National Herald Case : ED ಮುಂದೆ ಹಾಜರಾಗಲು ಸಮಯಾವಕಾಶ ಕೋರಿದ ರಾಹುಲ್ ಗಾಂಧಿ!

ರಾಹುಲ್ ಗಾಂಧಿ ಪ್ರಸ್ತುತ ವಿದೇಶ ಪ್ರವಾಸದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ರಾಹುಲ್ ಇಡಿ ಮುಂದೆ ಹಾಜರಾಗಲು ಸಮಯಾವಕಾಶ ಕೋರಿದ್ದಾರೆ. ಜೂನ್ 5 ರಂದು ದೇಶಕ್ಕೆ ಆಗಮಿಸುವ ಸಾಧ್ಯತೆಯಿದೆ.

Written by - Channabasava A Kashinakunti | Last Updated : Jun 2, 2022, 11:16 AM IST
  • ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ
  • ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್
  • ಪ್ರಸ್ತುತ ವಿದೇಶ ಪ್ರವಾಸದಲ್ಲಿದ್ದಾರೆ ರಾಹುಲ್ ಗಾಂಧಿ
National Herald Case : ED ಮುಂದೆ ಹಾಜರಾಗಲು ಸಮಯಾವಕಾಶ ಕೋರಿದ ರಾಹುಲ್ ಗಾಂಧಿ! title=

ನವದೆಹಲಿ : ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ ನಂತರ, ರಾಹುಲ್ ಗಾಂಧಿ ಪ್ರಸ್ತುತ ವಿದೇಶ ಪ್ರವಾಸದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ರಾಹುಲ್ ಇಡಿ ಮುಂದೆ ಹಾಜರಾಗಲು ಸಮಯಾವಕಾಶ ಕೋರಿದ್ದಾರೆ. ಜೂನ್ 5 ರಂದು ದೇಶಕ್ಕೆ ಆಗಮಿಸುವ ಸಾಧ್ಯತೆಯಿದೆ.

ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ, ಅನಾಮಧೇಯತೆಯ ಷರತ್ತಿನ ಮೇಲೆ, "ರಾಹುಲ್ ಗಾಂಧಿ ಅವರು ಮೇ 20 ರಿಂದ ಮೇ 23 ರವರೆಗೆ ಲಂಡನ್‌ನಲ್ಲಿ ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮೇ 19 ರಂದು ಭಾರತದಿಂದ ಹೋಗಿದ್ದಾರೆ. ಅಂದು ಹೋದವರು ಇನ್ನೂವರೆಗೂ ಸ್ವದೇಶಕ್ಕೆ ಹಿಂತಿರುಗಿಲ್ಲ."

ಇದನ್ನೂ ಓದಿ : ನ್ಯಾಷನಲ್ ಹೆರಾಲ್ಡ್ ಕೇಸ್‌: ಸೋನಿಯಾ-ರಾಹುಲ್ ಗಾಂಧಿಗೆ ಇಡಿಯಿಂದ ಸಮನ್ಸ್ ಜಾರಿ

"ರಾಹುಲ್ ಗಾಂಧಿ ಜೂನ್ 5 ರೊಳಗೆ ಭಾರತಕ್ಕೆ ಮರಳುವ ನಿರೀಕ್ಷೆಯಿದೆ, ಹೀಗಾಗಿ ಇಡಿ ಬಳಿ ಮತ್ತೊಂದು ದಿನಾಂಕ ನಿಗದಿಗೆ ಸಮಯಾವಕಾಶ ಕೇಳಿದ್ದಾರೆ" ಎಂದು ಮೂಲಗಳು ತಿಳಿಸಿವೆ.

ಸೋನಿಯಾ ಗಾಂಧಿ ಅವರನ್ನು ಜೂನ್ 8 ರಂದು ಇಡಿ ಅಧಿಕೃತ ನೋಟಿಸ್‌ನಲ್ಲಿ ಇಡಿ ಮುಂದೆ ಹಾಜರಾಗುವಂತೆ ತಿಳಿಸಿದೆ, ಆದರೆ ವಿದೇಶಿ ಪ್ರವಾಸದಲ್ಲಿರುವ ರಾಹುಲ್ ಗೆ ಜೂನ್ 2 ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿತ್ತು. ಆದರೆ ರಾಹುಲ್ ಜೂನ್ 5 ರ ನಂತರ ಹಾಜರಾಗುತ್ತೇನೆ ಎಂದು ಸಮಯಾವಕಾಶ ಕೇಳಿದ್ದಾರೆ. 

 ಈ ಕುರಿತು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ, ಬ್ರಿಟಿಷರು ಮತ್ತು ಅವರ ದೌರ್ಜನ್ಯಕ್ಕೆ ಹೆದರದ ಕಾಂಗ್ರೆಸ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಧೈರ್ಯವನ್ನು ಇಡಿ ನೋಟಿಸ್ ಹೇಗೆ ಹೆದುರುತ್ತದೆ, ನಾವು ಹೋರಾಟ ಮಾಡುತ್ತವೆ. ನಾವು ಗೆಲ್ಲುತ್ತೇವೆ. ನಾವು ತಲೆಬಾಗುವುದಿಲ್ಲ ಎಂದು ಬರೆದುಕೊಂಡಿದೆ.

ಇದನ್ನೂ ಓದಿ : ಬಿಹಾರದಲ್ಲಿ ಜಾತಿ ಆಧಾರಿತ ಎಣಿಕೆಗೆ ಚಾಲನೆ ನೀಡಲು ಮುಂದಾದ ನಿತೀಶ್ ಕುಮಾರ್

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News