Lockdown-Unlock in India: ಜೂನ್ 1 ರಿಂದ ಎಲ್ಲೆಲ್ಲಿ ಅನ್ಲಾಕ್, ಯಾವ ರಾಜ್ಯದಲ್ಲಿ ಮುಂದುವರೆಯುತ್ತೆ ಲಾಕ್‌ಡೌನ್!

Lockdown-Unlock in India:  ಕರೋನಾದ ಎರಡನೇ ತರಂಗವು ದೇಶದ ಅನೇಕ ರಾಜ್ಯಗಳಲ್ಲಿ ದುರ್ಬಲಗೊಳ್ಳಲು ಪ್ರಾರಂಭಿಸಿದೆ. ಈ ಹಿನ್ನಲೆಯಲ್ಲಿ ಜೂನ್ 1 ರಿಂದ ಹಲವು ರಾಜ್ಯಗಳಲ್ಲಿ ಅನ್ಲಾಕಿಂಗ್ ಪ್ರಕ್ರಿಯೆಯು ಪ್ರಾರಂಭವಾಗಲಿದೆ, ಆದರೆ ದೇಶದ ಕೆಲವು ರಾಜ್ಯಗಳಲ್ಲಿ ಲಾಕ್‌ಡೌನ್ ಮುಂದುವರೆಯಲಿದೆ. ಎಲ್ಲೆಲ್ಲಿ ಲಾಕ್‌ಡೌನ್ ಕೊನೆಗೊಂಡಿದೆ ಮತ್ತು ಎಲ್ಲೆಲ್ಲಿ ಮುಂದುವರೆಯಲಿದೆ ಎಂದು ತಿಳಿಯಿರಿ.

Written by - Yashaswini V | Last Updated : May 29, 2021, 03:30 PM IST
  • ಕರೋನಾವೈರಸ್ ಹಿನ್ನಲೆಯಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಲಾಕ್‌ಡೌನ್ ಜಾರಿಯಲ್ಲಿದೆ
  • ಇದೀಗ ದೇಶದ ಹಲವು ರಾಜ್ಯಗಳಲ್ಲಿ ಕರೋನಾ ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದಿರುವ ಹಿನ್ನಲೆಯಲ್ಲಿ ಆ ರಾಜ್ಯಗಳು ಅನ್ಲಾಕ್ (Unlock) ಪ್ರಕ್ರಿಯೆಯತ್ತ ಮುಖ ಮಾಡಿವೆ
  • ದೇಶಾದ್ಯಂತ ಯಾವ ರಾಜ್ಯಗಳಲ್ಲಿ ಅನ್ಲಾಕ್ ಘೋಷಿಸಲಾಗಿದೆ ತಿಳಿಯಿರಿ
Lockdown-Unlock in India: ಜೂನ್ 1 ರಿಂದ ಎಲ್ಲೆಲ್ಲಿ ಅನ್ಲಾಕ್,  ಯಾವ ರಾಜ್ಯದಲ್ಲಿ ಮುಂದುವರೆಯುತ್ತೆ ಲಾಕ್‌ಡೌನ್! title=
Lockdown-Unlock in India:

Lockdown-Unlock in India: ದೇಶದಲ್ಲಿ ಕರೋನದ ಎರಡನೇ ಅಲೆಯ (Corona Second Wave) ಅಬ್ಬರ ಕೊಂಚ ತಗ್ಗಿದೆ. ಶನಿವಾರ, ದೇಶದಲ್ಲಿ ಕರೋನಾ ವೈರಸ್ ಸೋಂಕಿನ ಪ್ರಕರಣಗಳು ಗಮನಾರ್ಹವಾಗಿ ಕಡಿಮೆಯಾಗಿವೆ. ದೆಹಲಿಯಲ್ಲಿ, ದೈನಂದಿನ ಕರೋನಾ ಪ್ರಕರಣಗಳ ಸಂಖ್ಯೆ 1000 ಕ್ಕಿಂತ ಕಡಿಮೆಯಾಗಿದೆ, ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರದಲ್ಲಿಯೂ ಕಳೆದ 24 ಗಂಟೆಗಳಲ್ಲಿ ಹೊಸ ಕರೋನಾ ರೋಗಿಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.

ಕರೋನಾವೈರಸ್ ಹಿನ್ನಲೆಯಲ್ಲಿ ದೆಹಲಿ ಮತ್ತು ಉತ್ತರ ಪ್ರದೇಶ ಸೇರಿದಂತೆ ದೇಶದ 10 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಲಾಕ್‌ಡೌನ್ ಜಾರಿಯಲ್ಲಿದೆ. ಇದೀಗ ದೇಶದ ಹಲವು ರಾಜ್ಯಗಳಲ್ಲಿ ಕರೋನಾ ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದಿರುವ ಹಿನ್ನಲೆಯಲ್ಲಿ ಆ ರಾಜ್ಯಗಳು ಅನ್ಲಾಕ್ (Unlock) ಪ್ರಕ್ರಿಯೆಯತ್ತ ಮುಖ ಮಾಡಿವೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಮೇ 31 ರಿಂದ ರಾಜ್ಯದಲ್ಲಿ ಅನ್ಲಾಕ್ ಪ್ರಕ್ರಿಯೆಯನ್ನು ಪ್ರಾರಂಭವಾಗಲಿದೆ ಎಂದು ಘೋಷಿಸಿದ್ದಾರೆ. ಅದಕ್ಕೂ ಮೊದಲೇ ಮಧ್ಯಪ್ರದೇಶದಲ್ಲಿ (Madhya Pradesh) ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರವು ಜೂನ್ 1 ರಿಂದ ರಾಜ್ಯದಲ್ಲಿ ಅನ್ಲಾಕ್ ಜಾರಿಗೆ ತರಲು ಆದೇಶಿಸಿದೆ. ಅದೇ ಸಮಯದಲ್ಲಿ, ಜೂನ್ 1 ರಿಂದ ಜಾರ್ಖಂಡ್-ಉತ್ತರ ಪ್ರದೇಶ -ಬಿಹಾರದಲ್ಲಿ ಕೂಡ ಲಾಕ್‌ಡೌನ್ ಹಿಂಪಡೆಯುವ ನಿರೀಕ್ಷೆಯಿದೆ.

ಇದನ್ನೂ ಓದಿ - Lockdown-Unlock Latest Update: ಮೇ 31 ರಿಂದ ಅನ್ಲಾಕ್ ಆಗಲಿದೆ ರಾಷ್ಟ್ರ ರಾಜಧಾನಿ

>> ದೆಹಲಿಯಲ್ಲಿ, ಸೋಮವಾರದಿಂದ ಅನ್ಲಾಕ್ ಅಡಿಯಲ್ಲಿ ನಿರ್ಮಾಣ ಕಾರ್ಯಗಳು ಮತ್ತು ಕಾರ್ಖಾನೆಗಳನ್ನು ತೆರೆಯಲು ಆದೇಶ ನೀಡಲಾಗಿದೆ. ಉತ್ತರ ಪ್ರದೇಶದಲ್ಲೂ ಕೆಲವು ರಿಯಾಯಿತಿಯೊಂದಿಗೆ ಅನ್ಲಾಕ್ ಘೋಷಿಸಬಹುದು. ಉತ್ತರ ಪ್ರದೇಶದಲ್ಲಿ ಹೊರ ರಾಜ್ಯಗಳಿಗೆ ಬಸ್‌ಗಳ ಸಂಚಾರವನ್ನು ಇನ್ನೂ ನಿಷೇಧಿಸಲಾಗಿದೆ. ಸಾಪ್ತಾಹಿಕ ಮಾರುಕಟ್ಟೆಗಳು ಮುಚ್ಚಲ್ಪಟ್ಟಿವೆ. ಮಾರುಕಟ್ಟೆಗಳಲ್ಲಿ ಹೆಚ್ಚಿನ ಅಂಗಡಿಗಳನ್ನು ಸಹ ಮುಚ್ಚಲಾಗಿದೆ, ಮೊದಲ ಹಂತದ ಅನ್ಲಾಕ್ ಅಡಿಯಲ್ಲಿ ಕೆಲವು ರಿಯಾಯಿತಿಯೊಂದಿಗೆ ತೆರೆಯಬಹುದು ಎಂದು ನಿರೀಕ್ಷಿಸಲಾಗಿದೆ.

>> ಪಂಜಾಬ್‌ನಲ್ಲಿ, ಕರೋನಾಗೆ ಸಂಬಂಧಿಸಿದ ನಿರ್ಬಂಧಗಳು ಜೂನ್ 10 ರವರೆಗೆ ಜಾರಿಯಲ್ಲಿರುತ್ತವೆ. ಆದರೆ ಕೋವಿಡ್ (Covid 19) ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಖಾಸಗಿ ವಾಹನಗಳಲ್ಲಿನ ಪ್ರಯಾಣಿಕರ ಸಂಖ್ಯೆಯ ಮಿತಿಯನ್ನು ತೆಗೆದುಹಾಕಲಾಗಿದೆ. ಚಂಡೀಗಢ ಆಡಳಿತವು ರಾತ್ರಿ ಮತ್ತು ವಾರಾಂತ್ಯದ ಕರ್ಫ್ಯೂ ಅನ್ನು ಮೇ 31 ರವರೆಗೆ ವಿಸ್ತರಿಸಿದೆ.

>> ರಾಜಸ್ಥಾನ ಸರ್ಕಾರ ರಾಜ್ಯದಲ್ಲಿ ಜೂನ್ 8 ರವರೆಗೆ ಲಾಕ್‌ಡೌನ್ (Lockdown) ಅವಧಿಯನ್ನು ವಿಸ್ತರಿಸಿದೆ. ಆದಾಗ್ಯೂ, ಸೋಂಕು ಕಡಿಮೆಯಾದ ಜಿಲ್ಲೆಗಳಲ್ಲಿ, ಜೂನ್ 1 ರಿಂದ ವ್ಯಾಪಾರ ಚಟುವಟಿಕೆಗಳಲ್ಲಿ ರಿಯಾಯಿತಿ ನೀಡಬಹುದು ಎನ್ನಲಾಗುತ್ತಿದೆ.

>> ಹರಿಯಾಣದಲ್ಲಿ ಮೇ 31 ರವರೆಗೆ ಲಾಕ್‌ಡೌನ್ ಇದೆ. ಇಲ್ಲಿಯೂ ಸಹ, ಲಾಕ್‌ಡೌನ್ ಅನ್ನು ಹೆಚ್ಚಿಸುವ ಕುರಿತು ಒಂದೆರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಬಹುದು. ಹರಿಯಾಣ ಈಗಾಗಲೇ ದಿನವಿಡೀ ಅಂಗಡಿಗಳನ್ನು ತೆರೆಯುವುದು ಸೇರಿದಂತೆ ಅನೇಕ ರಿಯಾಯಿತಿಗಳನ್ನು ಘೋಷಿಸಿದೆ.

ಇದನ್ನೂ ಓದಿ - MDM Scheme: ಸಿಹಿ ಸುದ್ದಿ! 11.8 ಕೋಟಿ ವಿದ್ಯಾರ್ಥಿಗಳ ಖಾತೆಗೆ ಸರ್ಕಾರದ ಹಣ

>>  ಬಿಹಾರ (Bihar) ದಲ್ಲೂ ಜೂನ್ 1 ರವರೆಗೆ ಲಾಕ್‌ಡೌನ್ ವಿಧಿಸಲಾಗಿದೆ, ಆದರೆ ಸಿಎಂ ನಿತೀಶ್ ಕುಮಾರ್ ಜೂನ್ 1 ರಿಂದ ಅನ್ಲಾಕ್ (Unlock) ಘೋಷಿಸುವ ಬಗ್ಗೆ ಸೂಚನೆಗಳನ್ನು ನೀಡಿದ್ದಾರೆ.

>> ಜಾರ್ಖಂಡ್‌ನಲ್ಲಿ ಲಾಕ್‌ಡೌನ್‌ನಂತಹ ನಿರ್ಬಂಧಗಳನ್ನು ಮೇ 3 ರವರೆಗೆ ವಿಸ್ತರಿಸಲಾಗಿದೆ. ಕರೋನಾದ ಕ್ಷೀಣಿಸುತ್ತಿರುವ ಪ್ರಕರಣಗಳ ದೃಷ್ಟಿಯಿಂದ, ಮೇ 1 ರಂದು ಇಲ್ಲಿ ಅನ್ಲಾಕ್ ಘೋಷಿಸಬಹುದು.

>> ಉತ್ತರಾಖಂಡದಲ್ಲಿ, ಲಾಕ್‌ಡೌನ್ ನಿರ್ಬಂಧಗಳನ್ನು ಜೂನ್ 01 ರವರೆಗೆ ವಿಸ್ತರಿಸಲಾಗಿದೆ. ಆದರೆ ಮೇ 28 ರಿಂದ ಬೆಳಿಗ್ಗೆ 8-12 ರವರೆಗೆ ಜನರಿಗೆ ಅಡೆತಡೆಯಿಲ್ಲದೆ ಶಾಪಿಂಗ್ ಮಾಡಲು ಸ್ವಾತಂತ್ರ್ಯ ನೀಡಲಾಗಿದೆ.

>> ಹಿಮಾಚಲ ಪ್ರದೇಶದಲ್ಲಿ ಲಾಕ್‌ಡೌನ್ ಅನ್ನು ಮೇ 31 ರವರೆಗೆ ವಿಸ್ತರಿಸಲಾಗಿದ್ದು, ಈ ಮೊದಲು ಮೇ 26 ರವರೆಗೆ ಲಾಕ್‌ಡೌನ್ ವಿಧಿಸಲಾಗಿತ್ತು.

>>  ಜಮ್ಮು ಮತ್ತು ಕಾಶ್ಮೀರ (Jammu and Kashmir) ಆಡಳಿತವೂ ಮೇ 31 ರವರೆಗೆ ಕರ್ಫ್ಯೂ ವಿಸ್ತರಿಸಿದೆ.

>> ಒಡಿಶಾದಲ್ಲಿ, ಜೂನ್ 1 ರವರೆಗೆ ಲಾಕ್‌ಡೌನ್ ಮುಂದುವರೆಯಲಿದೆ. ಈ ರಾಜ್ಯದಲ್ಲಿ ಮೇ 5 ರಂದು ಮೊದಲಿಗೆ ಎರಡು ವಾರಗಳ ಲಾಕ್‌ಡೌನ್ ವಿಧಿಸಿತ್ತು. ಬಳಿಕ ಕರೋನಾ ಉಲ್ಬಣಗೊಂಡ ಹಿನ್ನಲೆಯಲ್ಲಿ ಇದನ್ನು ಇನ್ನೂ ಎರಡು ವಾರಗಳವರೆಗೆ ವಿಸ್ತರಿಸಲಾಗಿದೆ.

ಇದನ್ನೂ ಓದಿ - Vaccination ಹಾಕಿಸಿಲ್ಲ ಅಂದ್ರೆ ಸಂಬಳವಿಲ್ಲ: ಸರ್ಕಾರಿ ನೌಕರರಿಗೆ ವಿಚಿತ್ರ ನಿಯಮ

>> ಗುಜರಾತ್ 36 ನಗರಗಳಲ್ಲಿ ರಾತ್ರಿ ಕರ್ಫ್ಯೂ (Night Curfew) ಮೇ 28 ರವರೆಗೆ ವಿಸ್ತರಿಸಿದ್ದರು. ಆದರೆ ಬೆಳಿಗ್ಗೆ  9 ರಿಂದ ಸಂಜೆ 3 ರವರೆಗೆ ಅಂಗಡಿಗಳನ್ನು ಮತ್ತು ಇತರ ಕೆಲವು ಚಟುವಟಿಕೆಗಳಿಗೆ ಅನುವು ಮಾಡಿಕೊಡಲಾಗಿತ್ತು.

>> ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೂನ್ 15 ರವರೆಗೆ ರಾಜ್ಯದಲ್ಲಿ  ಲಾಕ್‌ಡೌನ್ ಮುಂದುವರೆಯುವುದಾಗಿ ಘೋಷಿಸಿದ್ದಾರೆ. ಈ ಮೊದಲು ಮೇ 16 ರಿಂದ 30 ರವರೆಗೆ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಇತ್ತು.

>> ಛತ್ತೀಸ್‌ಗಢದ ಎಲ್ಲಾ 28 ಜಿಲ್ಲೆಗಳಲ್ಲಿ ಮೇ 31 ರವರೆಗೆ ಲಾಕ್‌ಡೌನ್ ಜಾರಿಯಾಗಿದೆ. ರಾಯಪುರ, ಬಿಲಾಸ್ಪುರ್ ಸೇರಿದಂತೆ 8% ಕ್ಕಿಂತ ಕಡಿಮೆ ಸೋಂಕಿನ ಪ್ರಮಾಣ ಹೊಂದಿರುವ 9 ಜಿಲ್ಲೆಗಳನ್ನು ಲಾಕ್‌ಡೌನ್ ಸಡಿಲಿಸಲಾಗಿದೆ.

 >> ಕೇರಳದಲ್ಲಿ ಇನ್ನೂ ಕೂಡ ಕರೋನಾವೈರಸ್ ಪ್ರಕರಣಗಳ ಸಂಖ್ಯೆ ತಹಬದಿಗೆ ಬಾರದ ಕಾರಣ ಲಾಕ್‌ಡೌನ್ ವಿಸ್ತರಿಸಲಾಗಿದೆ.

>> ಕರ್ನಾಟಕದಲ್ಲಿ ಕೂಡ ಲಾಕ್‌ಡೌನ್ ಅನ್ನು ಎರಡು ವಾರಗಳವರೆಗೆ ವಿಸ್ತರಿಸಿದೆ. ಇಲ್ಲಿ, ಮೇ 24 ರಿಂದ ಜೂನ್ 7 ರವರೆಗೆ ಲಾಕ್‌ಡೌನ್ ಮುಂದುವರಿಯಲಿದೆ.

>>  ತಮಿಳುನಾಡಿನ ಇನ್ನೊಂದು ವಾರ ಜೂನ್ 7 ರವರೆಗೆ ಲಾಕ್‌ಡೌನ್ ಅನ್ನು ವಿಸ್ತರಿಸಲಾಗಿದೆ.

ಇದನ್ನೂ ಓದಿ - Rare Notes: ಲಕ್ಷಗಳಲ್ಲಿ ಮಾರಾಟವಾಗುತ್ತೆ 1, 2, 5, 10, 100 ರೂಪಾಯಿ ನೋಟುಗಳು, ಅವುಗಳ ವಿಶೇಷತೆ ಏನು ಗೊತ್ತೇ!

>>  ಪುದುಚೇರಿಯಲ್ಲಿ ಮೇ 31 ರವರೆಗೆ ಲಾಕ್‌ಡೌನ್ ಜಾರಿಯಲ್ಲಿದೆ.

>>  ತೆಲಂಗಾಣದಲ್ಲಿಯೂ ಮೇ 30 ರವರೆಗೆ ಲಾಕ್‌ಡೌನ್ ವಿಧಿಸಲಾಗಿದೆ.

>>  ಆಂಧ್ರಪ್ರದೇಶ ಸರ್ಕಾರವು ಮೇ 31 ರವರೆಗೆ ಕರ್ಫ್ಯೂ ವಿಸ್ತರಿಸಿದೆ.

>>  ಮಹಾರಾಷ್ಟ್ರ (Maharashtra) ಸರ್ಕಾರವು ಏಪ್ರಿಲ್ 14 ರಂದು ರಾಜ್ಯದಲ್ಲಿ 15 ದಿನಗಳ ಲಾಕ್ ಡೌನ್ ಘೋಷಿಸಿತು, ಇದು ಪ್ರಸ್ತುತ ಜೂನ್ 01 ರವರೆಗೆ ಜಾರಿಯಲ್ಲಿದೆ. ಕರೋನಾ ಪ್ರಕರಣಗಳು ಕಡಿಮೆ ಇರುವ ಕೆಲವು ಜಿಲ್ಲೆಗಳಲ್ಲಿ ಕೆಲ ವಿನಾಯಿತಿಯೊಂದಿಗೆ ಲಾಕ್‌ಡೌನ್‌ನಂತಹ ನಿರ್ಬಂಧಗಳನ್ನು 15 ದಿನಗಳವರೆಗೆ ವಿಸ್ತರಿಸಲಾಗಿದೆ. ಶೇಕಡಾ 10 ಕ್ಕಿಂತ ಹೆಚ್ಚು ಸಕಾರಾತ್ಮಕ ದರವನ್ನು ಹೊಂದಿರುವ 21 ಜಿಲ್ಲೆಗಳಲ್ಲಿ ಲಾಕ್‌ಡೌನ್‌ ತೆಗೆಯುವ ಪ್ರಶ್ನೆಯೇ ಇಲ್ಲ ಎನ್ನಲಾಗಿದೆ.

>> ಗೋವಾದಲ್ಲಿ ಮೇ 31 ರವರೆಗೆ ಕರ್ಫ್ಯೂ ಜಾರಿಯಲ್ಲಿದೆ.

>> ಅಸ್ಸಾಂ, ಸಿಕ್ಕಿಂ, ಮಿಜೋರಾಂ, ಮೇ 31 ರವರೆಗೆ ಸಂಪೂರ್ಣ ಲಾಕ್‌ಡೌನ್ ವಿಧಿಸಿವೆ.

>> ಅರುಣಾಚಲ ಪ್ರದೇಶದ ಹಲವು ಪ್ರದೇಶಗಳಲ್ಲಿ ಜೂನ್ 7 ರವರೆಗೆ ಮತ್ತು ನಾಗಾಲ್ಯಾಂಡ್‌ನಲ್ಲಿ ಜೂನ್ 11 ರವರೆಗೆ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿರಲಿದೆ.

>> ಮಣಿಪುರದಲ್ಲಿ ಮತ್ತು ಮೇಘಾಲಯದ ಹೆಚ್ಚು ಪ್ರಭಾವಕ್ಕೊಳಗಾದ ಪೂರ್ವ ಖಾಸಿ ಬೆಟ್ಟಗಳ ಜಿಲ್ಲೆಯಲ್ಲಿ ಮೇ 31 ರವರೆಗೆ ಲಾಕ್‌ಡೌನ್ ಜಾರಿಯಲ್ಲಿದೆ.

>> ತ್ರಿಪುರಾದಲ್ಲಿ ಕೋವಿಡ್ -19 ಕರ್ಫ್ಯೂ ಅನ್ನು ಜೂನ್ 5 ರವರೆಗೆ ವಿಸ್ತರಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News