ಅಹಮದಾಬಾದ್‌ನಲ್ಲಿ ಮತಚಲಾಯಿಸಿದ ಎಲ್.ಕೆ.ಅಡ್ವಾಣಿ, ಅರುಣ್ ಜೇಟ್ಲಿ

ಅಹಮದಾಬಾದ್ ನ ಶಾಪುರದ ಹಿಂದಿ ಶಾಲೆಯ ಮತಗಟ್ಟೆಯಲ್ಲಿ ಎಲ್.ಕೆ.ಅಡ್ವಾಣಿ ಮತಚಲಾಯಿಸಿದರೆ, ಎಸ್ ಜಿ ಹೈವೇಯಲ್ಲಿರುವ ಕಾಲೇಜೊಂದರಲ್ಲಿ ಸ್ಥಾಪಿತವಾದ ಮತಗಟ್ಟೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮತಚಲಾಯಿಸಿದರು.  

Last Updated : Apr 23, 2019, 02:50 PM IST
ಅಹಮದಾಬಾದ್‌ನಲ್ಲಿ ಮತಚಲಾಯಿಸಿದ ಎಲ್.ಕೆ.ಅಡ್ವಾಣಿ, ಅರುಣ್ ಜೇಟ್ಲಿ title=
Pic Courtesy: ANI

ಅಹಮದಾಬಾದ್: ಲೋಕಸಭಾ ಚುನಾವಣೆಗೆ ಇಂದು ಮೂರನೇ ಹಂತದ ಮತದಾನ ನಡೆಯುತ್ತಿದ್ದು, ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಕೇಂದ್ರ ಸಚಿವ ಅರುಣ್ ಜೇಟ್ಲಿ ಗುಜರಾತಿನ ಅಹಮದಾಬಾದ್ ನಲ್ಲಿ ಮತ ಚಲಾಯಿಸಿದರು.

ಅಹಮದಾಬಾದ್ ನ ಶಾಪುರದ ಹಿಂದಿ ಶಾಲೆಯ ಮತಗಟ್ಟೆಯಲ್ಲಿ ಎಲ್.ಕೆ.ಅಡ್ವಾಣಿ ಮತಚಲಾಯಿಸಿದರೆ, ಎಸ್ ಜಿ ಹೈವೇಯಲ್ಲಿರುವ ಕಾಲೇಜೊಂದರಲ್ಲಿ ಸ್ಥಾಪಿತವಾದ ಮತಗಟ್ಟೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮತಚಲಾಯಿಸಿದರು.

ಗುಜರಾತಿನ 26 ಲೋಕಸಭಾ ಸ್ಥಾನಗಳಿಗೆ ಒಂದೇ ಹಂತದಲ್ಲಿ ಇಂದು ಮತದಾನ ನಡೆಯುತ್ತಿದೆ. ರಾಜ್ಯದ 4,51,52,373 ಕೋಟಿ ಮತದಾರರು 371 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಗುಜರಾತಿನ ಎಲ್ಲಾ 26 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಒಟ್ಟು 7 ಹಂತಗಳಲ್ಲಿ ನಡೆಯುತ್ತಿರುವ ಚುನಾವಣೆಯ ಮತಎಣಿಕೆ ಮೇ 23ರಂದು ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ.

Trending News