ಕೊರೋನಾ ವೈರಸ್ ನಿಂದ ಹೂಡಿಕೆದಾರರ 11 ಲಕ್ಷ ಕೋಟಿ ರೂ. ಗುಳುಂ...!

ಕೊರೊನಾ ವೈರಸ್ ಭೀತಿಯಿಂದ ವಿಶ್ವಾದ್ಯಂತ ಕೋಲಾಹಲ ಸೃಷ್ಟಿಯಾಗಿದ್ದು, ಕಳೆದ ಒಂದು ವಾರ ಭಾರತೀಯ ಷೇರು ಮಾರುಕಟ್ಟೆಯ ಪಾಲಿಗೆ ಅತ್ಯಂತ ಕೆಟ್ಟ ವಾರವಾಗಿ ಪರಿಣಮಿಸಿದೆ. ವಿದೇಶಿ ಮಾರುಕಟ್ಟೆಗಳಿಂದ ಬರುತ್ತಿರುವ ನಿರಾಶಾದಾಯಕ ಸಂಕೇತಗಳಿಂದ ಭಾರತೀಯ ಮಾರುಕಟ್ಟೆ ಕುಸಿದುಹೋಗಿದ್ದು, ಹೂಡಿಕೆದಾರರ ಸುಮಾರು 11 ಲಕ್ಷ ಕೋಟಿ ರೂ. ಮುಳುಗಿಹೊಗಿವೆ.

Last Updated : Mar 1, 2020, 01:34 PM IST
ಕೊರೋನಾ ವೈರಸ್ ನಿಂದ ಹೂಡಿಕೆದಾರರ 11 ಲಕ್ಷ ಕೋಟಿ ರೂ. ಗುಳುಂ...! title=

ನವದೆಹಲಿ:ಕೊರೊನಾ ವೈರಸ್ ಭೀತಿಯಿಂದ ವಿಶ್ವಾದ್ಯಂತ ಕೋಲಾಹಲ ಸೃಷ್ಟಿಯಾಗಿದ್ದು, ಕಳೆದ ಒಂದು ವಾರ ಭಾರತೀಯ ಷೇರು ಮಾರುಕಟ್ಟೆಯ ಪಾಲಿಗೆ ಅತ್ಯಂತ ಕೆಟ್ಟ ವಾರವಾಗಿ ಪರಿಣಮಿಸಿದೆ. ವಿದೇಶಿ ಮಾರುಕಟ್ಟೆಗಳಿಂದ ಬರುತ್ತಿರುವ ನಿರಾಶಾದಾಯಕ ಸಂಕೇತಗಳಿಂದ ಭಾರತೀಯ ಮಾರುಕಟ್ಟೆ ಕುಸಿದುಹೋಗಿದ್ದು, ಹೂಡಿಕೆದಾರರ ಸುಮಾರು 11 ಲಕ್ಷ ಕೋಟಿ ರೂ. ಮುಳುಗಿಹೊಗಿವೆ. ಕಳೆದ ವಾರಕ್ಕೆ ಹೋಲಿಸಿದರೆ ಸೆನ್ಸೆಕ್ಸ್ ಸುಮಾರು ಶೇ.7ರಷ್ಟು ಕುಸಿದುಹೋಗಿದ್ದು, ನಿಫ್ಟಿ ಸೂಚ್ಯಂಕ ಕೂಡ ಶೇ.7ಕ್ಕಿಂತ ಅಧಿಕವಾಗಿ ಕುಸಿದುಹೋಗಿದೆ. ಕಳೆದ ವಾರಕ್ಕೆ ಹೋಲಿಸಿದರೆ BSEಯ 30 ಷೇರುಗಳು 2,872.83 ಅಂಕಗಳು ಅಂದರೆ ಸುಮಾರು ಶೇ.6.8 ರಷ್ಟು ಕುಸಿದು 38,297.29 ಅಂಕಗಳಿಗೆ ಬಂದು ತಲುಪಿದೆ.

ಇನ್ನೊಂದೆಡೆ NSE ಯ ಒಟ್ಟು 50 ಶೇರುಗಳು ಆಧಾರಿತ ಷೇರು ಸೂಚ್ಯಂಕ 879.10 ಅಂದರೆ ಶೇ.7.27ರಷ್ಟು ಕುಸಿದು 11,201.75 ಅಂಕಗಳಿಗೆ ಬಂದು ತಲುಪಿದೆ.

ಬಿಎಸ್ಇ-ಮಿಡ್-ಕ್ಯಾಪ್ ಸೂಚ್ಯಂಕವು ಕಳೆದ ವಾರದ ಮುಕ್ತಾಯಕ್ಕಿಂತ 1,094.39 ಪಾಯಿಂಟ್ ಅಥವಾ 6.97 ರಷ್ಟು ಇಳಿಕೆಯಾಗಿ, 14,600.02 ಕ್ಕೆ ತಲುಪಿದೆ, ಸ್ಮಾಲ್ ಕ್ಯಾಪ್ ಸೂಚ್ಯಂಕ ಕೂಡ 1,037.51 ಪಾಯಿಂಟ್ ಅಥವಾ 7.03 ಶೇಕಡಾ ಇಳಿದು, 13,709.01 ಕ್ಕೆ ತಲುಪಿದೆ.

ಚೀನಾದಲ್ಲಿ ಹರಡುತ್ತಿರುವ ಕೊರೊನಾ ವೈರಸ್ ಭೀತಿ  ಜಾಗತಿಕ ಆರ್ಥಿಕತೆಯ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಆತಂಕದ ನಡುವೆ ಪ್ರಮುಖ ಷೇರು ಸೂಚ್ಯಂಕಗಳು ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಒತ್ತಡಕ್ಕೆ ಸಿಲುಕಿದ್ದು, ಇದು ವಿಶ್ವದ ಇತರೆ ಪಸರಿಸಿ ಭಾರತೀಯ ಷೇರು ಮಾರುಕಟ್ಟೆಯ ಮೇಲೆ ವಿಪರೀತ ಪರಿಣಾಮ ಬೀರಿದೆ.

 

Trending News