Bombay HC - ಕೌಟುಂಬಿಕ ವಿವಾದ (Family Dispute Case) ಪ್ರಕರಣವೊಂದರ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್ ಮಹತ್ವದ ಟಿಪ್ಪಣಿಯೊಂದನ್ನು ಮಾಡಿದೆ. ಪತಿ-ಪತ್ನಿ ಪರಸ್ಪರರ ಮೇಲೆ ಮಾಡಿರುವ ಆರೋಪಗಳ ಪಟ್ಟಿ ನೋಡಿದರೆ, 'ಮದುವೆ ಅನ್ನೋದು ಸ್ವರ್ಗದಲಲ್ಲ (Marriages Are Made In Heaven), ನರಕದಲ್ಲಿ (Marriages Are Made Hell) ನಿಶ್ಚಿತವಾಗುತ್ತವೆ ಎಂಬಂತೆ ತೋರುತ್ತಿದೆ' ಎಂದು ಕೋರ್ಟ್ ಹೇಳಿದೆ. ಈ ಪ್ರಕರಣದಲ್ಲಿ ಆರೋಪಿ ಪತಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನೂ ನ್ಯಾಯಾಲಯ ಅಂಗೀಕರಿಸಿದೆ.
ಏನಿದು ಪ್ರಕರಣ
ಮಹಿಳೆ ಡಿಸೆಂಬರ್ 2021 ರಲ್ಲಿ ತನ್ನ ಪತಿ ಮತ್ತು ಅತ್ತೆಯ ವಿರುದ್ಧ ಕೌಟುಂಬಿಕ ದೌರ್ಜನ್ಯ, ಕಿರುಕುಳ ಮತ್ತು ವರದಕ್ಷಿಣೆ ಪ್ರಕರಣವನ್ನು ದಾಖಲಿಸಿದ್ದರು. ಮದುವೆಯ ಸಂದರ್ಭದಲ್ಲಿ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೂ ಚಿನ್ನದ ನಾಣ್ಯಕ್ಕೆ ಬೇಡಿಕೆ ಇಡಲಾಗಿತ್ತು ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳೆಯ ಕುಟುಂಬವು ಈ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗಲಿಲ್ಲ ಮತ್ತು ಆದ್ದರಿಂದ ಅವಳಿಗೆ ಚಿತ್ರಹಿಂಸೆ ನೀಡಲಾಯಿತು. ಮನೆ ಖರೀದಿಗೆ ಪತಿಗೆ 13,50,000 ರೂ.ಗಳನ್ನು ನೀಡಿರುವುದಾಗಿ ಮಹಿಳೆ ತಿಳಿಸಿದ್ದಾರೆ.
ದುಬಾರಿ ಫೋನ್ ಉಡುಗೊರೆಯಾಗಿ ನೀಡಿರುವುದಾಗಿ ಹೇಳಿದ ಪತಿ
ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ಪತಿಯ ಪರವಾಗಿಯೂ ಅನೇಕ ಆರೋಪಗಳನ್ನು ಮಾಡಲಾಗಿದೆ. ಮನೆ ಖರೀದಿಸಲು ಸಾಲ ಮಾಡಿದ್ದು, ಮದುವೆಯಾದ ಬಳಿಕ ಪತ್ನಿಗೆ ದುಬಾರಿ ಬೆಲೆಯ ಸೆಲ್ ಫೋನ್ ಉಡುಗೊರೆಯಾಗಿ ನೀಡಿದ್ದಾಗಿಯೂ ಪತಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮದುವೆಯ ನಂತರ ಪತ್ನಿಯನ್ನು ಮಾರಿಷಸ್‌ಗೆ ಸುತ್ತಾಡಲು ಕರೆದುಕೊಂಡು ಹೋಗಿದ್ದ ಎಂದೂ ಪತಿ ಹೇಳಿದ್ದಾನೆ.
ಇದನ್ನೂ ಓದಿ-Retirement ವಯಸ್ಸಿನಲ್ಲಿ ಹೆಚ್ಚಳ, Pension ಮೊತ್ತದಲ್ಲೂ ಹೆಚ್ಚಳ! ಇಲ್ಲಿದೆ ಸರ್ಕಾರದ ಹೊಸ ಪ್ಲಾನ್
ಎರಡೂ ಕಡೆಯ ಆರೋಪಗಳನ್ನು ಆಲಿಸಿದ ನಂತರ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ
ಎರಡೂ ಕಡೆಯ ಆರೋಪಗಳು ಮತ್ತು ವಾದಗಳನ್ನು ಆಲಿಸಿದ ನಂತರ, ನ್ಯಾಯಮೂರ್ತಿ ಸಾರಂಗ್ ಕೊತ್ವಾಲ್, ಈ ಇಬ್ಬರೂ ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ಪತಿಯನ್ನು ಕಸ್ಟಡಿಗೆ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದೂ ಅವರು ಹೇಳಿದ್ದಾರೆ. ಎರಡೂ ಕಡೆಯ ಆರೋಪಗಳ ಪಟ್ಟಿ ನೋಡಿದ ನ್ಯಾಯಮೂರ್ತಿ ಕೊತ್ವಾಲ್ ‘ಜೋಡಿಗಳು ಸ್ವರ್ಗದಲ್ಲಿ ನಿರ್ಮಾಣವಾಗುವುದಿಲ್ಲ, ನರಕದಲ್ಲಿ ಸೃಷ್ಟಿಯಾಗುತ್ತವೆ’ ಎಂಬಂತೆ ತೋರುತ್ತದೆ ಎಂದಿದ್ದಾರೆ. ಆರೋಪಿ ಪತಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.
ಇದನ್ನೂ ಓದಿ-Digital ID: ಇನ್ಮುಂದೆ ಪ್ರತಿಯೊಬ್ಬ ನಾಗರಿಗರ ಬಳಿಯೂ ಇರಲಿದೆ ಸಿಂಗಲ್ Digital ID, ಇಲ್ಲಿದೆ ವಿವರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.