತ್ತು, ಭಾನುವಾರ ಸಂಜೆ ತಂದೆಯವರು ಅಸುನೀಗಿದ್ದು ಇಂದು ಅವರು ನಿರ್ಮಿಸಿಕೊಂಡ ಸಮಾಧಿಯಲ್ಲೇ, ಅವರು ಎತ್ತಿಟ್ಟಿದ್ದ ಹಣದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ ಎಂದು ಪುತ್ರ ಗೌಡಿಕೆ ನಾಗೇಶ್ ತಿಳಿಸಿದರು.
ಒಟ್ಟಿನಲ್ಲಿ ಬದುಕಿನುದ್ದಕ್ಕೂ ಸ್ವಾಭಿಮಾನದಿಂದ ಬದುಕಿ ಈಗ ಸಾವಿನಲ್ಲೂ ಸ್ವಾಭಿಮಾನ ಮೆರೆದಿರುವುದು ಅಪರೂಪ ಮತ್ತು ವಿಶೇಷ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.