ನವದೆಹಲಿ: ರೈತರ ಪ್ರತಿಭಟನೆಯಿಂದಾಗಿ ಪಂಜಾಬ್ನಲ್ಲಿ ರೈಲುಗಳ ಸಂಚಾರಕ್ಕೆ ತೀವ್ರ ಅಡೆತಡೆ ಉಂಟಾಗಿದೆ. ಪಂಜಾಬ್ನ 32 ಸ್ಥಳಗಳಲ್ಲಿ ರೈತರು (Farmers) ರೈಲ್ವೆ ನಿಲ್ದಾಣಗಳು ಮತ್ತು ರೈಲ್ವೆ ಹಳಿಗಳ ಮೇಲೆ ಕುಳಿತು ಆಂದೋಲನ ನಡೆಸುತ್ತಿದ್ದಾರೆ, ಇದರಿಂದಾಗಿ ಸುಮಾರು 1 ತಿಂಗಳಿಗಿಂತ ಹೆಚ್ಚು ಸಮಯ ರೈಲು ಸಂಚಾರ ಅಸ್ತವ್ಯಸ್ತವಾಗಿದೆ.
ಅತ್ಯಂತ ಆತಂಕಕಾರಿ ಸಂಗತಿಯೆಂದರೆ ಕಿಸಾನ್ ಆಂದೋಲನ (Kisan Andolan) ಮುಂದುವರೆದಿದ್ದು ಇದು ಮುಂದಿನ ದಿನಗಳಲ್ಲಿ ವಿದ್ಯುತ್ ಸ್ಥಾವರ ಮೇಲೆ ಪರಿಣಾಮ ಬೀರಬಹುದು ಮತ್ತು ಈ ಕಾರಣದಿಂದಾಗಿ ಪಂಜಾಬ್ನಲ್ಲಿ ಭಾರಿ ವಿದ್ಯುತ್ ಕೊರತೆ ಉಂಟಾಗಬಹುದು ಎಂದು ಹೇಳಲಾಗುತ್ತಿದೆ.
ಇನ್ಮುಂದೆ ರೈತರಿಗೆ ಸುಲಭವಾಗಿ ಸಿಗಲಿದೆ ಅಗ್ಗದ ಸಾಲ, 1.5 ಕೋಟಿ ರೈತರಿಗೆ ಲಾಭ
ಅಂತೆಯೇ ರಾಜಸ್ಥಾನದಲ್ಲಿ ಗುರ್ಜರ್ ಆಂದೋಲನದಿಂದಾಗಿ ಕೂಡ ರೈಲು ಸಂಚಾರದ ಮೇಲೆ ತೀವ್ರವಾಗಿ ಪರಿಣಾಮ ಬೀರಿದೆ. ಹೆಚ್ಚಿನ ರೈಲುಗಳ ಮಾರ್ಗಬದಲಿಸಲಾಗಿದ್ದು ಹಲವು ರೈಲುಗಳನ್ನು ರದ್ದುಗೊಳಿಸಲಾಗುತ್ತಿದೆ.
ದಯವಿಟ್ಟು ರೈಲಿನ ಮಾಹಿತಿಯನ್ನು ದೃಢೀಕರಿಸಿ :-
ಕಿಸಾನ್ ಆಂದೋಲನದಿಂದಾಗಿ ಪಂಜಾಬ್ ಮತ್ತು ರಾಜಸ್ಥಾನದಲ್ಲಿ ರೈಲು ಸಂಚಾರದ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ರೈಲ್ವೆ ಹೇಳಿದೆ. ಆದ್ದರಿಂದ ದೀಪಾವಳಿ ಅಥವಾ ಛಾತ್ ಸಮಯದಲ್ಲಿ ನೀವು ನಿಮ್ಮ ಪಟ್ಟಣಗಳಿಗೆ ಹೋಗಲು ಯೋಜಿಸುತ್ತಿದ್ದರೆ ಅದಕ್ಕೂ ಮೊದಲು ನಿಮ್ಮ ರೈಲಿನ ಮಾಹಿತಿಯನ್ನು ನೀವು ದೃಢೀಕರಿಸಬೇಕು ಎಂದು ಪ್ರಯಾಣಿಕರಿಗೆ ಭಾರತೀಯ ರೈಲ್ವೆ (Indian Railways) ಮನವಿ ಮಾಡಲಾಗಿದೆ.
PM Kisan: ನೀವು ನವೆಂಬರ್ ಕಂತನ್ನು ಪಡೆಯುವ ಮೊದಲು ಈ ಕೆಲಸ ಮಾಡಿ, ಇಲ್ಲವೇ...
ಸರಕು ನಷ್ಟದಿಂದಾಗಿ ಕಳೆದ 1 ತಿಂಗಳಿಂದ 1200 ಕೋಟಿ ರೂಪಾಯಿಗಳ ನಷ್ಟವಾಗಿದೆ ಎಂದು ರೈಲ್ವೆ ಹೇಳಿದೆ, ಜೊತೆಗೆ ಪಂಜಾಬ್ ಮತ್ತು ಜಮ್ಮು ಪ್ರಯಾಣಿಕರ ರೈಲುಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿವೆ.