VIRAL VIDEO: ಸರ್ಕಾರಿ ಕಾಗದಪತ್ರಗಳಲ್ಲಿನ ತಪ್ಪುಗಳು ಯಾವುದೇ ವ್ಯಕ್ತಿಗೆ ದೊಡ್ಡ ಸಮಸ್ಯೆಯಾಗಬಹುದು. ಹಲವು ಬಾರಿ ಇಲಾಖೆಗಳ ಸುತ್ತು, ಅಧಿಕಾರಿಗಳ ಮೊರೆ ಹೋಗಿ ಹೋಗಿ ಬೇಸತ್ತ ವ್ಯಕ್ತಿ ಒಂದೋ ಭ್ರಷ್ಟಾಚಾರದ ಮೂಲಕ ತನ್ನ ಕೆಲಸ ಮಾಡಿಸಿಕೊಳ್ಳುತ್ತಾನೆ, ಲಂಚ ಕೊಡುತ್ತಾನೆ ಅಥವಾ ಪ್ರತಿಭಟನೆಯ ಹಾದಿ ಹಿಡಿಯುತ್ತಾನೆ. ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಶ್ರೀಕಾಂತ್ ಕುಮಾರ್ ದತ್ತಾ ಕೂಡ ಇದೀಗ ಅಧಿಕಾರಿಗಳ ಎದುರು ಪ್ರತಿಭಟನೆ ಮಾಡಿದ್ದಾರೆ. ಶ್ರೀಕಾಂತ್ ದತ್ತಾ ಅವರ ಪಡಿತರ ಚೀಟಿಯಲ್ಲಿನ ತಪ್ಪು ಅವರ ಈ ಸಿಟ್ಟಿಗೆ ಕಾರಣವಾಗಿದೆ.
ಇದನ್ನೂ ಓದಿ : ಸೋಲಿನ ಭೀತಿಯಿಂದ ಕಾಂಗ್ರೆಸ್‍ನಿಂದ ಅನಗತ್ಯ ರಾಜಕೀಯ- ಕಟೀಲ್ ಆಕ್ರೋಶ
ಶ್ರೀಕಾಂತ್ ಅವರ ಪಡಿತರ ಚೀಟಿಯಲ್ಲಿ ದತ್ತಾ ಬದಲಿಗೆ ಕುತ್ತಾ ಎಂದು ಬರೆಯಲಾಗಿದೆ. ಪಡಿತರ ಚೀಟಿಯಲ್ಲಿನ ಈ ತಪ್ಪಿನಿಂದಾಗಿ ಶ್ರೀಕಾಂತ್ ತೀವ್ರ ಕೋಪಗೊಂಡರು. ಈ ವೇಳೆ ಬಿಡಿಒ ಅವರ ಮುಂದೆ ಪ್ರತಿಭಟನೆ ನಡೆಸಿದರು. ಮತ್ತೊಂದೆಡೆ ಇದೆಲ್ಲ ಕ್ಯಾಮರಾದಲ್ಲಿ ಸೆರೆಯಾಗುತ್ತಿತ್ತು. ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
#WATCH पश्चिम बंगाल: बांकुड़ा में राशन कार्ड में उपनाम के गलत लिखे जाने पर एक व्यक्ति ने सरकारी अधिकारी के सामने 'भौंक' कर विरोध किया गया। प्रदर्शन का वीडियो वायरल हुआ। (19.11) pic.twitter.com/yqKC58NwPg
— ANI_HindiNews (@AHindinews) November 20, 2022
ಈ ಘಟನೆಯ ನಂತರ, ಪಡಿತರ ಚೀಟಿಯಲ್ಲಿ ನನ್ನ ಉಪನಾಮವನ್ನು ಮೂರು ಬಾರಿ ತಪ್ಪಾಗಿ ಬರೆಯಲಾಗಿದೆ ಎಂದು ಶ್ರೀಕಾಂತ್ ದತ್ತಾ ಹೇಳಿದ್ದಾರೆ. ಮೊದಲ ಎರಡು ಬಾರಿ ಶ್ರೀಕಾಂತ್ ಮಂಡಲ್ ಮತ್ತು ಶ್ರೀಕಾಂತಿ ಎಂದು ಬರೆದಿದ್ದರೆ ಈ ಬಾರಿ ಶ್ರೀಕಾಂತ್ ದತ್ತಾ ಎಂಬ ನನ್ನ ಹೆಸರನ್ನು ಶ್ರೀಕಾಂತ್ ಕುತ್ತಾ ಎಂದು ಬರೆಯಲಾಗಿದೆ. ನಾನು ಮತ್ತೆ ಅರ್ಜಿ ಹಾಕಿದೆ, ಅಲ್ಲಿ ನಾನು ಜಂಟಿ BDO ಅವರನ್ನು ನೋಡಿದೆ, ಆಗ ನನ್ನ ಸಿಟ್ಟನ್ನು ಹೊರಹಾಕಿದೆ ಎಂದಿದ್ದಾರೆ. ಆದರೆ ಅವರು ನನ್ನ ಪ್ರಶ್ನೆಗೆ ಉತ್ತರಿಸದೆ ಅಲ್ಲಿಂದ ಹೊರಟು ಹೋದರು. ನಮ್ಮಂತಹ ಜನಸಾಮಾನ್ಯರು ಎಷ್ಟು ಬಾರಿ ಕೆಲಸ ಬಿಟ್ಟು ಈ ರೀತಿಯ ತಪ್ಪುಗಳನ್ನು ತಿದ್ದಲು ಅರ್ಜಿ ಸಲ್ಲಿಸಲು ಹೋಗುತ್ತಾರೆ ಹೇಳಿ! ಎಂದು ಹೇಳಿದರು. ಈ ಸಂಪೂರ್ಣ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ : ಸಿಸಿಟಿವಿ ದೃಶ್ಯಾವಳಿಯಲ್ಲಿ ಅಫ್ತಾಬ್ ಬ್ಯಾಗ್ ಹೊತ್ತೊಯ್ಯುತ್ತಿರುವ ದೃಶ್ಯ ಸೆರೆ.!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.