ಲಿಂಗ ಸಮಾನತೆ ಹೋರಾಟದಲ್ಲಿ ಮಹಿಳೆಯರಷ್ಟೇ ಪುರುಷರದ್ದೂ ಪ್ರಮುಖ ಪಾತ್ರವಿದೆ- ಜಸ್ಟೀಸ್ ಚಂದ್ರಚೂಡ್

ಜಗತ್ತಿನಲ್ಲಿ ಪ್ರಜಾಪ್ರಭುತ್ವದ ಮೌಲ್ಯವು ಕುಸಿದಿರುವಾಗ ಕಾನೂನು ಮತ್ತು ಸಂವಿಧಾನವನ್ನು ಕಾಪಾಡಿಕೊಳ್ಳುವುದು ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಅಗತ್ಯವಿರುತ್ತದೆ ಎಂದು ನ್ಯಾಯಮೂರ್ತಿ ಎ.ಕೆ. ಸಿಕ್ರಿ ಹೇಳಿದರು.

Last Updated : Jan 28, 2019, 10:32 AM IST
ಲಿಂಗ ಸಮಾನತೆ ಹೋರಾಟದಲ್ಲಿ ಮಹಿಳೆಯರಷ್ಟೇ ಪುರುಷರದ್ದೂ ಪ್ರಮುಖ ಪಾತ್ರವಿದೆ- ಜಸ್ಟೀಸ್ ಚಂದ್ರಚೂಡ್ title=

ಗಾಂಧಿನಗರ: ಲಿಂಗ ಸಮಾನತೆಯ ಹೋರಾಟದಲ್ಲಿ ಪುರುಷರೂ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶ ಡಿ.ವಿ. ಚಂದ್ರಚೂಡ್ ಭಾನುವಾರ ಹೇಳಿದ್ದಾರೆ. ಲಿಂಗ ಸಮಾನತೆ ಬಗ್ಗೆ ಒತ್ತು ನೀಡಿದ ಅವರು ಶಬರಿಮಲೆ ದೇವಸ್ಥಾನದಲ್ಲಿ ಎಲ್ಲಾ ವಯಸ್ಸಿನ ಮಹಿಳೆಯರನ್ನೂ ಅನುಮತಿಸುವ ಐವರು ನ್ಯಾಯಾಧೀಶರ ಪೀಠದಲ್ಲಿ ಒಬ್ಬರಾಗಿದ್ದ ಜಸ್ಟಿಸ್ ಚಂದ್ರಚೂಡ್ ಮಹಿಳೆಯರೊಂದಿಗಿನ ಹಿಂಸಾಚಾರ ಮತ್ತು ತಾರತಮ್ಯದ ಸಮಸ್ಯೆಗಳು ಅವರ ಹಕ್ಕುಗಳು ಮತ್ತು ಸಮಸ್ಯೆಗಳ ಬಗ್ಗೆ ಅವರ ಅಸಂವೇದನೆ ಹೆಚ್ಚಿಸುತ್ತವೆ ಎಂದಿದ್ದಾರೆ.

ಗುಜರಾತ್ ನ್ಯಾಶನಲ್ ಲಾ ಯುನಿವರ್ಸಿಟಿಯ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, "ಲಿಂಗ ಸಮಾನತೆಗಾಗಿ ಮಹಿಳೆಯರು ಮಾತ್ರ ಹೋರಾಡಬಾರದು, ಇದರಲ್ಲಿ ಪುರುಷರು ಪ್ರಮುಖ ಪತ್ರ ವಹಿಸಬೇಕು" ಎಂದು ಹೇಳಿದರು. 

ಬಳಿಕ ಮಾತನಾಡಿದ ಸುಪ್ರೀಂಕೋರ್ಟ್ ನ ಇನ್ನೋರ್ವ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಜಗತ್ತಿನಲ್ಲಿ ಪ್ರಜಾಪ್ರಭುತ್ವದ ಮೌಲ್ಯವು ಕುಸಿದಿರುವಾಗ ಕಾನೂನು ಮತ್ತು ಸಂವಿಧಾನವನ್ನು ಕಾಪಾಡಿಕೊಳ್ಳುವುದು ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಅಗತ್ಯವಿರುತ್ತದೆ ಎಂದು ಹೇಳಿದರು.
 

Trending News