ನವದೆಹಲಿ:ಭಾರತೀಯರಾದ ನಾವು ತಿನ್ನುವ ವಿಚಾರದಲ್ಲಿ ಯಾವಾಗಲು ಒಂದು ಹೆಜ್ಜೆ ಮುಂದೆಯೇ ಇರುತ್ತೇವೆ. ಯಾಕೆ ಇರಬಾರದು? ವಿವಿಧ ರೀತಿಯ ರುಚಿಕರವಾದ ಆಹಾರ ಪದಾರ್ಥಗಳು ಮುಂದೆ ಬಂದರೆ ಯಾರಿಗೆ ಬಿಡಲು ಇಷ್ಟವಾಗುತ್ತದೆ. ಆದರೆ, ಭಾರತೀಯರಿಗೆ ಅತಿ ಇಷ್ಟವಾಗುವ ಡಿಶ್ ಯಾವುದು ಎಂಬುದನ್ನು ನೀವು ತಿಳಿದುಕೊಳ್ಳಲು ಬಯಸುವುದಿಲ್ಲವೇ? ಸಿಹಿ ಪದಾರ್ಥಗಳಲ್ಲಿ ಭಾರತೀಯರಿಗೆ ಯಾವ ಪದಾರ್ಥ ಅತಿ ಹೆಚ್ಚು ಇಷ್ಟ? ಹೌದು, ಇತ್ತೀಚಿಗೆ ನಡೆಸಲಾದ ಒಂದು ಅಧ್ಯಯನ ಈ ಕುರಿತು ಏನು ಹೇಳುತ್ತದೆ ಬನ್ನಿ ನೋಡೋಣ.
ಮನೆ ಮನೆಗೆ ಆಹಾರ ಪೂರೈಸುವ ಆಪ್ ಸ್ವಿಗಿ ಈ ಕುರಿತು ಅಧ್ಯಯನ ನಡೆಸಿದೆ. ಸ್ವಿಗಿಯ ವಾರ್ಷಿಕ ವರದಿಯಲ್ಲಿ ಈ ಅಂಶ ಬಹಿರಂಗಗೊಳಿಸಲಾಗಿದೆ. ಈ ವರದಿ ಪ್ರಕಾರ ಭಾರತದಲ್ಲಿ ಪ್ರತಿ ನಿಮಿಷಕ್ಕೆ ಒಟ್ಟು 95 ಬಿರಿಯಾನಿಗಳನ್ನು ಆರ್ಡರ್ ಮಾಡಲಾಗಿದೆ ಎನ್ನಲಾಗಿದೆ.
ಹೌದು, ಬಿರಿಯಾನಿ. ಅಷ್ಟೇ ಅಲ್ಲ ಬಿರಿಯಾನಿ ಜನರಿಗೆ ಎಷ್ಟೊಂದು ಇಷ್ಟವಾಗುತ್ತದೆ ಅಂದರೆ, ಕಳೆದ ಎರಡು ವರ್ಷಗಳಲ್ಲಿ ಬಿರಿಯಾನಿ ಡಿಶ್ ಅನ್ನೇ ಹೆಚ್ಚಿಗೆ ಆರ್ಡರ್ ಮಾಡಲಾಗಿದೆ. ಅದರಲ್ಲೂ ವಿಶೇಷವಾಗಿ ಜನರು ಚಿಕನ್ ಬಿರಿಯಾನಿ ಅನ್ನು ಹೆಚ್ಚಿಗೆ ಇಷ್ಟಪಡುತ್ತಾರೆ ಎಂದು ಸ್ವಿಗಿ ವರದಿ ಹೇಳಿದೆ.
ಆಪ್ ನೀಡಿರುವ ವರದಿಯ ಪ್ರಕಾರ ಈ ವರ್ಷ 17ಲಕ್ಷ 69 ಸಾವಿರದ 399 ಗುಲಾಬ್ ಜಾಮುನ್ ಗಳಿಗಾಗಿ ಆರ್ಡರ್ ಗಳು ಬಂದಿವೆ. ಇದರಿಂದ ಇಂದಿಗೂ ಕೂಡ ಗುಲಾಬ್ ಜಾಮೂನ್ ಭಾರತೀಯರ ಅತ್ಯಂತ ಜನಪ್ರೀಯ ಹಾಗೂ ಇಷ್ಟದ ಸ್ವೀಟ್ ಡಿಶ್ ಎಂದು ಹೇಳಬಹುದು.
ದೇಶದ ಮಹಾನಗರಗಳಾಗಿರುವ ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್ ಹಾಗೂ ಚೆನ್ನೈಗಳಿಂದ ಹೆಚ್ಚಿನ ಆರ್ಡರ್ ಬಂದಿವೆ ಎಂದು ಆಪ್ ವರದಿ ಬಹಿರಂಗಗೊಳಿಸಿದೆ.
ವರದಿಯ ಪ್ರಕಾರ ಸ್ವೀಟ್ ಡಿಶ್ ನಲ್ಲಿ ಜನರಿಗೆ ಮೂಂಗ್ ದಾಲ್ ಹಲ್ವಾ, ಫಾಲೂದಾ ಕೂಡ ಹೆಚ್ಚು ಇಷ್ಟ ಎಂದು ಹೇಳಲಾಗಿದ್ದು, ವರ್ಷದಲ್ಲಿ 11.94 ಲಕ್ಷ ಫಾಲೂದಾ ಹಾಗೂ 2 ಲಕ್ಷಕ್ಕೂ ಅಧಿಕ ಮೂಂಗ್ ದಾಲ್ ಹಲ್ವಾ ಆರ್ಡರ್ ಗಳನ್ನು ಮಾಡಲಾಗಿದೆ ಎನ್ನಲಾಗಿದೆ.
ಬಿರಿಯಾನಿ ಬಳಿಕ ಎರಡನೇ ಸ್ಥಾನದಲ್ಲಿ ಜನರು ಖಿಚಡಿಯನ್ನು ಹೆಚ್ಚಿಗೆ ಇಷ್ಟಪಟ್ಟಿದ್ದಾರೆ. ಪ್ರಸಕ್ತ ವರ್ಷದಲ್ಲಿ ಖಿಚಡಿ ಆರ್ಡರ್ ಗಳ ಸಂಖ್ಯೆಯಲ್ಲಿ ಶೇ. 128 ರಷ್ಟು ವೃದ್ಧಿಯಾಗಿದೆ. ಹಿಟ್ ಇಲ್ಲದ ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಮಸಾಲಾ ದೋಸೆ, ಪನ್ನೀರ್ ಬಟರ್ ಮಸಾಲ, ವೆಜ್ ಫ್ರೈಡ್ ರೈಸ್, ವೆಜ್ ಬಿರಿಯಾನಿ ಹಾಗೂ ದಾಲ್ ಮಖನಿ ಹೆಸರುಗಳು ಶಾಮೀಲಾಗಿವೆ.