ಇನ್ಮುಂದೆ ವಿಮಾ ಕಂಪನಿಗಳು ಇ-ಪಾಲಸಿ ಜಾರಿಗೊಳಿಸಬಹುದಾಗಿದೆ, IRDAI ಅನುಮತಿ

ಈ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸಿರುವ ಭಾರತೀಯ ವಿಮಾ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI), ಜೀವ ವಿಮಾ ಕಂಪನಿಗಳು ಪಾಲಸಿಯ ದಸ್ತಾವೇಜುಗಳನ್ನು ಪಾಲಸಿಧಾರಕರಿಗೆ ಜಾರಿಗೊಳಿಸುವ ನಿಯಮದಿಂದ ನೆಮ್ಮದಿ ನೀಡಿದೆ.  ಆದರೆ ಷರತ್ತುಬದ್ಧವಾಗಿ ಈ ಸಡಿಲಿಕೆ ನೀಡಲಾಗಿದೆ.

Last Updated : Aug 5, 2020, 11:06 AM IST
ಇನ್ಮುಂದೆ ವಿಮಾ ಕಂಪನಿಗಳು ಇ-ಪಾಲಸಿ ಜಾರಿಗೊಳಿಸಬಹುದಾಗಿದೆ, IRDAI ಅನುಮತಿ  title=

ನವದೆಹಲಿ: ಹೆಚ್ಚುತ್ತಿರುವ ಕರೋನಾ ವೈರಸ್ ಪ್ರಕರಣಗಳು ಮತ್ತು ಸಾಮಾನ್ಯ ವ್ಯವಹಾರ ಚಟುವಟಿಕೆಗಳಲ್ಲಿ ಎದುರಾಗುವ ಸಮಸ್ಯೆಗಳ ದೃಷ್ಟಿಯಿಂದ, ವಿಮಾ ನಿಯಂತ್ರಕ ಐಆರ್ಡಿಎ ಅಗತ್ಯ ಕ್ರಮ ಕೈಗೊಂಡಿದೆ. ಜೀವ ವಿಮಾ ಕಂಪನಿಗಳಿಗೆ ಇಲೆಕ್ಟ್ರಾನಿಕ್ ವಿಮಾ ಪಾಲಿಸಿಯನ್ನು ನೀಡಲು ನಿಯಂತ್ರಕವು ಅನುಮತಿಸಿದೆ, ಅಂದರೆ ಇ-ಪಾಲಿಸಿಯನ್ನು ನೀಡಲು ಪ್ರಾಧಿಕಾರ ಅನುಮತಿ ನೀಡಿದೆ.

ಈ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸಿರುವ ಭಾರತೀಯ ವಿಮಾ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI), ಜೀವ ವಿಮಾ ಕಂಪನಿಗಳು ಪಾಲಸಿಯ ದಸ್ತಾವೇಜುಗಳನ್ನು ಪಾಲಸಿಧಾರಕರಿಗೆ ಜಾರಿಗೊಳಿಸುವ ನಿಯಮದಿಂದ ನೆಮ್ಮದಿ ನೀಡಿದೆ.  ಆದರೆ ಷರತ್ತುಬದ್ಧವಾಗಿ ಈ ಸಡಿಲಿಕೆ ನೀಡಲಾಗಿದೆ.

ಈ ವಿನಾಯಿತಿ 2020-21ರ ಅವಧಿಯಲ್ಲಿ ನೀಡಲಾಗುವ ಎಲ್ಲಾ ವಿಮಾ ಪಾಲಿಸಿಗಳಿಗೆ ಮಾನ್ಯವಾಗಿರಲಿದೆ ಎಂದು ಐಆರ್ಡಿಎ ತಿಳಿಸಿದೆ. ವಿವಿಧ ವಿಮಾ ಕಂಪನಿಗಳ ಗ್ರಾಹಕರಿಗೆ ಪಾಲಿಸಿಗಳನ್ನು ಕಳುಹಿಸುವುದರಿಂದ ಎದುರಾಗುವ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ಇರ್ಡಾ ಈ ನಿರ್ಧಾರ ಕೈಗೊಂಡಿದೆ.

ಇ-ಪಾಲಿಸಿಯನ್ನು ವಿಕ್ಷೀಸಲು ಮತ್ತು ಅರ್ಥಮಾಡಿಕೊಳ್ಳಲು ಕಂಪನಿಗಳು ಗ್ರಾಹಕರಿಗೆ 30 ದಿನಗಳನ್ನು ಕಾಲಾವಕಾಶ ನೀಡಬೇಕಾಗಲಿದೆ. ಅಲ್ಲದೆ, ಇ-ಪಾಲಿಸಿ ತೆಗೆದುಕೊಳ್ಳಲು ಗ್ರಾಹಕರಿಂದ ಒಪ್ಪಿಗೆ ಪಡೆಯಬೇಕು. ಗ್ರಾಹಕರು ಒಂದು ವೇಳೆ ಪೇಪರ್ ಕಾಪಿ ಅಥವಾ ಡಾಕ್ಯುಮೆಂಟ್ ಅನ್ನು ನೀಡಲು ಒತ್ತಾಯಿಸಿದ್ದಾರೆ ಕಂಪನಿಗಳು ಕಂಪನಿಗಳು ಗ್ರಾಹಕರ ಮನವಿಯನ್ನು ನಿರಾಕರಿಸುವಂತಿಲ್ಲ.  ಏತನ್ಮಧ್ಯೆ, ಪ್ರತಿ ತ್ರೈಮಾಸಿಕದಲ್ಲಿ ವಿದ್ಯುನ್ಮಾನವಾಗಿ ಹೂಡಿಕೆ ಆದಾಯವನ್ನು ಕಳುಹಿಸಲು ಜೀವ ವಿಮಾ ಕಂಪನಿಗಳಿಗೆ ನಿಯಂತ್ರಕ ಅವಕಾಶ ನೀಡಿದೆ.

Trending News