Shraddha Murder Case Investigation: ಶ್ರದ್ಧಾ ವಾಕರ್ ಹತ್ಯೆ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಕಳೆದ ತಿಂಗಳು ಬೆಳಗ್ಗೆ ಮನೆಯ ಹೊರಗೆ ಬ್ಯಾಗ್ ಸಮೇತ ತಿರುಗಾಡುತ್ತಿದ್ದ ದೃಶ್ಯಗಳು ಸೆರೆಯಾಗಿವೆ. ಸಿಸಿಟಿವಿ ದೃಶ್ಯಾವಳಿಯಿಂದ ಇದು ಬಹಿರಂಗವಾಗಿದೆ. ಈತ ಶ್ರದ್ಧಾ ವಾಕರ್ ಅವರ ದೇಹದ ಭಾಗಗಳನ್ನು ಹೊತ್ತೊಯ್ದಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ದೃಶ್ಯಾವಳಿಗಳನ್ನು ಪರಿಶೀಲಿಸಲು ಪ್ರಯತ್ನಿಸುತ್ತಿದ್ದಾರೆ. ಅಕ್ಟೋಬರ್ 18 ರಂದು ರೆಕಾರ್ಡ್ ಮಾಡಲಾದ ಈ ವಿಡಿಯೋ ಭೀಕರ ಕೊಲೆ ಪ್ರಕರಣದಲ್ಲಿ ದೊರೆತ ಮೊದಲ ಸಿಸಿಟಿವಿ ದೃಶ್ಯವಾಗಿದೆ.
ಈ ವಿಡಿಯೋ ಕ್ಲಿಪ್‌ನಲ್ಲಿ, ಒಬ್ಬ ವ್ಯಕ್ತಿಯು ಕೈಯಲ್ಲಿ ಚೀಲ ಮತ್ತು ರಟ್ಟಿನ ಪೊಟ್ಟಣದೊಂದಿಗೆ ರಸ್ತೆಯಲ್ಲಿ ನಡೆಯುವುದನ್ನು ತೋರಿಸಲಾಗಿದೆ. ಆತನ ಮುಖ ಸ್ಪಷ್ಟವಾಗಿಲ್ಲ, ಆದರೆ ಆತನೇ ಅಫ್ತಾಬ್ ಎಂದು ಪೊಲೀಸರು ಹೇಳಿಕೊಂಡಿದ್ದಾರೆ. Zee News ಸ್ವತಂತ್ರವಾಗಿ ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಾಧ್ಯವಿಲ್ಲ.
ಇದನ್ನೂ ಓದಿ : ಹೆಣ್ಣು ಹಾವಿಗಾಗಿ 5 ಗಂಟೆಗಳ ಕಾಲ ಕಾದಾಡಿದ ಗಂಡು ನಾಗರ ಹಾವುಗಳು!
ಈ ನಡುವೆ ಶ್ರದ್ಧಾ ಅವರ ಫೋನ್ ಬಗ್ಗೆ ದೊಡ್ಡ ಮಾಹಿತಿಯೊಂದು ಹೊರಬಿದ್ದಿದೆ. ಮೂಲಗಳ ಪ್ರಕಾರ, ಅಫ್ತಾಬ್ ದೆಹಲಿ ಪೊಲೀಸರಿಗೆ ಶ್ರದ್ಧಾ ಅವರ ಫೋನ್ ಅನ್ನು ಮಹಾರಾಷ್ಟ್ರದಲ್ಲಿ ಎಲ್ಲೋ ಎಸೆದಿದ್ದೇನೆ ಎಂದು ಹೇಳಿದ್ದಾರೆ. ದೆಹಲಿ ಪೊಲೀಸರು ಸೆಲ್ ಫೋನ್ ಅನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಮೇ 26 ರವರೆಗೆ ಶ್ರದ್ಧಾ ಅವರ ಫೋನ್ ಆನ್ ಆಗಿತ್ತು, ಕೊನೆಯ ಸ್ಥಳ ಶ್ರದ್ಧಾ ಮತ್ತು ಅಫ್ತಾಬ್ ಅವರ ಮನೆಯಾಗಿತ್ತು.
ಶ್ರದ್ಧಾ ಮತ್ತು ಅಫ್ತಾಬ್ ಮೇ ತಿಂಗಳಲ್ಲಿ ಮುಂಬೈನಿಂದ ದೆಹಲಿಗೆ ತೆರಳಿದ್ದರು. ಪೋಲಿಸರ ಪ್ರಕಾರ, ಪೂನಾವಾಲಾ ಮೇ 18 ರ ಸಂಜೆ ತನ್ನ ಸ್ನೇಹಿತೆ ಶ್ರದ್ಧಾ ವಾಕರ್ (27) ಳನ್ನು ಕತ್ತು ಹಿಸುಕಿ ಕೊಂದು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ದಕ್ಷಿಣ ದೆಹಲಿಯ ಕಾಡಿನಲ್ಲಿ ಎಸೆದಿದ್ದಾನೆ.
ಶನಿವಾರ ಬೆಳಗ್ಗೆ ದೆಹಲಿ ಪೊಲೀಸರು ಅಫ್ತಾಬ್ ಅಮೀನ್ ಪೂನಾವಾಲಾ ಅವರ ಫ್ಲಾಟ್‌ನಿಂದ ಚೂಪಾದ ಕತ್ತರಿಸುವ ಉಪಕರಣಗಳನ್ನು ವಶಪಡಿಸಿಕೊಂಡರು, ಅವರು ಶ್ರದ್ಧಾ ವಾಕರ್ ಅವರ ದೇಹವನ್ನು ಕತ್ತರಿಸಲು ಬಳಸಿರಬಹುದು ಎಂದು ಅವರು ಶಂಕಿಸಿದ್ದಾರೆ.
ಇದನ್ನೂ ಓದಿ : “ಮೋದಿ ಸರ್ಕಾರದಿಂದಾಗಿ ಶ್ರದ್ಧಾ ಪ್ರಕರಣದಂತೆ ಅನೇಕ ಘಟನೆಗಳು ಸಂಭವಿಸಿವೆ”
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.