ಒಂದಲ್ಲ, ಎರಡಲ್ಲ.. 11 ಕ್ಕೂ ಹೆಚ್ಚು ರೋಗಗಳನ್ನು ಬುಡದಿಂದಲೇ ಗುಣಪಡಿಸುತ್ತೆ 300 ವರ್ಷ ಇತಿಹಾಸವುಳ್ಳ ಈ ಮಾವು!

Langra mango health benefits: ಈ ಮಾವಿಗೆ ಇಷ್ಟೊಂದು ವಿಚಿತ್ರವಾದ ಹೆಸರು ಏಕೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಈ ಹಣ್ಣು ಕೇವಲ ರುಚಿಯಷ್ಟೇ ಅಲ್ಲ, ಔಷಧೀಯ ಗುಣದಿಂದಲೂ ಪ್ರಸಿದ್ಧಿ ಪಡೆದಿದೆ.

Written by - Bhavishya Shetty | Last Updated : Jul 25, 2023, 09:15 AM IST
    • ಭಾರತದಲ್ಲಿ ಸುಮಾರು 1,500 ವಿಧದ ಮಾವಿನಹಣ್ಣುಗಳನ್ನು ಬೆಳಯಲಾಗುತ್ತದೆ.
    • ಅವುಗಳಲ್ಲಿ ಲಂಗ್ರಾ ಅಥವಾ ಲಂಗ್ಡಾ ಮಾವು ತಳಿಯು ಬಹಳ ಪ್ರಸಿದ್ಧವಾಗಿದೆ.
    • ಈ ಮಾವಿಗೆ ಇಷ್ಟೊಂದು ವಿಚಿತ್ರವಾದ ಹೆಸರು ಏಕೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?
ಒಂದಲ್ಲ, ಎರಡಲ್ಲ.. 11 ಕ್ಕೂ ಹೆಚ್ಚು ರೋಗಗಳನ್ನು ಬುಡದಿಂದಲೇ ಗುಣಪಡಿಸುತ್ತೆ 300 ವರ್ಷ ಇತಿಹಾಸವುಳ್ಳ ಈ ಮಾವು! title=
langra mango

Story Of Langda Aam: ಮಾವು ಹಣ್ಣುಗಳ ರಾಜ ಎಂಬುದು ಎಲ್ಲರಿಗೂ ಗೊತ್ತು. ಭಾರತದಲ್ಲಿ ಸುಮಾರು 1,500 ವಿಧದ ಮಾವಿನಹಣ್ಣುಗಳನ್ನು ಬೆಳಯಲಾಗುತ್ತದೆ. ಅವುಗಳನ್ನು ವಿದೇಶಕ್ಕೂ ರಫ್ತು ಮಾಡಲಾಗುತ್ತದೆ. ಮಾವಿನ ಸೀಸನ್ ನಲ್ಲಿ ನಾವು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಮಾವಿನಹಣ್ಣುಗಳನ್ನು ನೋಡಬಹುದು. ಅವುಗಳಲ್ಲಿ ಲಂಗ್ರಾ ಅಥವಾ ಲಂಗ್ಡಾ ಮಾವು ತಳಿಯು ಬಹಳ ಪ್ರಸಿದ್ಧವಾಗಿದೆ.

ಇದನ್ನೂ ಓದಿ: ಈ ಮೂರು ಸೊಪ್ಪು ತಿಂದರೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್

ಮಾವಿಗೆ ಇಷ್ಟೊಂದು ವಿಚಿತ್ರವಾದ ಹೆಸರು ಏಕೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಈ ಹಣ್ಣು ಕೇವಲ ರುಚಿಯಷ್ಟೇ ಅಲ್ಲ, ಔಷಧೀಯ ಗುಣದಿಂದಲೂ ಪ್ರಸಿದ್ಧಿ ಪಡೆದಿದೆ.

ಲಂಗ್ರಾ ಅಥವಾ ಲಾಂಗ್ಡಾ ಮಾವಿನ ಇತಿಹಾಸವು 300 ವರ್ಷಗಳಷ್ಟು ಹಳೆಯದು. ಉತ್ತರ ಪ್ರದೇಶದ ಬನಾರಸ್ ನಿಂದ ಈ ತಳಿಯ ಮಾವಿನ ಹಣ್ಣಿನ ಉತ್ಪಾದನೆ ಆರಂಭವಾಗಿದೆ ಎಂದು ಹೇಳಲಾಗುತ್ತದೆ. ಹಳೆಯ ಕಥೆಯ ಪ್ರಕಾರ, ಬನಾರಸ್‌ನ ಒಂದು ಸಣ್ಣ ಶಿವನ ದೇವಾಲಯದಲ್ಲಿ ಅರ್ಚಕರು ವಾಸಿಸುತ್ತಿದ್ದರು.

ಒಮ್ಮೆ ಸನ್ಯಾಸಿಯೊಬ್ಬರು ಅಲ್ಲಿಗೆ ಬಂದು ದೇವಾಲಯದ ಆವರಣದಲ್ಲಿ ಮಾವಿನ ಗಿಡಗಳನ್ನು ನೆಟ್ಟು ಅರ್ಚಕರಿಗೆ ಈ ಗಿಡಗಳಿಂದ ಹಣ್ಣುಗಳು ಬಂದಾಗಲೆಲ್ಲಾ ಮೊದಲು ಭೋಲೇನಾಥನಿಗೆ ಅರ್ಪಿಸಿ ನಂತರ ಭಕ್ತರಿಗೆ ಹಂಚಬೇಕು ಎಂದು ಹೇಳಿದರು. ಪೂಜಾರಿಯೂ ಹಾಗೆಯೇ ಮಾಡಿದನು. ಆ ಮರಗಳಿಂದ ಹಣ್ಣುಗಳು ಬಂದಾಗಲೆಲ್ಲಾ ಮೊದಲು ಅವುಗಳನ್ನು ಶಿವನಿಗೆ ಅರ್ಪಿಸಿ ನಂತರ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪ್ರಸಾದವಾಗಿ ಹಂಚುತ್ತಿದ್ದರು.

ಅಷ್ಟೇ ಅಲ್ಲ, ಆ ಹಣ್ಣಿನ ಗೊರಟೆಯಾಗಲಿ, ಗಿಡವನ್ನಾಗಲಿ ಯಾರಿಗೂ ಕೊಡದಂತೆ ಅರ್ಚಕನಿಗೆ ಸನ್ಯಾಸಿ ಷರತ್ತು ಹೇರಿದ್ದ. ಪುರೋಹಿತ ಇದನ್ನೂ ಸಂಪೂರ್ಣವಾಗಿ ನೋಡಿಕೊಂಡು, ಸನ್ಯಾಸಿ ನುಡಿದಂತೆಯೇ ನಡೆದುಕೊಂಡ. ಹೀಗೆ ಕಾಲ ಕಳೆದು ಇಡೀ ಕಾಶಿಯ ಆ ಪುಟ್ಟ ಶಿವನ ದೇವಸ್ಥಾನದ ಮಾವಿನ ಹಣ್ಣಿನ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಹೀಗಿರುವಾಗ ಕಾಶಿ ರಾಜನಿಗೂ ಇದರ ಸುದ್ದಿ ಮುಟ್ಟಿತು. ಹೀಗಾಗಿ ಆ ದೇವಾಲಯಕ್ಕೆ ಬಂದು, ಶಂಕರನ ಪೂಜೆಯ ಬಳಿಕ ಪ್ರಸಾದದ ರೂಪದಲ್ಲಿ ಆ ಮಾವನ್ನು ಸವಿದನು.

ಬಳಿಕ ಅರಮನೆಯ ಉದ್ಯಾನದಲ್ಲಿ ನೆಡಲು ಮಾವಿನ ಮರದ ಒಂದು ತುಂಡುಗಳನ್ನು ನೀಡುವಂತೆ ಮುಖ್ಯ ತೋಟಗಾರನಿಗೆ ರಾಜನು ಒತ್ತಾಯಿಸಿದನು. ಇದಕ್ಕೆ ಪ್ರತಿಕ್ರಿಯಿಸಿದ ಅರ್ಚಕ, “ಮೊದಲು ದೇವರನ್ನು ಪ್ರಾರ್ಥಿಸಿ ಅವರ ಸೂಚನೆ ಪಡೆದ ನಂತರವೇ ಅರಮನೆಗೆ ಬಂದು ಮಾವಿನ ಗಿಡವನ್ನು ಕೊಡುತ್ತೇನೆ” ಎಂದು ಹೇಳಿದ. ರಾತ್ರಿ ಪುರೋಹಿತರ ಕನಸಿನಲ್ಲಿ ಬಂದ ಭೋಲೆನಾಥನು ಮಾವಿನ ಸಣ್ಣ ಗಿಡವನ್ನು ರಾಜನಿಗೆ ನೀಡುವ ಕುರಿತು ಹೇಳಿದರು.

ಮರುದಿನ ಪುರೋಹಿತರು ಅರಮನೆಗೆ ಹೋಗಿ ರಾಜನಿಗೆ ಆ ಮಾವಿನ ಗಿಡವನ್ನು ನೀಡಿದನು. ಕೆಲವೇ ವರ್ಷಗಳಲ್ಲಿ, ಈ ಮಾವಿನ ಬೆಳೆ ಬನಾರಸ್ ಹೊರಗೆ ಪ್ರಚಾರ ಪಡೆಯಲು ಪ್ರಾರಂಭಿಸಿತು. ಅದರ ರುಚಿಯಿಂದಾಗಿ, ಇಂದು ಇದನ್ನು ದೇಶದ ಅತ್ಯಂತ ಜನಪ್ರಿಯ ಮಾವಿನಹಣ್ಣು ಎಂದು ಪರಿಗಣಿಸಲಾಗಿದೆ.

ಇನ್ನು ಈ ಮಾವಿಗೆ ಲಾಂಗ್ರಾ, ಲಾಂಗ್ಡಾ ಎಂಬ ಹೆಸರನ್ನು ಇಡಲು ಕಾರಣವನ್ನು ತಿಳಿಯೋಣ. ಹಿಂದೆ ಶಿವ ದೇವಾಲಯದ ಆವರಣದಲ್ಲಿ ಮಾವಿನ ಗಿಡಗಳನ್ನು ನೆಟ್ಟ ಸಾಧು ದಿವ್ಯಾಂಗ ಎಂದು ಕಥೆಯಲ್ಲಿ ಹೇಳಲಾಗುತ್ತದೆ. ಜನರು ಅವರನ್ನು 'ಲಂಗ್ಡಾ ಸಾಧು' ಎಂಬ ಹೆಸರಿನಿಂದ ಕರೆಯುತ್ತಿದ್ದರು. ಹೀಗಾಗಿ ಆ ಮರಗಳಿಂದ ಸಿಗುವ ಹಣ್ಣುಗಳಿಗೆ ಲಾಂಗ್ಡಾ ಮಾವು ಎಂದು ಹೆಸರಾಯಿತು. ಈ ತಳಿಯ ಮಾವನ್ನು 'ಬನಾರಸಿ ಲಾಂಗ್ಡಾ ಮಾವು' ಎಂದೂ ಸಹ ಕರೆಯಲ್ಪಡುತ್ತದೆ.

ಇದನ್ನೂ ಓದಿ: ಈ ಒಂದು ಬೀಜವನ್ನು ಸೇವಿಸಿದರೆ ಸಾಕು ತಿಂಗಳೊಳಗೆ ಕರಗುವುದು ಹೊಟ್ಟೆ ಭಾಗದ ಕೊಬ್ಬು

ಇನ್ನು ಈ ಮಾವು ರುಚಿಯಷ್ಟೆ ಅಲ್ಲ, ಹೃದ್ರೋಗ, ಕ್ಯಾನ್ಸರ್. ಬುದ್ಧಿಮಾಂದ್ಯತೆಯ ಅಪಾಯ. ಮಧುಮೇಹ. ಹಲ್ಲಿನ ಸಮಸ್ಯೆ, ಅಜೀರ್ಣ ಸಮಸ್ಯೆ ಸೇರಿದಂತೆ 11 ಕ್ಕೂ ಹೆಚ್ಚು ರೋಗಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಇದರಲ್ಲಿ ದೇಹಕ್ಕೆ ಅಗತ್ಯವಿರುವ ಎಲ್ಲಾ ಜೀವಸತ್ವಗಳು ಮತ್ತು ಖನಿಜಗಳು ಇವೆ ಎಂದು ವೈದ್ಯಲೋಕ ಹೇಳುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News