Train Birthಗೆ ಸಂಬಂಧಿಸಿದ ಈ ನಿಯಮಗಳು ನಿಮಗೆ ತಿಳಿದಿವೆಯೇ? ಯಾತ್ರೆಗೆ ಹೊರಡುವ ಮುನ್ನ ನೀವು ತಿಳಿದುಕೊಳ್ಳಿ

Indian Railways Reservation Rules: ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೇಲ್ವೆ ವಿಭಾಗ (Indian Railways) ಬರ್ತ್ ಗೆ ಸಂಬಂಧಿಸಿದ ನಿಯಮಗಳನ್ನು ಕಠಿಣಗೊಳಿಸಿದೆ. ಪ್ರಯಾಣಿಸುವ ಮೊದಲು ನೀವು ಅವುಗಳನ್ನು ತಿಳಿಯುವುದರ ಜೊತೆಗೆ ಅವುಗಳನ್ನು ಅನುಸರಿಸಬೇಕಾಗಿದೆ.

Written by - Nitin Tabib | Last Updated : Aug 11, 2021, 01:24 PM IST
  • ರೈಲು ಪ್ರಯಾಣದಲ್ಲಿ ಬರ್ತ್ ಕುರಿತು ರೈಲ್ವೆ ನಿಯಮಗಳನ್ನು ಮಾಡಿದೆ.
  • ಪ್ರಯಾಣಕ್ಕೂ ಮುನ್ನ ಅವುಗಳನ್ನು ತಿಳಿದುಕೊಳ್ಳಿ.
  • ರಾತ್ರಿ 10ರ ನಂತರ TTE ನಿಮ್ಮನ್ನು ಡಿಸ್ಟರ್ಬ್ ಮಾಡುವ ಹಾಗಿಲ್ಲ.
Train Birthಗೆ ಸಂಬಂಧಿಸಿದ ಈ ನಿಯಮಗಳು ನಿಮಗೆ ತಿಳಿದಿವೆಯೇ? ಯಾತ್ರೆಗೆ ಹೊರಡುವ ಮುನ್ನ ನೀವು ತಿಳಿದುಕೊಳ್ಳಿ title=
Indian Railways Reservation Rules (File Photo)

Indian Railways Reservation Rules: ನೀವೂ ಒಂದು ವೇಳೆ ಪ್ರಯಾಣಿಸುವ ಯೋಜನೆ ರೂಪಿಸಿದ್ದರೆ, ಇಲ್ಲಿದೆ ನಿಮಗೊಂದು ಪ್ರಮುಖ ಸುದ್ದಿ. ಪ್ರತಿ ಬಾರಿ ಟಿಕೆಟ್ ಬುಕಿಂಗ್ ಸಮಯದಲ್ಲಿ ನಿಮಗೂ ಕೂಡ ನಿಮ್ಮ ಬರ್ತ್ ಆಯ್ಕೆ ಇರುತ್ತದೆ. ಆದರೆ, ಪ್ರತಿ ಬಾರಿ ನಿಮಗೆ ನಿಮ್ಮ ಮನಸ್ಸಿಗೆ ತಕ್ಕಂತೆ ಟಿಕೆಟ್ ಸಿಗುವುದಿಲ್ಲ. ಏಕೆಂದರೆ ಭಾರತೀಯ ರೆಲ್ವೇಸ್ ಸೀಮಿತ್ ಸೀಟ್ ಗಳನ್ನೂ ಹೊಂದಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ವಿಭಾಗ ಬರ್ತ್ ಗಳಿಗೆ ಸಂಬಂಧಿಸಿದ ಕಠಿಣ ನಿಯಮಗಳನ್ನು ಮಾಡಿದೆ. ಪ್ರಯಾಣಿಸುವ ಮೊದಲು ನೀವು ಅವುಗಳನ್ನು ತಿಳಿದುಕೊಂಡು, ಅವುಗಳನ್ನು ಅನುಸರಿಸುವ ಅವಶ್ಯಕತೆ ಇದೆ .

ಪ್ರಯಾಣದ ವೇಳೆ ಮಿಡಲ್ ಬರ್ತ್ (Indian Railways Middle Birth rules)
ಪ್ರಯಾಣದ ವೇಳೆ ಒಂದು ವೇಳೆ ನಿಮಗೆ ಮಿಡ್ಲ್ ಬರ್ತ್ ಸಿಕ್ಕರೆ ನಿಮಗೆ ಹಲವು ಬಾರಿ ತೊಂದರೆಯಾಗುತ್ತದೆ. ವಾಸ್ತವದಲ್ಲಿ ಲೋವರ್ ಬರ್ತ್ ನಲ್ಲಿರುವ ಯಾತ್ರಿಗಳು ಸಾಮಾನ್ಯವಾಗಿ ತಡರಾತ್ರಿಯವರೆಗೆ ಎಚ್ಚರದಿಂದ ಇರುತ್ತಾರೆ. ಹೀಗಿರುವಾಗ ಮಿಡ್ಲ್ ಬರ್ತ್ ನಲ್ಲಿರುವ ವ್ಯಕ್ತಿಗಳಿಗೆ ಮಿಡಲ್ ಬರ್ತ್ ಗೆ ಸಂಬಂಧಿಸಿದ ನಿಯಮಗಳು ಗೊತ್ತಿರಬೇಕು. ಮಿಡಲ ಬರ್ತ್ ಗೆ ಸಂಬಂಧಿಸಿದ ಯಾತ್ರಿಗಳ ನಿಯಮಗಳು (Indian Railways Rules) ಭಿನ್ನವಾಗಿವೆ. 

ಇದನ್ನೂ ಓದಿ-Indian Railways: ರೈಲು ಪ್ರಯಾಣದಲ್ಲಿ ಹಠಾತ್ ಬದಲಾವಣೆ? ಟಿಕೆಟ್ ರದ್ದುಗೊಳಿಸದೆ ಪ್ರಯಾಣದ ದಿನಾಂಕವನ್ನು ಬದಲಾಯಿಸಿ

ಮಿಡ್ಲ್ ಬರ್ತ್ ಗೆ ಸಂಬಂಧಿಸಿದ ಮಲಗುವ ನಿಯಮ (Indian Railways Latest News)
ಸಾಮಾನ್ಯವಾಗಿ ಮಿಡ್ಲ್ ಬರ್ತ್ ನಲ್ಲಿ ಸಂಚರಿಸುವ ಯಾತ್ರಿಗಳು ರೈಲು ಆರಂಭವಾಗುತ್ತಿದ್ದಂತೆ, ಅದನ್ನು ತೆರೆದುಕೊಳ್ಳುತ್ತಾರೆ. ಇದರಿಂದ ಕೆಳಗಿನ ಬರ್ತ್ ನಲ್ಲಿರುವ ಯಾತ್ರಿಗಳಿಗೆ ತುಂಬಾ ತೊಂದರೆಯುಂಟಾಗುತ್ತದೆ. ರೇಲ್ವೆ ನಿಯಮಗಳ ಪ್ರಕಾರ ಮಿಡಲ್ ಬರ್ತ್ ನಲ್ಲಿ ಮಲಗುವ ಪ್ರಯಾಣಿಕರು ಕೇವಲ ರಾತ್ರಿ 10 ರಿಂದ ಬೆಳಗ್ಗೆ 6ರವರೆಗೆ ಮಾತ್ರ ಮಲಗಬಹುದು. ಅಂದರೆ, 10 ಗಂಟೆಗೂ ಮುನ್ನ ಒಂದು ವೇಳೆ ಯಾವುದೇ ಪ್ರಯಾಣಿಕ ಮಿಡಲ್ ಬರ್ತ್ ತೆರೆಯಲು ಬಯಸಿದರೆ ಆತನನ್ನು ನೀವು ತಡೆಯಬಹುದು ಹಾಗೂ ಬೆಳಗ್ಗೆ 6 ಗಂಟೆಯ ಬಳಿಕ ಅದನ್ನು ಕೆಳಗಿಳಿಸಲು ಸೂಚಿಸಬಹುದು. ಇದರಿಂದ ಇತರ ಪ್ರಯಾಣಿಕರಿಗೆ ಲೋವರ್ ಬರ್ತ್ ನಲ್ಲಿ ಕುಳಿತುಕೊಳ್ಳಲು ಅನುಕೂಲವಾಗುತ್ತದೆ. ಹಲವು ಬಾರಿ ಕೆಳಗಿನ ಬರ್ತ್ ನಲ್ಲಿ ಕುಳಿತುಕೊಂಡ ಪ್ರಯಾಣಿಕರು ತಡರಾತ್ರಿಯವರೆಗೆ ಎಚ್ಚರದಿಂದ ಇರುತ್ತಾರೆ. ಇದರಿಂದ ಮಿಡ್ಲ್ ಬರ್ತ್ ನಲ್ಲಿರುವ ಯಾತ್ರಿಗಳಿಗೆ ತೊಂದರೆ ಉಂಟಾಗುತ್ತದೆ. ಹೀಗಿರುವಾಗ ರಾತ್ರಿ 10ರ ನಂತರ ಮಿಡ್ಲ್ ಬರ್ತ್ ತೆರವುಗೊಳಿಸುವಂತೆ ನೀವು ಅವರಿಗೆ ಸೂಚಿಸಬಹುದು.

ಇದನ್ನೂ ಓದಿ-Indian Railways : ರೈಲು ಟಿಕೆಟ್ ಬುಕ್ ಮಾಡುವಾಗ ನೆನಪಿರಲಿ ಈ ಕೋಡ್ ಇಲ್ಲವಾದರೆ ಸಿಗುವುದಿಲ್ಲ ಸೀಟ್

ರಾತ್ರಿ 10ರ ಬಳಿಕ TTE ನಿಮ್ಮನ್ನು ಡಿಸ್ಟರ್ಬ್ ಮಾಡುವ ಹಾಗಿಲ್ಲ
ಯಾತ್ರೆಯ ವೇಳೆ ಟ್ರಾವೆಲ್ ಟಿಕೆಟ್ ಎಕ್ಸಾಮಿನರ್ ನಿಮ್ಮಿಂದ ಟಿಕೆಟ್ ಪಡೆದುಕೊಳ್ಳಲು ಬರುತ್ತಾರೆ. ಹಲವು ಬಾರಿ ಅವರು ತಡರಾತ್ರಿ ಬಂದು ನಿಮ್ಮನ್ನು ಎಚ್ಚರಿಸುತ್ತಾರೆ ಮತ್ತು ನಿಮ್ಮ ಐಡಿ ಪ್ರೂಫ್ ತೋರಿಸಲು ಹೇಳುತ್ತಾರೆ. ಆದರೆ, ರೇಲ್ವೆ ನಿಯಮಗಳ ಅನುಸಾರ ರಾತ್ರಿ 10ಗಂಟೆಯ ಬಳಿಕ TTE ಕೂಡ ನಿಮ್ಮನ್ನು ಡಿಸ್ಟರ್ಬ್ ಮಾಡುವ ಹಾಗಿಲ್ಲ. ಅವರು ಬೆಳೆಗ್ಗೆ 6 ರಿಂದ ರಾತ್ರಿ 10ರವರೆಗೆ ಮಾತ್ರ ಟಿಕೆಟ್ ಪರಿಶೀಲನೆ ಮಾಡಬಹುದು. ರಾತ್ರಿ ಮಲಗಿದ ಬಳಿಕ ಅವರು ಯಾವುದೇ ಯಾತ್ರಿಯನ್ನು ಡಿಸ್ಟರ್ಬ್ ಮಾಡುವ ಹಾಗಿಲ್ಲ. ಇದು ರೇಲ್ವೆ ಮಂಡಳಿಯ ಮಾರ್ಗಸೂಚಿಯಾಗಿದೆ. ಆದರೆ, ರಾತ್ರಿ 10 ಗಂಟೆಯ ನಂತರ ಪ್ರಯಾಣ ಆರಂಭಿಸುವ ಯಾತ್ರಿಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.

ಇದನ್ನೂ ಓದಿ-Indian Railways: ರೈಲು ಪ್ರಯಾಣಿಕರಿಗೆ ಬಿಗ್ ಶಾಕ್, ಇನ್ಮುಂದೆ ರೈಲಿನಲ್ಲಿ ಸಿಗಲ್ಲ ಈ ಸೌಕರ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News