ಜಮ್ಮು-ಕಾಶ್ಮೀರ: ಉಗ್ರರು ಮತ್ತು ಭದ್ರತಾ ಪಡೆ ನಡುವೆ ಎನ್‌ಕೌಂಟರ್‌

ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಮೂವರು ಸಿಆರ್ ಪಿಎಫ್ ಯೋಧರು ಹುತಾತ್ಮರಾದ ಬಳಿಕ ಸಿಆರ್ ಪಿಎಫ್ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿದೆ.

Last Updated : Mar 5, 2019, 08:59 AM IST
ಜಮ್ಮು-ಕಾಶ್ಮೀರ: ಉಗ್ರರು ಮತ್ತು ಭದ್ರತಾ ಪಡೆ ನಡುವೆ ಎನ್‌ಕೌಂಟರ್‌ title=
File Image

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಾಂಡದಲ್ಲಿ, ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಮೂವರು ಸಿಆರ್ ಪಿಎಫ್ ಯೋಧರು ಹುತಾತ್ಮರಾದ ಬಳಿಕ ಸಿಆರ್ ಪಿಎಫ್ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಸ್ಥಳದಲ್ಲಿ 2 ರಿಂದ 3 ಭಯೋತ್ಪಾದಕರು ಅಡಗಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಭಯೋತ್ಪಾದಕರು ಹಿಜ್ಬುಲ್ ಮುಜಾಹಿದೀನ್ಗೆ ಸೇರಿದ್ದಾರೆ ಎಂದು ನಂಬಲಾಗಿದೆ. 

ಕುಪ್ವಾರ ಸುತ್ತಮುತ್ತ ಎರಡರಿಂದ ಮೂರು ಭಯೋತ್ಪಾದಕರು ಅಡಗಿರುವ ಮಾಹಿತಿ ಪಡೆದ ಸೈನ್ಯವು ಪ್ರದೇಶವನ್ನು ಸುತ್ತುವರಿದಿದೆ. ಈ ಸಮಯದಲ್ಲಿ ಉಗ್ರರು ಸೈನ್ಯದ ಮೇಲೆ ಗುಂಡಿನ ದಾಳಿ ನಡೆಸಿದೆ. ಪ್ರತಿಯಾಗಿ ಸೈನ್ಯವೂ ನಡೆಸಿದ್ದು, ಸೈನ್ಯ ಮತ್ತು ಭಯೋತ್ಪಾದಕರ ನಡುವೆ ಎನ್‌ಕೌಂಟರ್‌ ಮುಂದುವರೆದಿದೆ. 

Trending News