close

News WrapGet Handpicked Stories from our editors directly to your mailbox

ಫರಿದಾಬಾದ್‌ನಲ್ಲಿ ಐಪಿಎಸ್ ಅಧಿಕಾರಿ ವಿಕ್ರಮ್ ಕಪೂರ್ ಆತ್ಮಹತ್ಯೆ

ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಮತ್ತು ಎನ್‌ಐಟಿ ಫರಿದಾಬಾದ್‌ನ ಜಿಲ್ಲಾಧಿಕಾರಿ (ಡಿಸಿಪಿ) ವಿಕ್ರಮ್ ಕಪೂರ್ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

Updated: Aug 14, 2019 , 10:25 AM IST
ಫರಿದಾಬಾದ್‌ನಲ್ಲಿ ಐಪಿಎಸ್ ಅಧಿಕಾರಿ ವಿಕ್ರಮ್ ಕಪೂರ್ ಆತ್ಮಹತ್ಯೆ
Representational Photo

ಫರಿದಾಬಾದ್: ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಮತ್ತು ಎನ್‌ಐಟಿ ಫರಿದಾಬಾದ್‌ನ ಉಪ ಪೊಲೀಸ್ ಆಯುಕ್ತ (ಡಿಸಿಪಿ) ವಿಕ್ರಮ್ ಕಪೂರ್ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಗಳವಾರ ತಡರಾತ್ರಿ ಫರಿದಾಬಾದ್‌ನ ಸೆಕ್ಟರ್ 30 ರ ಪೊಲೀಸ್ ಲೈನ್ಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಕಪೂರ್ ತಮ್ಮ ಸೇವಾ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡಿದ್ದಾರೆ.

ವಿಕ್ರಮ್ ಕಪೂರ್ ಅವರ ಈ ಹೆಜ್ಜೆಯ ಹಿಂದಿನ ನಿಖರ ಕಾರಣಗಳು ಇನ್ನೂ ತಿಳಿದುಬಂದಿಲ್ಲವಾದರೂ, ಕೆಲವು ದಿನಗಳಿಂದ ಐಪಿಎಸ್ ಅಧಿಕಾರಿ ಅಸಮಾಧಾನಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ. ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ತಲುಪಿದ್ದು, ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

58 ವರ್ಷದ ಕುರುಕ್ಷೇತ್ರ ಜಿಲ್ಲೆಯವರಾಗಿದ್ದು, ಕಳೆದ ವರ್ಷ ಐಪಿಎಸ್ ಅಧಿಕಾರಿಯಾಗಿ ಬಡ್ತಿ ಪಡೆದರು. ಅಕ್ಟೋಬರ್ 31, 2020 ರಂದು ಸೇವೆಯಿಂದ ನಿವೃತ್ತರಾಗಬೇಕಿತ್ತು.