ಮುಂಬೈ: ಪೈಲೆಟ್'ಗಳ ಕೊರತೆಯಿಂದಾಗಿ ಇಂಡಿಗೋ ಏರ್ಲೈನ್ಸ್ 30ಕ್ಕೂ ಅಧಿಕ ವಿಮಾನಗಳ ಹಾರಾಟವನ್ನು ಮಂಗಳವಾರ ರದ್ದುಪಡಿಸಿದೆ.
ಸೋಮವಾರವೂ ಸಹ ಗುರುಗ್ರಾಮ ಪ್ರಧಾನ ಕಚೇರಿ ತನ್ನ ವ್ಯಾಪ್ತಿಯ 32 ವಿಮಾನಗಳನ್ನು ರದ್ದುಗೊಳಿಸಿತ್ತು. ಆದರೆ, ಕಳೆದ ಶನಿವಾರದಿಂದ ವಿಮಾನ ಸಂಸ್ಥೆಯು ಹೆಚ್ಚು ಸಂಖ್ಯೆಯಲ್ಲಿ ವಿಮಾನ ಹಾರಾಟವನ್ನು ದಿಡೀರ್ ರದ್ದುಗೊಳಿಸುತ್ತಿದ್ದರೂ ಸಹ ಈವರೆಗೆ ವಿಮಾನ ಪ್ರಾಧಿಕಾರ ಯಾವುದೇ ತನಿಖೆ ಕೈಗೊಂಡಿಲ್ಲ ಎನ್ನಲಾಗಿದೆ.
ಮಂಗಳವಾರವೂ ಸಹ ಪೈಲೆಟ್'ಗಳ ಕೊರತೆಯಿಂದಾಗಿ 30ಕ್ಕೂ ಹೆಚ್ಚು ವಿಮಾನಗಳನ್ನು ಇಂಡಿಗೋ ರದ್ದುಪಡಿಸಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಕೊಲ್ಕತ್ತಾ, ಹೈದರಾಬಾದ್ ಮಾತು ಚೆನ್ನಿ ಮಾರ್ಗಗಳಲ್ಲಿ ಹೆಚ್ಚಿನ ವಿಮಾನಗಳನ್ನು ರದ್ದುಪಡಿಸಲಾಗಿದೆ.
ಕೊಲ್ಕತ್ತಾದಿಂದ 8, ಹೈದರಾಬಾದ್ ನಿಂದ 5, ಬೆಂಗಳೂರು ಮತ್ತು ಚೆನ್ನೈನಿಂದ 4 ವಿಮಾನಗಳ ಹಾರಾಟವನ್ನು ಇಂಡಿಗೋ ರದ್ದುಪಡಿಸಿದೆ.