IRCTC website : ಭಾರತೀಯ ರೈಲ್ವೆ ವೆಬ್ಸೈಟ್ ತಾಂತ್ರಿಕ ಸಮಸ್ಯೆಯಿಂದಾಗಿ ಜನರು ಟಿಕೆಟ್ ಕಾಯ್ದಿರಿಸಲು ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೆ ಸ್ಕ್ರೀನ್ಶಾಟ್ಗಳನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ದೂರು ನೀಡುತ್ತಿದ್ದಾರೆ. ಇದೀಗ IRCTC ತನ್ನ ಟ್ವಿಟರ್ ಖಾತೆಯ ಮೂಲಕ ತಾಂತ್ರಿಕ ಸಮಸ್ಯೆಯ ಬಗ್ಗೆ ಬಹಿರಂಗಪಡಿಸಿದೆ.
ಟಿಕೆಟ್ ಬುಕಿಂಗ್ ಸೇವೆಗಳು ಪ್ರಸ್ತುತ ವೆಬ್ಸೈಟ್ ಮತ್ತು ಅಪ್ಲಿಕೇಶನ್ನಲ್ಲಿ ಲಭ್ಯವಿಲ್ಲ. ತಮ್ಮ ತಾಂತ್ರಿಕ ತಂಡ ಪರಿಶೀಲನೆ ನಡೆಸುತ್ತಿದೆ... ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇವೆ. ಆ ಬಳಿಕ ಮಾಹಿತಿ ನೀಡಲಾಗುವುದು. ಸಮಸ್ಯೆ ಬಗೆಹರಿಯುವವರೆಗೆ, Amazon ಮತ್ತು MakeMyTrip ನಂತಹ ಆನ್ಲೈನ್ ಅಪ್ಲಿಕೇಶನ್ಗಳ ಮೂಲಕ ಟಿಕೆಟ್ಗಳನ್ನು ಬುಕ್ ಮಾಡಬಹುದು.
ಇದನ್ನೂ ಓದಿ: ಒಂದಲ್ಲ, ಎರಡಲ್ಲ.. 11 ಕ್ಕೂ ಹೆಚ್ಚು ರೋಗಗಳನ್ನು ಬುಡದಿಂದಲೇ ಗುಣಪಡಿಸುತ್ತೆ 300 ವರ್ಷ ಇತಿಹಾಸವುಳ್ಳ ಈ ಮಾವು!
ತತ್ಕಾಲ್ ಟಿಕೆಟ್ ಕಾಯ್ದಿರಿಸುವಾಗ ಸಾಕಷ್ಟು ತೊಂದರೆಯಾಗಿತ್ತು. AC ವರ್ಗಕ್ಕೆ (2A/3A/CC/EC/3E) ತತ್ಕಾಲ್ ಬುಕಿಂಗ್ ಬೆಳಿಗ್ಗೆ 10:00 ಗಂಟೆಗೆ ಲಭ್ಯವಿರುತ್ತದೆ ಮತ್ತು AC ಅಲ್ಲದ ವರ್ಗಕ್ಕೆ (SL/FC/2S) ಬೆಳಿಗ್ಗೆ 11:00 ಗಂಟೆಗೆ ತತ್ಕಾಲ್ ಕೋಟಾ ಬುಕಿಂಗ್ ಲಭ್ಯವಿರುತ್ತದೆ. ಈ ಸಮಯದಲ್ಲಿ IRCTC ತಾಂತ್ರಿಕ ಸಮಸ್ಯೆಯಿಂದಾಗಿ ಅನೇಕ ಜನರು ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗಲಿಲ್ಲ. IRCTC ವ್ಯಾಲೆಟ್ನಲ್ಲಿ ಬ್ಯಾಲೆನ್ಸ್ ಹೊಂದಿರುವವರು ಟಿಕೆಟ್ಗಳನ್ನು ಕಾಯ್ದಿರಿಸಬಹುದು.
ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಸುಲಭಗೊಳಿಸಲು ರೈಲ್ವೇ ಇಲಾಖೆ IRCTC ಅನ್ನು ಲಭ್ಯಗೊಳಿಸಿದೆ. ಪ್ರಯಾಣಿಕರು IRCTC ವೆಬ್ಸೈಟ್ ಅಥವಾ ಆ್ಯಪ್ ಮೂಲಕ ರೈಲು ಬರ್ತ್ಗಳನ್ನು ಮುಂಚಿತವಾಗಿ ಕಾಯ್ದಿರಿಸಬಹುದು. ತಾಂತ್ರಿಕ ಸಮಸ್ಯೆಯಿಂದ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬಳಕೆದಾರರು ದೂರಿದ್ದಾರೆ. ಕೆಲವರು ಹಣ ಪೇ ಆದರೂ ಸಹ ಟಿಕೆಟ್ ಬುಕ್ ಆಗುತ್ತಿಲ್ಲ ಎಂದು ಸ್ಕ್ರೀನ್ ಶಾಟ್ ಹಂಚಿಕೊಳ್ಳುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.