49 ಗಣ್ಯರ ವಿರುದ್ಧ ಎಫ್ಐಆರ್ : ಸುಪ್ರೀಂ ಮಧ್ಯಸ್ಥಿಕೆಗೆ ಕಮಲ್ ಹಾಸನ್ ಮನವಿ

ಪ್ರಧಾನಿ ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರ ಬರೆದ 49 ಗಣ್ಯ ವ್ಯಕ್ತಿಗಳ ವಿರುದ್ಧ ದಾಖಲಾದ ಎಫ್‌ಐಆರ್ ವಿಷಯದಲ್ಲಿ ದಕ್ಷಿಣ ನಟ-ರಾಜಕಾರಣಿ ಕಮಲ್ ಹಾಸನ್ ಸುಪ್ರೀಂ ಕೋರ್ಟ್‌ನ ಹಸ್ತಕ್ಷೇಪವನ್ನು ಕೋರಿದ್ದಾರೆ.

Last Updated : Oct 8, 2019, 05:40 PM IST
49 ಗಣ್ಯರ ವಿರುದ್ಧ ಎಫ್ಐಆರ್ : ಸುಪ್ರೀಂ ಮಧ್ಯಸ್ಥಿಕೆಗೆ ಕಮಲ್ ಹಾಸನ್ ಮನವಿ title=
file photo

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರ ಬರೆದ 49 ಗಣ್ಯ ವ್ಯಕ್ತಿಗಳ ವಿರುದ್ಧ ದಾಖಲಾದ ಎಫ್‌ಐಆರ್ ವಿಷಯದಲ್ಲಿ ದಕ್ಷಿಣ ನಟ-ರಾಜಕಾರಣಿ ಕಮಲ್ ಹಾಸನ್ ಸುಪ್ರೀಂ ಕೋರ್ಟ್‌ನ ಹಸ್ತಕ್ಷೇಪವನ್ನು ಕೋರಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಮಲ್ ಹಾಸನ್ ' ಪ್ರಧಾನಿ ಮೋದಿ ಸಾಮರಸ್ಯದ ಭಾರತವನ್ನು ಬಯಸುತ್ತಾರೆ. ಸಂಸತ್ತಿನಲ್ಲಿನ ಅವರ ಹೇಳಿಕೆಗಳು ಇದನ್ನು ಧೃಡಿಕರಿಸುತ್ತವೆ. ರಾಜ್ಯ ಮತ್ತು ಅದರ ಕಾನೂನು  ಲಿಖಿತವಾಗಿ ಅನುಸರಿಸಬೇಕಲ್ಲವೇ? ನನ್ನ ಗೆಳೆಯರಲ್ಲಿ 49 ಮಂದಿ ದೇಶದ್ರೋಹ, ಪ್ರಧಾನ ಮಂತ್ರಿಯ ಆಕಾಂಕ್ಷೆಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಲಾಗಿದೆ' ಎಂದು ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ.

ಇನ್ನು ಮುಂದುವರೆದು ಗಣ್ಯರ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಧ್ಯಸ್ಥಿಕೆ ವಹಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.' ಪ್ರಜಾಪ್ರಭುತ್ವದೊಂದಿಗೆ ನ್ಯಾಯವನ್ನು ಎತ್ತಿಹಿಡಿಯಲು ಮತ್ತು ಬಿಹಾರದಿಂದ ಹೊರಹೊಮ್ಮುವ ಪ್ರಕರಣವನ್ನು ರದ್ದುಗೊಳಿಸಲು  ಸುಪ್ರೀಂಕೋರ್ಟ್ ಮುಂದಾಗಬೇಕೆಂದು ಒಬ್ಬ ಸಾಮಾನ್ಯ ನಾಗರಿಕನಾಗಿ ವಿನಂತಿಸುತ್ತೇನೆ" ಎಂದು ಅವರು ಹೇಳಿದ್ದಾರೆ.

ಜುಲೈ ತಿಂಗಳಲ್ಲಿ  ಇತಿಹಾಸಕಾರ ರಾಮಚಂದ್ರ ಗುಹಾ ಮತ್ತು ಚಲನಚಿತ್ರ ನಿರ್ಮಾಪಕರಾದ ಅಪರ್ಣಾ ಸೇನ್ ಮತ್ತು ಮಣಿರತ್ನಂ ಸೇರಿದಂತೆ 49 ಬುದ್ಧಿಜೀವಿಗಳು, ಕಲಾವಿದರು ಮತ್ತು ಗಣ್ಯರು ಪ್ರಧಾನಿ ಮೋದಿಗೆ ಪತ್ರ ಬರೆದು, ದೇಶದಲ್ಲಿ ಹೆಚ್ಚುತ್ತಿರುವ ಜನಸಮೂಹ ಹತ್ಯೆ ಮತ್ತು ಜೈ ಶ್ರೀ ರಾಮ್ ಘೋಷಣೆಯ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಅಲ್ಲದೆ ಮುಸ್ಲಿಮರು, ದಲಿತರು ಮತ್ತು ಇತರ ಅಲ್ಪಸಂಖ್ಯಾತರ ಗುಂಪನ್ನು ಕೊಲ್ಲುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು, ಭಿನ್ನಾಭಿಪ್ರಾಯವಿಲ್ಲದೆ ಯಾವುದೇ ಪ್ರಜಾಪ್ರಭುತ್ವವಿಲ್ಲ ಎಂದು ಈ ಪತ್ರದಲ್ಲಿ ಒತ್ತಿ ಹೇಳಿದ್ದರು.

ಆ ಪತ್ರದಲ್ಲಿ ಸಹಿ ಮಾಡಿರುವ  49 ಗಣ್ಯರವಿರುದ್ಧ ಕಳೆದ ವಾರ ಬಿಹಾರದ ಮುಜಾಫರ್ಪುರ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಿಹಾರ ಪೊಲೀಸರ ಪ್ರಕಾರ, ದೇಶದ್ರೋಹಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಅವರ ಮೇಲೆ ಆರೋಪ ಹೊರಿಸಲಾಗಿದೆ.

Trending News