KTS Tulsi On NDPS Act 1985: 'Drugs ಜೀವನದ ನೋವನ್ನು ಕಡಿಮೆ ಮಾಡುತ್ತದೆ, ಮದ್ಯ-ಗುಟಕಾ ರೀತಿ ಅದಕ್ಕೂ ವಿನಾಯ್ತಿ ಸಿಗಬೇಕು'

KTS Tulsi On NDPS Act 1985: ಕ್ರೂಸ್‌ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಬಂಧನದ ನಂತರ ಡ್ರಗ್ಸ್ ಮತ್ತು ಅದರ ವಿರುದ್ಧ ಕಾನೂನುಗಳ ಚರ್ಚೆಗಳ ನಡುವೆಯೇ ಹಿರಿಯ ವಕೀಲ (Senior Advocate) ಮತ್ತು ರಾಜ್ಯಸಭಾ ಸಂಸದ (Rajya Sabha MP) ಕೆಟಿಎಸ್ ತುಳಸಿ (KTS Tulsi) ಬುಧವಾರ ಇದನ್ನು ಜೀವನದ ಅಗತ್ಯತೆ ಎಂದು ಕರೆದಿದ್ದಾರೆ. 

Written by - Nitin Tabib | Last Updated : Oct 27, 2021, 09:09 PM IST
  • ಸಮತೋಲಿತ ಮಾದಕ ಪ್ರದಾರ್ಥ ಜೀವನದ ಅವಶ್ಯಕತೆ.
  • ಮಧ್ಯ, ತಂಬಾಕು ಹಾಗೂ ಗುಟಕಾಗಳಂತೆ ತೆರಿಗೆ ವಿಧಿಸಿ ಅದಕ್ಕೂ ಕಾನೂನಾತ್ಮಕ ಅನುಮತಿ ನೀಡಬೇಕು.
  • ಇದಕ್ಕಾಗಿ NDPS Act 1985 ಕ್ಕೆ ತಿದ್ದುಪಡಿ ತರಬೇಕು
KTS Tulsi On NDPS Act 1985: 'Drugs ಜೀವನದ ನೋವನ್ನು ಕಡಿಮೆ ಮಾಡುತ್ತದೆ, ಮದ್ಯ-ಗುಟಕಾ ರೀತಿ ಅದಕ್ಕೂ ವಿನಾಯ್ತಿ ಸಿಗಬೇಕು' title=
KTS Tulsi On NDPS Act 1985 (Photo Courtesy - ANI)

KTS Tulsi On NDPS Act 1985: ಕ್ರೂಸ್‌ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಬಂಧನದ ನಂತರ ಡ್ರಗ್ಸ್ ಮತ್ತು ಅದರ ವಿರುದ್ಧ ಕಾನೂನುಗಳ ಚರ್ಚೆಗಳ ನಡುವೆಯೇ ಹಿರಿಯ ವಕೀಲ (Senior Advocate) ಮತ್ತು ರಾಜ್ಯಸಭಾ ಸಂಸದ (Rajya Sabha MP) ಕೆಟಿಎಸ್ ತುಳಸಿ (KTS Tulsi) ಬುಧವಾರ ಇದನ್ನು ಜೀವನದ ಅಗತ್ಯತೆ ಎಂದು ಕರೆದಿದ್ದಾರೆ. ಮದ್ಯ, ಗುಟ್ಕಾ ಮತ್ತು ತಂಬಾಕು ಸೇವನೆಗೆ ಅವಕಾಶ ನೀಡಬೇಕೆಂದು ಅವರು ಪ್ರತಿಪಾದಿಸಿದ್ದಾರೆ. ಅಷ್ಟೇ ಅಲ್ಲ ಡ್ರಗ್ಸ್  ಸಮತೋಲಿತ (Balanced Quantity Of Drugs) ಬಳಕೆ ಜೀವನದ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ. 

ANI ಜೊತೆ ಮಾತನಾಡಿದ ತುಳಸಿ, "ಡ್ರಗ್ಸ್ ಪ್ರತಿಯೊಬ್ಬರ ಜೀವನದ (Drugs Is Need Of Life) ಒಂದು ಭಾಗವಾಗಿದೆ ಮತ್ತು ಅನೇಕ ಸಂದರ್ಭಗಳಲ್ಲಿ ಡ್ರಗ್ಸ್ ಜೀವನದ ನೋವನ್ನು ಕಡಿಮೆ ಮಾಡುತ್ತದೆ. ಮದ್ಯ, ತಂಬಾಕು ಮತ್ತು ಗುಟ್ಕಾ ಕೂಡ ಹಾನಿಯನ್ನುಂಟುಮಾಡುತ್ತದೆ. ಆದರೆ ಈ ಔಷಧಿಗಳ ಸೇವನೆಯನ್ನು ತೆರಿಗೆ ಪಾವತಿಸುವ ಮೂಲಕ ಅನುಮತಿಸಲಾಗಿದೆ. ಹಾಗಾದರೆ ಡ್ರಗ್ಸ್ ಗೆ ಏಕೆ ಅನುಮತಿ ನೀಡಬಾರದು? ಎಂದು ಅವರು ಪ್ರಶ್ನಿಸಿದ್ದಾರೆ.  ತೆರಿಗೆ ಸಂಗ್ರಹದ ನಂತರ ಡ್ರಗ್ಸ್ ಬಳಕೆಯನ್ನು ಅನುಮತಿಸಲಾಗಿದೆ. ಕೆಲವೊಮ್ಮೆ ಡ್ರಗ್ಸ್ ಅನ್ನು ಔಷಧಿಯ ರೂಪದಲ್ಲಿ ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಅದು ಅಗತ್ಯವಿದ್ದರೆ ಬಳಕೆಗೆ ಏಕೆ ಅನುಮತಿಸಬಾರದು? ಎಂದು ತುಳಸಿ ಪ್ರಶ್ನಿಸಿದ್ದಾರೆ.

ಇದನ್ನು ಓದಿ-Mumbai Drugs Case: ಇಂದೂ ಕೂಡ ಆರ್ಯನ್ ಖಾನ್ ಗೆ ಸಿಗಲಿಲ್ಲ ಜಾಮೀನು, ವಿಚಾರಣೆ ನಾಳೆಗೆ ಮುಂದುಡಿದ ಬಾಂಬೆ ಹೈ ಕೋರ್ಟ್

ಸಮತೋಲನ ಪ್ರಮಾಣದಲ್ಲಿ ಮಾದಕ ಪದಾರ್ಥದ ಬಳಕೆಯ ಪರ ವಾದ ಮಂಡಿಸಿರುವ ತುಳಸಿ, NDPS Act 1985ರಲ್ಲಿ ತಿದ್ದುಪಡಿಯ ಅವಶ್ಯಕತೆ ಇದೆ ಎಂದು ತಮ್ಮ ಅಭಿಮತ ವ್ಯಕ್ತಪಡಸಿದ್ದಾರೆ. ಏಕೆಂದರೆ, ಇದರಿಂದ ಹಲವು ಬಾರಿ ಜನರಿಗೆ ಕಿರುಕುಳ ಉಂಟಾಗುತ್ತದೆ ಎಂದು ಅವರು ಹೇಳಿದ್ದಾರೆ. 'ಕಡಿಮೆ ಅಥವಾ ಅಧಿಕ ಪ್ರಮಾಣದ ಡ್ರಗ್ಸ್ ಬಳಕೆಯ ಕುರಿತು NDPS ಕಾಯ್ದೆಯನ್ನು ಹಲವು ಬಾರಿ ದುರುಪಯೋಗಪಡಿಸಿಕೊಳ್ಳಲಾಗುತ್ತದೆ. ಹೀಗಾಗಿ NDPS ಕಾಯ್ದೆಯಲ್ಲಿ ತಿದ್ದುಪಡಿಯ ಅವಶ್ಯಕತೆ ಇದೆ' ಎಂದು ತುಳಸಿ ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ-Sameer Wankhede ಮದುವೆ ಮಾಡಿಸಿದ ಮೌಲಾನಾ ಗಂಭೀರ ಹೇಳಿಕೆ, 15 ವರ್ಷಗಳ ಹಿಂದೆ ನಡೆದಿದ್ದೇನು?

ಆರ್ಯನ್ ಖಾನ್ ಪ್ರಸ್ತುತ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಅಕ್ಟೋಬರ್ 3 ರಂದು ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ (Sharukh Khan) ಅವರ ಪುತ್ರನಾಗಿರುವ ಆರ್ಯನ್ ಖಾನ್ (Aryan Khan) ನನ್ನು ಬಂಧಿಸಲಾಗಿದೆ. ಗೋವಾಗೆ ಹೊರಟಿದ್ದ ಕ್ರೂಜ್ ವೊಂದರ ಮೇಲೆ ಅಕ್ಟೋಬರ್ 2ರಂದು ದಾಳಿ ನಡೆಸಿದ್ದ NCB ತಂಡ ಡ್ರಗ್ಸ್ ಪಾರ್ಟಿ ಬಣ್ಣ ಬಯಲಿಗೆಳೆದಿದೆ. ಈ ಪ್ರಕರಣದಲ್ಲಿ ಇಬ್ಬರು ನೈಜೀರಿಯಾದ ನಾಗರಿಕರು ಸೇರಿದಂತೆ ಒಟ್ಟು 20 ಮಂದಿಯನ್ನು ಬಂಧಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-Sameer Wankhede ಹಾಗೂ Shah Rukh Khan ಈ ಮೊದಲೂ ಕೂಡ ಮುಖಮುಖಿಯಾಗಿದ್ದಾರೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News